ಚಿಕ್ಕಬಳ್ಳಾಪುರದಲ್ಲಿ ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿಯ ಅಂತರ್‌ಧರ್ಮೀಯ ವಿವಾಹ ನಡೆದಿದ್ದು, ಕುಟುಂಬದ ವಿರೋಧದ ಹಿನ್ನೆಲೆಯಲ್ಲಿ ನವವಿವಾಹಿತ ಜೋಡಿ ಪೊಲೀಸ್ ಭದ್ರತೆ ಕೋರಿದೆ. ನಾಲ್ಕು ವರ್ಷಗಳ ಪ್ರೀತಿಯ ನಂತರ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹ ನೆರವೇರಿದೆ.
Chikkaballapur ಜಿಲ್ಲೆಯಲ್ಲಿ ಅಂತರ್ ಧರ್ಮೀಯ ವಿವಾಹ ನಡೆದಿದ್ದು, ನವವಿವಾಹಿತ ಜೋಡಿ ಈಗ ಪೊಲೀಸ್ ಭದ್ರತೆಗೆ ಮನವಿ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ಹಿಂದೂ ಹುಡುಗನ ಜೊತೆ ಮುಸ್ಲಿಂ ಸಮುದಾಯದ ಹುಡುಗಿ ಮದುವೆ ನಡೆದಿದೆ. ಜಿಲ್ಲೆಯ ಪೋಶೆಟ್ಟಿಹಳ್ಳಿ ಬಳಿಯ ದೇವಸ್ಥಾನವೊಂದರಲ್ಲಿ ಮದುವೆ ನಡೆದಿದೆ.
25
ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮಕ್ಕೆ ಸೇರಿದ ನಜ್ಮಾ ಎಂಬ ಯುವತಿ ಹಿಂದೂ ಹುಡುಗನನ್ನು ವರಿಸಿದ್ದಾಳೆ. ಕಳೆದ ನಾಲ್ಕು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿತ್ತು ಎಂದು ವರದಿಗಳಿ ತಿಳಿಸಿವೆ.
35
ಚಿಕ್ಕಬಳ್ಳಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಅಂದಿನಿಂದಲೂ ಇವರು ಸಮಾಜಕ್ಕೆ ಗೊತ್ತಾಗದ ರೀತಿಯಲ್ಲಿ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ
ಆದರೆ, ಹಿಂದು ಹುಡುಗನ ಜೊತೆ ಮದುವೆಯಾಗಲಿ ನಜ್ಮಾ ಮನೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಬೇರೆ ಹುಡುಗನೊಂದಿಗೆ ಮದುವೆ ಫಿಕ್ಸ್ ಆಗುವ ಮುನ್ನವೇ ಹಿಂದು ಹುಡುಗನ ಜೊತೆ ನಜ್ಮಾ ಹಸೆಮಣೆ ಏರಿದ್ದಾರೆ.
55
ಪ್ರಿಯಕರ ಹರೀಶ್ ಬಾಬು ಜೊತೆ ನಜ್ಮಾ ಮದುವೆ ಪೋಶೆಟ್ಟಿಹಳ್ಳಿ ಬಳಿಕ ದೇವಸ್ಥಾನದಲ್ಲಿ ಬಹಳ ಸರಳವಾಗಿ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕು ಯಾಪಲಹಳ್ಳಿ ಗ್ರಾಮದ ಹರೀಶ್ ಖುಷಿಯಿಂದ ವಿವಾಹ ಜೀವನಕಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಹುಡುಗಿಯ ಮನೆಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಅನ್ಯ ಧರ್ಮ ಮದುವೆ ಹಿನ್ನೆಲೆ ರಕ್ಷಣೆ ಕೋರಿ ನವ ಜೋಡಿ ಪೊಲೀಸರ ಮೊರೆ ಹೋಗಿದೆ.