Published : Nov 06, 2023, 05:51 PM ISTUpdated : Nov 06, 2023, 05:59 PM IST
ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ಅಂದಾಜು 6 ತಿಂಗಳುಗಳಾಗಿವೆ. ಆದರೆ, ಕರ್ನಾಟಕ ಚುನಾವಣೆಗೆ ಹೋದ ದಿನದಿಂದ ನಿಂತು ಹೋಗಿದ್ದ ಬೆಂಗಳೂರಿನ ಕೆಲವು ಕಾಮಗಾರಿಗಳಿಗೆ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾದರೂ ಚಾಲನೆ ಸಿಕ್ಕಿಲ್ಲ. Photo: Ravi, Kannada Prabha
ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ಅಂದಾಜು ಆರು ತಿಂಗಳಾಗಿವೆ. ಹನಿಮೂನ್ ಸಮಯ ಮುಗಿದು ಈಗಾಗಲೇ ಸರ್ಕಾರದ ಒಳಗೆ ಅಧಿಕಾರದ ಕಚ್ಚಾಟಗಳು ಆರಂಭವಾಗಿದೆ.
214
ಇದರ ನಡುವೆ ಜನರ ಬವಣೆ ಮಾತ್ರ ಹೇಳತೀರದಾಗಿದೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಹೊಸ ಸರ್ಕಾರದ ಈವರೆಗಿನ ಪ್ರಯತ್ನ ಸಂಪೂರ್ಣ ಶೂನ್ಯ.
314
ಬಿಜೆಪಿ ಸರ್ಕಾರ ಅವಧಿಯಲ್ಲಿನ ಗುತ್ತಿಗೆಗಳ ತನಿಖೆ ಎನ್ನುವ ಹೆಸರಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಬಹುತೇಕ ಎಲ್ಲಾ ರಸ್ತೆಗಳ ಕಾಮಗಾರಿಗಳು ನಿಂತಿ ಹೋಗಿವೆ.
414
ಇದು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಒಂದಾದ ನಾಗರಭಾವಿಯ ರಸ್ತೆ ಚಿತ್ರಗಳು. ಅರ್ಧಂಬರ್ಧ ಕಾಮಗಾರಿ ನಡೆದು ಹಲವು ತಿಂಗಳುಗಳೇ ಆಗಿವೆ. ಸದ್ಯದ ಮಟ್ಟಿಗೆ ಇದು ಮುಕ್ತಾಯಗೊಳ್ಳವ ಯಾವ ಸೂಚನೆಯೂ ಕಾಣುತ್ತಿಲ್ಲ.
514
ರಸ್ತೆಗಳ ಪಕ್ಕದ ಒಳಚರಂಡಿ ವ್ಯವಸ್ಥೆಗಳು ನವೀಕರಣ, ಫುಟ್‌ಪಾತ್ ನವೀಕರಣ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಉಳಿದುಕೊಂಡು ಈಗಾಗಲೇ ತಿಂಗಳುಗಳ ಮೇಲಾಗಿದೆ.
614
ಇವುಗಳನ್ನು ಮುಕ್ತಾಯ ಮಾಡಿ ಜನರಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಯಾವ ಯೋಚನೆಯೂ ಸರ್ಕಾರದ ಮುಂದೆ ಇದ್ದಂತೆ ಕಾಣುತ್ತಿಲ್ಲ.
714
ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿಗಳ ಕಾರಣದಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳಿದ್ದರು. ಈಗ ಅವರು ಹೇಳಿದ್ದ ಮಾತು ನಿಜವೆನ್ನುವಂತೆ ನಗರದ ಬಹುತೇಕ ಎಲ್ಲಾ ರಸ್ತೆ ಕಾಮಗಾರಿಗಳು ನಿಂತು ಹೋಗಿದೆ.
814
ನಾಗರಭಾವಿಯ ನಮ್ಮೂರ ತಿಂಡಿಯಿಂದ ಅಂಬೇಡ್ಕರ್ ಸರ್ಕಲ್‌ವರೆಗಿನ ರಸ್ತೆಯ ವೈಟ್ ಟ್ಯಾಪಿಂಗ್ ಸದ್ಯಕ್ಕೆ ಮುಗಿಯುವ ಲಕ್ಷಣವಿಲ್ಲ. ಇನ್ನು ಟ್ರಾಫಿಕ್‌ನಲ್ಲಿ ಕಿಲೋಮೀಟರ್‌ಗಟ್ಟಲೆ ಕ್ಯೂ ನಿಲ್ಲೋದು ಜನರಿಗೂ ತಪ್ಪಿದ್ದಲ್ಲ.
914
ಕೆಲವು ದೂರದವರೆಗಿನ ರಸ್ತೆಗೆ ವೈಟ್ ಟ್ಯಾಪಿಂಗ್ ಮಾಡಲಾಗಿದೆ. ಅದರ ಪಕ್ಕದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲಾಗಿದ್ದು, ವಾಹನ ಸವಾರರು ಬೈಕ್ ರೈಡ್ ಮಾಡುವ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
1014
ನಾಗರಭಾವಿ ಮಾತ್ರವಲ್ಲ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ರೈಲ್ವೇ ಸ್ಟೇಷನ್‌ನ ಎದುರಿನ ರಸ್ತೆಯ ಕೆಲಸ ಕೂಡ ಅರ್ಧಕ್ಕೆ ನಿಂತುಕೊಂಡು ತಿಂಗಳುಗಳೇ ಕಳೆದಿದೆ.
1114
ಅದರೊಂದಿಗೆ ಡ್ರೇನೇಜ್ ಲೈನ್‌ಗಳ ಗುಂಡಿಗಳ ಕೆಲಸವನ್ನು ಸಮರ್ಪಕವಾಗಿ ಮಾಡಲಾಗಿಲ್ಲ. ರಾತ್ರಿಯ ವೇಳೆ ಯಾರಾದರೂ ಅದರಲ್ಲಿ ಬಿದ್ದು ಸಾವು ಕಂಡರೂ ಕೇಳೋರಿಲ್ಲ.
1214
ಸರ್ಕಾರ ಈಗಾಗಲೇ ಬೆಂಗಳೂರಿನ ಕಾಮಗಾರಿಗಳಿಗೆ ಚಾಲನೆ ನೀಡಿರುವುದಾಗಿ ಹೇಳಿದ್ದರೂ, ಅದೆಲ್ಲಿಯೂ ಕಾರ್ಯರೂಪಕ್ಕ ಬಂದಂತೆ ಕಾಣುತ್ತಿಲ್ಲ.
1314
ಇನ್ನು ಗ್ಯಾರಂಟಿಗಳ ಹಣ ಹೊಂದಿಸುವುದರಲ್ಲಿ ನಿರವಾಗಿರುವ ಸರ್ಕಾರ, ಅಭಿವೃದ್ಧಿ ವಿಚಾರಗಳತ್ತ ಯಾವಾಗ ಕಣ್ಣು ಹಾಯಿಸುತ್ತದೆ ಎನ್ನೋದೇ ಜನರ ಪ್ರಶ್ನೆಯಾಗಿದೆ.
1414
ಇನ್ನೊಂದೆಡೆ ಬಿಬಿಎಂಪಿ ಕೂಡ ಈ ಯಾವ ವಿಚಾರಗಳೆ ಬಗ್ಗೆಯೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಗೋಡೆ ಬಿದ್ದರೆ ಜಗುಲಿ ಮೇಲೆ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದೆ.