Bengaluru To Belagavi ವಂದೇ ಭಾರತ್‌ ರೈಲು ಪ್ರಯಾಣ ತಪ್ಪಿಸಿಕೊಂಡವರಿಗೆ ಹಣ ರೀಫಂಡ್‌

Published : Aug 02, 2026, 08:09 AM IST

Bengaluru Belagavi Vande Bharat Express train: ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾವಣೆ ಕುರಿತು ಕೆಲವು ಪ್ರಯಾಣಿಕರಿಗೆ ತಪ್ಪು ಸಂದೇಶ ರವಾನೆಯಾದ ಕಾರಣ, ಹಲವರು ರೈಲು ತಪ್ಪಿಸಿಕೊಂಡಿದ್ದಾರೆ.

PREV
14
ರೈಲ್ವೆ ಇಲಾಖೆ

ಬೆಂಗಳೂರು: ಬೆಂಗಳೂರಿನಿಂದ ಬೆಳಗಾವಿ ನಡುವೆ ಸೇವೆ ನೀಡುವ ವಂದೇ ಭಾರತ್‌ ರೈಲು ವೇಳಾಪಟ್ಟಿಗೆ ಸಂಬಂಧಿಸಿದಂತೆ ಉಂಟಾದ ಗೊಂದಲಕ್ಕೆ ಕ್ಷಮೆ ಕೋರಿರುವ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ, ರೈಲು ಪ್ರಯಾಣವನ್ನು ತಪ್ಪಿಸಿಕೊಂಡ ಪ್ರಯಾಣಿಕರ ಟಿಕೆಟ್‌ ದರ ಹಿಂದಿರುಗಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

24
2.30ರ ಬದಲಿಗೆ ಸಂಜೆ 5.30ರ ಸಮಯ

ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್‌ ರೈಲು ಶನಿವಾರ ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ತೆರಳಬೇಕಿತ್ತು. ಆದರೆ, ವಂದೇ ಭಾರತ್‌ ರೈಲಿನ ವೇಳಾಪಟ್ಟಿ ಬದಲಾಗಿದ್ದು 2.30ರ ಬದಲಿಗೆ ಸಂಜೆ 5.30ಕ್ಕೆ ಹೊರಡಲಿದೆ ಎಂದು ಕೆಲ ಪ್ರಯಾಣಿಕರ ಮೊಬೈಲ್‌ಗೆ ಸಂದೇಶ ಬಂದಿದೆ. ಅದರಿಂದಾಗಿ ಪ್ರಯಾಣಿಕರು ಸಂಜೆ ವೇಳೆಗೆ ರೈಲು ನಿಲ್ದಾಣಕ್ಕೆ ತೆರಳಿದ್ದಾರೆ.

34
ನೈರುತ್ಯ ರೈಲ್ವೆ ಬೆಂಗಳೂರು

ವಂದೇ ಭಾರತ್‌ ರೈಲು ಮಾತ್ರ ನಿಗದಿತ ವೇಳಾಪಟ್ಟಿಯಂತೆ ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ಹೊರಟಿದೆ. ಇದರಿಂದಾಗಿ ಪ್ರಯಾಣಿಕರಿಗೆ ಸಮಸ್ಯೆಯುಂಟಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಗಮನಕ್ಕೆ ತಂದಿದ್ದಾರೆ.

44
ಟಿಕೆಟ್‌ ಹಣ ಹಿಂದಿರುಗಿಸುವ ಭರವಸೆ

ಪ್ರಯಾಣಿಕರ ಸಮಸ್ಯೆಗೆ ಪ್ರತಿಕ್ರಿಯಿಸಿರುವ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ, ತಾಂತ್ರಿಕ ಕಾರಣದಿಂದಾಗಿ ಕೆಲವರಿಗೆ ಸಂದೇಶ ರವಾನೆಯಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಟಿಕೆಟ್‌ ಹಣ ಹಿಂದಿರುಗಿಸುವುದಾಗಿ ತಿಳಿಸಿದೆ. ಈ ಅಡಚಣೆ ಬಗ್ಗೆ ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories