ಸಿಎಂ ಅವರೇ, ನಿಮ್ಮ ಸಚಿವರ ಇನೋವಾ ಕಾರು ಇಲ್ಲಿ ಈ ರಸ್ತೇಲಿ ಓಡಾಡೋದಿಲ್ಲ, ಬಡವ ಬಿದ್ದು ಸತ್ರೆ ನಿಮ್ಗೆ ಗೊತ್ತಾಗೋದು ಇಲ್ಲ!

Published : Nov 08, 2023, 04:24 PM IST

Bengaluru Roads ಬೆಂಗಳೂರು ರಸ್ತೆಗಳಲ್ಲಿ ಓಡಾಡೋದು ನಿತ್ಯ ನರಕ ಎನ್ನುವುದು ಗೊತ್ತಿರುವ ವಿಚಾರವೇ. ಇದರ ನಡುವೆ, ಹೊಸ ಸರ್ಕಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಬಂದ್‌ ಮಾಡಿದ್ದು, ಬೆಂಗಳೂರಿನ ಒಂದೊಂದು ರಸ್ತೆಗಳ ಪರಿಸ್ಥಿತಿಯೂ  ಶೋಚನೀಯವಾಗಿದೆ. Photo: Suresh, Kannada Prabha  

PREV
112
ಸಿಎಂ ಅವರೇ, ನಿಮ್ಮ ಸಚಿವರ ಇನೋವಾ ಕಾರು ಇಲ್ಲಿ ಈ ರಸ್ತೇಲಿ ಓಡಾಡೋದಿಲ್ಲ, ಬಡವ ಬಿದ್ದು ಸತ್ರೆ ನಿಮ್ಗೆ ಗೊತ್ತಾಗೋದು ಇಲ್ಲ!

ಬೆಂಗಳೂರಿನ ಅಭಿವೃದ್ಧಿ ಕಾಮಗಾರಿ ವಿಚಾರದಲ್ಲಿ ಸಿದ್ಧರಾಮಯ್ಯ ಸರ್ಕಾರ ಒಂಚೂರು ಗಮನ ನೀಡುತ್ತಿಲ್ಲ ಎನ್ನುವುದನ್ನು ಸಾಕ್ಷಿ ಎನ್ನುವಂತೆ ಈ ಚಿತ್ರಗಳಿವೆ. 

212

ಇದು ಬೆಂಗಳೂರಿನ ಹೃದಯಭಾಗವಾದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಂಕರ ಮಠದ ಹತ್ತಿರ ಇರುವ ರಂಗರಾವ್ ರಸ್ತೆ. ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಕೆಲಸ ಅರ್ಧಕ್ಕೆ ನಿಂತಿದೆ.

312

ಇನ್ನು ಈ ರಸ್ತೆಗಳಲ್ಲಿ ಸರ್ಕಾರದ ಸಚಿವರು ಒಮ್ಮೆ ಓಡಾಡಿ ನೋಡಬೇಕು. ಒಮ್ಮೆ ತಮ್ಮ ಕಾರ್‌ಗಳಲ್ಲೊ ಓಡಾಡಿದರೆ, ಮೂರು ದಿನ ಬೆನ್ನುನೋವು ಗ್ಯಾರಂಟಿ.

412

ರಸ್ತೆಯ ಗುಂಡಿಗಳಲ್ಲಿ ಬ್ಯಾರಿಕೇಡ್‌ ತುಂಬಿ ಇಡಲಾಗಿದೆ. ರಾತ್ರಿಯ ವೇಳೆ ಬೈಕ್‌ ಸವಾರ ಇದರಲ್ಲಿ ಬಿದ್ದು ಸಾಯುವ ಮುನ್ನ ಸರ್ಕಾರ ಎಚ್ಚೆತ್ತು ತನ್ನ ಕೆಲಸ ಮಾಡಬೇಕಿದೆ. 

512

ಬೆಂಗಳೂರಿನ ವಿವಿ ಪುರಂನ ಫುಡ್‌ ಸ್ಟೀಟ್‌. ರಸ್ತೆಯ ನಡುವೆಯೇ ಜಲ್ಲಿ, ಕಲ್ಲುಗಳು ಹಾಕಿ ತಿಂಗಳುಗಳೇ ಕಳೆದಿವೆ. ಆದರೆ, ಇದು ವಿಲೇವಾರಿ ಆಗುವ ಲಕ್ಷಣ ಕಾಣುತ್ತಿಲ್ಲ.

612

ಇದನ್ನು ಯಾರಾದರೂ ಫುಟ್‌ಪಾತ್‌ ಅಂತಾರಾ ಸ್ವಾಮಿ? ಅಭಿವೃದ್ಧಿ ಅನ್ನೋ ಹೆಸರಲ್ಲಿ ಫುಟ್‌ಪಾತ್‌ಗೆ ಇಂಟರ್‌ಲಾಕ್‌ ಹಾಕುವ ಕೆಲಸ ಇನ್ನೂ ಪೂರ್ತಿಯಾಗಿಲ್ಲ.

712

ಫುಟ್‌ಪಾತ್‌ಗೆ ಹಾಕಿರುವ ಬೆಡ್ಡಿಂಗ್‌ಗಳು ಈಗಾಗಲೇ ಕಿತ್ತು ಹೋಗುವ ಸ್ಥಿಗೆ ಬಂದಿದೆ. ಇನ್ನು ಅದಕ್ಕೆ ಹಾಕಿರುವ ಜಲ್ಲಿಕಲ್ಲುಗಳು ರಸ್ತೆಗೆ ಬಂದು ಬೀಳುತ್ತಿವೆ.

812

ನೀರು ಸರಾಗವಾಗಿ ಚರಂಡಿ ಸೇರುವ ಸಲುವಾಗಿ ಹಾಕಲಾಗಿರುವ ಕಬ್ಬಿಣದ ಸಣ್ಣ ಸಣ್ಣ ಗೇಟ್‌ಗಳು ನಾಪತ್ತೆಯಾಗಿವೆ. ಹೊಸದನ್ನು ತಂದು ಹಾಕಲು ಬಿಬಿಎಂಪಿ ಯೋಚನೆ ಮಾಡುತ್ತಿಲ್ಲ.

912

ಫುಟ್‌ಪಾತ್‌ನ ಪಕ್ಕದಲ್ಲಿ ಸ್ಟೀಟ್‌ಲೈಟ್‌, ಸಿಗ್ನಲ್‌ ಲೈಟ್‌ಗಾಗಿ ಹಾಕಲಾಗಿರುವ ಕೇಬಲ್‌ಗಳು ಹಾಗೆಯೇ ಬಿಡಲಾಗಿದೆ. ಇದು ಹೀಗೆಯೇ ಇದ್ದು ತಿಂಗಳುಗಳೇ ಕಳೆದಿವೆ.

1012

ಈ ರಸ್ತೆಗಳ ಸ್ಥಿತಿಯನ್ನು ನೋಡಿದರೆ, ಸರ್ಕಾರದ ಸ್ಥಿತಿಯೇ ನೆನಪಾಗುತ್ತದೆ. ಸರ್ಕಾರದ ಖಜಾನೆ ಖಾಲಿ ಆಗಿರುವ ಸೂಚನೆಗಳು ರಸ್ತೆಗಳನ್ನು ನೋಡಿದರೆ ಗೊತ್ತಾಗುತ್ತಿದೆ.

1112

ಇದು ಬೆಂಗಳೂರಿನ ಪ್ರಸಿದ್ಧ ಗಾಂಧಿ ಬಜಾರ್‌ನ ರಸ್ತೆಯ ಅವಸ್ಥೆ.ಕಾಟಾಚಾರಕ್ಕೆ ಮಾಡಿರುವ ಕೆಲಸದಿಂದ ಒಂದು ಪ್ರಾಣ ಹೋಗುವವರೆಗೂ ಸರ್ಕಾರ ಎಚ್ಚೆತ್ತುಕೊಳ್ಳೋದಿಲ್ಲ.

ಅಭಿವೃದ್ಧಿಗಿಲ್ಲ ಕರ್ನಾಟಕ ಸರ್ಕಾರದ ಬಳಿ ಹಣ, ನಿಂತಲ್ಲೆ ನಿಂತಿವೆ ಬಹುತೇಕ ಕಾಮಗಾರಿ!

1212

ಫುಟ್‌ಪಾತ್‌ ಮೇಲೆಯೇ ಬಿದ್ದಿರುವ ಸ್ಟೀಟ್‌ ಲೈಟ್‌ ಕಂಬಗಳು. ಇದು ಬೆಂಗಳೂರಿನ ಹೃದಯಭಾಗವಾದ ಗಾಂಧಿ ಬಜಾರ್‌ ಪ್ರದೇಶದ ಸದ್ಯದ ಸ್ಥಿತಿ.

Read more Photos on
click me!

Recommended Stories