ಜೈಲಿನಲ್ಲಿ ನಟ ದರ್ಶನ್‌ಗೆ ಏನೆಲ್ಲಾ ಸವಲತ್ತು ಸಿಕ್ತಿದೆ? ಕಾರಗೃಹದಿಂದ ಸುಪ್ರೀಂ ಕೋರ್ಟ್‌ಗೆ ಕಂಪ್ಲೀಟ್ ವರದಿ

Published : May 17, 2026, 10:07 AM IST

ಸುಪ್ರೀಂ ಕೋರ್ಟ್ ನಟ ದರ್ಶನ್ ಜಾಮೀನು ಅರ್ಜಿ ತಿರಸ್ಕರಿಸಿದ ಕಾರಣ ಜೈಲುವಾಸವೇ ಗತಿಯಾಗಿದೆ. ಇದರ ಬೆನ್ನಲ್ಲೇ ಕಾರಗೃಹದಿಂದ ಸುಪ್ರೀಂ ಕೋರ್ಟ್‌ಗೆ ದಾಸ ಜೈಲುವಾಸದ ಕುರಿತ ಸಂಪೂರ್ಣ ವರದಿ ಸಲ್ಲಿಸಿದೆ. ದರ್ಶನ್‌ಗೆ ಏನೆಲ್ಲಾ ಸವಲತ್ತು ಸಿಗುತ್ತಿದೆ?

PREV
16
ಸುಪ್ರೀಂ ಕೋರ್ಟ‌ಗೆ ಸಂಪೂರ್ಣ ವರದಿ

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲೂ ಜಾಮೀನು ಸಿಗದೆ ಇನ್ನೂ ಒಂದು ವರ್ಷ ಜೈಲುವಾಸವೇ ಗತಿಯಾಗಿದೆ. ಇದೇ ವೇಳೆ ಸುಪ್ರೀಂ ಕೋರ್ಟ್ ಕೆಲ ಸೂಚನೆಯನ್ನು ನೀಡಿತ್ತು. ಪ್ರತಿ ದಿನ ವಿಚಾರಣೆ, ಜೈಲಿನಲ್ಲಿ ದರ್ಶನ್‌ಗೆ ಸಿಗುತ್ತಿರುವ ಸೌಲಭ್ಯ ಸೇರಿದಂತೆ ಇತರ ಮಾಹಿತಿಗಳ ಕುರಿತು ವರದಿ ಕೇಳಿತ್ತು. ಈ ಹಿನ್ನಲೆಯಲ್ಲಿ ಕಾರಾಗೃಹ ಇಲಾಖೆ ನಟ ದರ್ಶನ್ ಜೈಲು ವಾಸದ ಕುರಿತು ಡೀಟೇಲ್ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದೆ.

26
ಜೈಲಿಗೆ ಕುಟುಂಬಸ್ಥರ ಭೇಟಿ, ಫೋನ್ ಕರೆ ಸೌಲಭ್ಯ
  • ದರ್ಶನ್ ಜೈಲು ಸೇರಿದ ಬಳಿಕ 70 ಭಾರಿ ಭೇಟಿಯಾದ ಕುಟುಂಬಸ್ಥರು
  • 73 ಭಾರಿ ಪೋನ್ ಕರೆಗಳ ಸೌಲಭ್ಯ ಪಡೆದ ದರ್ಶನ್
  • ಆಗಸ್ಟ್ 2025 ರಿಂದ 2026 ಮೇವರೆಗೆ ಕುಟುಂಬದವರ ಭೇಟಿ
  • ಜೈಲಿನಲ್ಲಿ ದರ್ಶನ್ ಗೆ ವಕೀಲರ ಭೇಟಿಗೆ ಅವಕಾಶ
  • 2025 ಆಗಸ್ಟ್‌ ನಿಂದ 28 ಬಾರಿ ವಕೀಲರ ಭೇಟಿ
36
ಜೈಲಿನಲ್ಲಿ ನಟ ದರ್ಶನ್‌ಗೆ ವ್ಯವಸ್ಥೆ
  • ದರ್ಶನ್ ಬ್ಯಾರಕ್ ನಲ್ಲಿದೆ ಕಾರ್ಪೆಟ್‌, ಕಂಬಳಿ, ಬೆಡ್ ಶೀಟ್‌, ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ, ಕಪ್, ಬೌಲ್ ಮತ್ತು ಗ್ಲಾಸ್ ಸೇರಿದಂತೆ ಕೆಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
  • ಕೋರ್ಟ್ ಆದೇಶದಂತೆ ಚಾದರ್/ಕಂಬಳಿ ವ್ಯವಸ್ಥೆ
  • ನಟ ದರ್ಶನ್ ಇರುವ ಬ್ಯಾರಕ್ ನಲ್ಲಿ 24/7 ಭದ್ರತೆ
  • ಹಗಲು ವೇಳೆ ಒಬ್ಬ ಸಹಾಯಕ ಜೈಲರ್ ಹಾಗೂ ಒಬ್ಬ ವಾರ್ಡರ್
  • ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್ ಗಳ ನಿಯೋಜನೆ
  • ಇತರ ಖೈದಿಗಳು ಕಾರಿಡಾರ್ ಗೆ ಬರದಂತೆ ಭದ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮ
  • ಬ್ಯಾರಕ್ ಮುಂಭಾಗದ ಕಾರಿಡಾರ್ ನಲ್ಲಿ ಸಿಸಿಟಿವಿಗಳ ಅಳವಡಿಕೆ
  • ಕಮಾಂಡ್ ಸೆಂಟರ್ ನಲ್ಲಿ ಸಿಸಿಟಿವಿಗಳ ಪರಿಶೀಲನೆ
46
ನಟ ದರ್ಶನ್‌ಗೆ ಜೈಲು ಅಧಿಕಾರಿಗಳಿಂದ ಇತರ ವ್ಯವಸ್ಥೆ
  • ಗಾಳಿ ಬೆಳಕು ಇರುವ ಬ್ಯಾರಕ್ ನಲ್ಲಿ ದರ್ಶನ್ ವಾಸ್ತವ್ಯ..
  • ಮೂಲಭೂತ ಸೌಕರ್ಯ ಮತ್ತು ಉತ್ತಮ ಸೌಲಭ್ಯ ಇರುವ ಬ್ಯಾರಕ್..
  • ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಪರದೆ ಅಳವಡಿಕೆ..
  • ವಿಶಾಲವಾದ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್‌ಗಳ ಅಳವಡಿಕೆ..
  • ಭಾರತೀಯ ಮತ್ತು ವೆಸ್ಟರ್ನ್ ಶೌಚಾಲಯ ಸೌಲಭ್ಯ..
  • ಜೈಲಿನ ನಿಯಾಮವಳಿ ಪ್ರಕಾರ ಟೆಲಿಫೋನ್ ಸೌಲಭ್ಯ ಹಾಗೂ ಸಂದರ್ಶನಕ್ಕೆ ಅವಕಾಶ.
56
ನಟ ದರ್ಶನ್ ಆರೋಗ್ಯ ಕಾಪಾಡಲು ವ್ಯವಸ್ಥೆ
  • ಫಿಸಿಯೋಥೆರಪಿಸ್ಟ್ ಸಲಹೆ ಮೇರೆಗೆ ಕುರ್ಚಿ ವ್ಯವಸ್ಥೆ..
  • ಜೈಲಿನ ವೈದ್ಯರ ಸಲಹೆಯಂತೆ ಮೊಟ್ಟೆ, ಬ್ರೆಡ್ ಮತ್ತು ಹಾಲಿನಂತಹ ಹೆಚ್ಚುವರಿ ಆಹಾರ ವ್ಯವಸ್ಥೆ..
  • ಸಂದರ್ಶನ ಸಮಯದಲ್ಲಿ ತರುವ ಹಣ್ಣುಗಳು, ಡ್ರೈ ಫ್ರೂಟ್ಸ್, ಬೇಕರಿ ಮತ್ತು ಸಿಹಿತಿಂಡಿ ಪದಾರ್ಥಗಳು, ಬಟ್ಟೆ ಮತ್ತು ಹಾಸಿಗೆ ಸಾಮಗ್ರಿ..
  • ಕೋರ್ಟ್ ಸೂಚನೆ ಮೇರೆಗೆ ಟಿವಿ ಸೌಲಭ್ಯ..
  • ಕ್ಯಾರಂ, ದಿನಪತ್ರಿಕೆ, ಮಾಸಿಕ ಪತ್ರಿಕೆಗಳು ಮತ್ತು ಪುಸ್ತಕಗಳ ಸೌಲಭ್ಯ..
  • ಸ್ನಾನದ ಸೋಪು, ಬಟ್ಟೆ ತೊಳೆಯುವ ಸೋಪು, ತೆಂಗಿನ ಎಣ್ಣೆ, ಟೂತ್ ಪೇಸ್ಟ್, ಫಿನೈಲ್ ಮತ್ತು ಬ್ಲೀಚಿಂಗ್ ಪೌಡರ್..
66
ಫಿಟ್ನೆಸ್ ಕಾಪಾಡಲು ವ್ಯವಸ್ಥೆ
  • ಸೂರ್ಯನ ಬೆಳಕಿನಲ್ಲಿ ವಾಕಿಂಗ್ ಗೆ ಅವಕಾಶ..
  • ಬೆಳಿಗ್ಗೆ 7.30 ರಿಂದ 8.30 ರವರೆಗೆ ಯೋಗಾಭ್ಯಾಸ..
  • ಕಾರಿಡಾರ್‌ನಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 3 ಗಂಟೆಯಿಂದ 6 ರವರೆಗೆ ವಾಕಿಂಗ್ ಗೆ ಅನುಮತಿ..
  • ಕರ್ನಾಟಕ ಬಂದೀಖಾನೆ ಸೇವೆಗಳ ಅನುಗುಣವಾಗಿ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಸೌಲಭ್ಯಗಳ ವ್ಯವಸ್ಥೆ..

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories