Siddaramaiah Shopping: ಮಂತ್ರಿ ಮಾಲ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಪಿಂಗ್‌!

Published : Aug 01, 2026, 05:55 AM IST

Siddaramaiah surprised visit mantri sqare mall: ಸಿಎಂ ಆಗಿದ್ದಾಗ ಸದಾ ಬ್ಯುಸಿಯಾಗಿರುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಈಗ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ಗೆ ಆಗಮಿಸಿ ಸಾಮಾನ್ಯರಂತೆ ಶಾಪಿಂಗ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

PREV
14
Mantri Sqare: ಮಂತ್ರಿ ಮಾಲ್‌ನಲ್ಲಿ ಮಾಜಿ ಸಿಎಂ ಶಾಪಿಂಗ್!

ಸಿಎಂ ಆಗಿದ್ದಾಗ ಸದಾ ಬ್ಯುಸಿಯಾಗಿರುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಈಗ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ಗೆ ಆಗಮಿಸಿ ಸಾಮಾನ್ಯರಂತೆ ಶಾಪಿಂಗ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

24
ಮಂತ್ರಿ ಮಾಲ್‌ನಲ್ಲಿ ಮಾಜಿ ಸಿಎಂ ಶಾಪಿಂಗ್

ನಿನ್ನೆ ತಮ್ಮ ಆಪ್ತರು, ಭದ್ರತಾ ಸಿಬ್ಬಂದಿಯೊಂದಿಗೆ ಮಂತ್ರಿಮಾಲ್‌ಗೆ ಆಗಮಿಸಿದ ಸಿದ್ದರಾಮಯ್ಯ ಅವರು ಸಾಮಾನ್ಯರಂತೆ ಚೆಕಪ್ ಮುಗಿಸಿ ಒಳ ನಡೆದುಬರುತ್ತಿದ್ದಂತೆ ಜನರು ಮಾಜಿ ಸಿಎಂರನ್ನು ಕಂಡು ಅಚ್ಚರಿಗೊಂಡರು.

34
ಮಂತ್ರಿ ಮಾಲ್‌ನಲ್ಲಿ ಸಿದ್ದರಾಮಯ್ಯ ಶಾಪಿಂಗ್

ವಾರಂತ್ಯ ಹಿನ್ನೆಲೆ ನಿನ್ನೆ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಮಂತ್ರಿಮಾಲ್. ಸಿದ್ದರಾಮಯ್ಯರು ಮಾಲ್‌ ಒಳಗೆ ಎಂಟ್ರಿಯಾಗುತ್ತಿದ್ದಂತೆ ಅವರೊಂದಿಗೆ ಸೇಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಈಗ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಸಿದ್ದರಾಮಯ್ಯರು ಸಹ ಎಲ್ಲರೊಂದಿಗೆ ನಗುತ್ತಾ ಫೋಟೋ ಗೆ ಪೋಸ್ ನೀಡಿದರು.

44
ಏನೇನು ಖರೀದಿಸಿದರು.

ನಗರದ ಸಂಪಿಗೆ ರಸ್ತೆಯ ಮಂತ್ರಿಮಾಲ್‌ಗೆ ತಮ್ಮ ಕೆಲ ಆಪ್ತರೊಂದಿಗೆ ಶುಕ್ರವಾರ ಭೇಟಿ ನೀಡಿದ ಅವರು ಬೆಳಗಿನ ವಾಯು ವಿವಾರಕ್ಕೆ ಬೇಕಾದ ಉಡುಪುಗಳನ್ನು ಖರೀದಿಸಿದ್ದು ಗಮನ ಸೆಳೆಯಿತು. ಮಾಲ್‌ಗೆ ಬಂದ ಸಿದ್ದರಾಮಯ್ಯ ಅವರ ಜೊತೆಗೆ ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಸಿದ್ದರಾಮಯ್ಯ ಅವರು ಕೂಡಾ ನಗುನಗುತ್ತಲೇ ಸೆಲ್ಫಿಗೆ ಪೋಸ್ ನೀಡಿದರು. ಪ್ರತಿನಿತ್ಯ ಬೆಳಗ್ಗೆ ವಾಯುವಿಹಾರ ನಡೆಸುವ ಅವರು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹೆಚ್ಚಾಗಿ ಎಲ್ಲೂ ಸುತ್ತಾಟ ನಡೆಸುತ್ತಿಲ್ಲ ಎನ್ನುತ್ತಾರೆ ಆಪ್ತರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories