ಬಾಗಲಕೋಟೆ: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ: ಧಗಧಗನೇ ಹೊತ್ತಿ ಉರಿದ ಪೀಠೋಪಕರಣ ಮಳಿಗೆ

Published : Mar 12, 2026, 03:40 PM ISTUpdated : Mar 12, 2026, 05:34 PM IST

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಪೀಠೋಪಕರಣಗಳ ಅಂಗಡಿಯೊಂದಕ್ಕೆ ಬೆಂಕಿ ತಗುಲಿದೆ. ಈ ದುರ್ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

PREV
15
ಪೀಠೋಪಕರಣಗಳ ಅಂಗಡಿಗೆ ಬೆಂಕಿ

ಬಾಗಲಕೋಟೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಪೀಠೋಪಕರಣಗಳ ಅಂಗಡಿಗೆ ಬೆಂಕಿ ಬಿದ್ದಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಗೆ ಹಾನಿಯಾಗಿದೆ.

25
ಜಮಖಂಡಿ ತಾಲೂಕಿನ ಕಟ್ಟೆಕೆರೆ ಬಳಿ ಘಟನೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಟ್ಟೆಕೆರೆ ವ್ಯಾಪ್ತಿಯಲ್ಲಿರುವ ಫರ್ನಿಚರ್ ಅಂಗಡಿಗೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿದ್ದು, ಅಪಾರ ಹಾನಿ ಸಂಭವಿಸಿದೆ.

35
ಲಕ್ಷಾಂತರ ರೂ ಮೌಲ್ಯದ ವಸ್ತುಗಳಿಗೆ ಹಾನಿ

ಬೆಂಕಿಯ ತೀವ್ರತೆಗೆ ಅಂಗಡಿ ಧಗ ಧಗ ಹೊತ್ತಿ ಉರಿದಿದ್ದು, ಅಂಗಡಿಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿದೆ.

ಇದನ್ನೂ ಓದಿ:  ಯಾದಗಿರಿ: ಸುರಪುರ ಬಳಿ ಬೈಕ್‌ಗೆ ಕ್ರೂಸರ್ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

45
ಮೆಟ್ರೋ ಸೇಲ್ಸ್ ಫರ್ನಿಚರ್ ಎಂಬ ಅಂಗಡಿಯಲ್ಲಿ ಬೆಂಕಿ

ಜಮಖಂಡಿಯ ಕಟ್ಟೆಕೆರೆ ವ್ಯಾಪ್ತಿಯಲ್ಲಿ ಬರುವ ಅಲಗೂರ್ ಎಂಟರ್ಪ್ರೈಸಸ್ ಮೆಟ್ರೋ ಸೇಲ್ಸ್ ಫರ್ನಿಚರ್ ಎಂಬ ಅಂಗಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಬಾಗಲಕೋಟೆ: ಧಗಧಗನೇ ಹೊತ್ತಿ ಉರಿದ ಪೀಠೋಪಕರಣ ಮಳಿಗೆ: ಲಕ್ಷಾಂತರ ಮೌಲ್ಯದ ಆಸ್ತಿ ಹಾನಿ

55
ಸಾಧಿಕ ಅಲಗೂರ‌ ಎಂಬುವವರಿಗೆ ಸೇರಿದ ಅಂಗಡಿ

ಸಾಧಿಕ ಅಲಗೂರ‌ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಸ್ಥಳಕ್ಕೆ ಜಮಖಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ಕೌಟುಂಬಿಕ ಕಲಹದಿಂದ ಮನನೊಂದು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರವಾದ ತಾಯಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories