Mirabai Chanu Fitness: 2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು ಅವರ ಆಹಾರ ಪದ್ಧತಿ ಕೇಳಿದ್ರೆ ನಿಮಗೆ ಶಾಕ್ ಆಗಬಹುದು! ದೇಶಕ್ಕೆ ಹೆಮ್ಮೆ ತಂಡ ಕ್ರೀಡಾಪಟುವಿನ ಕಠಿಣ ಶಿಸ್ತು ಮತ್ತು ಆಹಾರ ಪದ್ದತಿಯ ರಹಸ್ಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ…
2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (CWG) ದೇಶದ ಮೊದಲ ಚಿನ್ನದ ಪದಕವನ್ನು ಗೆದ್ದ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ತ್ರಿವರ್ಣ ಧ್ವಜ ಹಾರಿಸುವುದನ್ನು ನೋಡಿದಾಗ ಅವರ ಬಗ್ಗೆ ಹೆಮ್ಮೆ ಹಾಗೂ ಸಾಧನೆಯ ಹಿಂದಿನ ಕಠಿಣ ಪರಿಶ್ರಮ ನೆನಪಾಗುತ್ತದೆ. ತನ್ನ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅವರು ನಿಗದಿತ ತೂಕದ ವಿಭಾಗದಲ್ಲಿ ಉಳಿಯಲು, ಸ್ಪರ್ಧೆಗೆ ಮುಂಚಿತವಾಗಿ ಸತತ ಮೂರು ದಿನಗಳಿಂದ ಅವರು ಸರಿಯಾಗಿ ಊಟ ಮಾಡಿಲ್ಲ ಎಂದು ಹೇಳಿದ್ದರು. ವೇಟ್ ಲಿಫ್ಟಿಂಗ್ ನಲ್ಲಿ ಸರಿಯಾಗಿ ಹೊಟ್ಟೆ ತುಂಬದೆ ದೇಶಕ್ಕಾಗಿ ಪದಕ ಗೆಲ್ಲುವುದು ಅಸಾಧ್ಯವೆಂದು ತೋರುತ್ತದೆ, ಆದರೆ ಚಾನು ತನ್ನ ಕಠಿಣ ಪರಿಶ್ರಮ, ಡೆಡಿಕೇಶನ್ ಮೂಲಕ ಅದನ್ನು ಸಾಧಿಸಿದ್ದಾರೆ.
26
ವೇಟ್ ಲಿಫ್ಟಿಂಗ್ ಮಾಡುವವರು ಹೊಟ್ಟೆ ತುಂಬಾ ತಿನ್ನುತ್ತಾರೆಯೇ?
ಜನರು ಸಾಮಾನ್ಯವಾಗಿ ವೇಟ್ ಲಿಫ್ಟರ್ ಸರಿಯಾಗಿ ಹೊಟ್ಟೆ ತುಂಬಾ ತಿನ್ನುತ್ತಾರೆ ಎಂದು ಭಾವಿಸುತ್ತಾರೆ, ಆದರೆ ವಾಸ್ತವವು ಸಂಪೂರ್ಣವಾಗಿ ವಿಭಿನ್ನವಾಗಿದೆ; ಕ್ರೀಡಾಪಟುಗಳು ಅಥವಾ ತೂಕ ಎತ್ತುವವರು ತಮ್ಮ ಶಕ್ತಿಯನ್ನು ಕಾಪಾಡಿಕೊಳ್ಳಲು ಊಟದ ಬಗ್ಗೆ ಕಾಳಜಿ ವಹಿಸಲೇಬೇಕು. ಈ ಬಗ್ಗೆ ಹಿಂದೆ ಮೀರಾಬಾಯಿ ತಿಳಿಸಿರುವಂತೆ "ನಾವು ವೇಟ್‌ಲಿಫ್ಟರ್‌ಗಳಾಗಿರುವುದರಿಂದ, ನಾವು ಬಹಳಷ್ಟು ತಿನ್ನಬೇಕು ಎಂದು ಎಲ್ಲರೂ ಭಾವಿಸುತ್ತಾರೆ, ಆದರೆ ಅದು ಹಾಗಲ್ಲ. ನಾವು ಯಾವಾಗಲೂ ನಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು."ಎಂದಿದ್ದರು. ಯಾಕಂದ್ರೆ ಸ್ವಲ್ಪ ತೂಕ ವ್ಯತ್ಯಾಸ ಆದರೂ ಅನರ್ಹರಾಗುವ ಸಾಧ್ಯತೆ ಇದೆ.
36
ಇಷ್ಟಪಟ್ಟ ಯಾವ ಆಹಾರ ತಿನ್ನುವಂತಿಲ್ಲ
ಮೀರಾಬಾಯಿಯ ಆಹಾರದಲ್ಲಿ ಬೆಳಗಿನ ಚಹಾ ಮತ್ತು ಟೋಸ್ಟ್, ಪರಾಠಾ ಅಥವಾ ಒಂದು ಲೋಟ ಹಾಲು ಕೂಡ ಇರಲಿಲ್ಲ. ತೂಕ ಹೆಚ್ಚಾಗುವ ಭಯದಿಂದ ಬ್ರೆಡ್ ಮತ್ತು ಹಾಲಿನಂತಹ ಸಾಮಾನ್ಯ ವಸ್ತುಗಳನ್ನು ಸಹ ಸೇವಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಅವರ ಬೆಳಗಿನ ಉಪಾಹಾರವು ಕೇವಲ ಮೂರು ಪದಾರ್ಥಗಳನ್ನು ಒಳಗೊಂಡಿರುವ ಅತ್ಯಂತ ಸರಳ ಬ್ರೇಕ್ ಫಾಸ್ಟ್. ಬೇಯಿಸಿದ ಮೊಟ್ಟೆಗಳು, ಬೇಯಿಸಿದ ಕಪ್ಪು ಕಡಲೆ ಮತ್ತು ಬೇಯಿಸಿದ ಅಣಬೆಗಳು. ಇಡೀ ದಿನ ದೇಹಕ್ಕೆ ಶಕ್ತಿ ನೀಡಲು ಇದೇ ಆಹಾರ.
ಬೇಯಿಸಿದ ಮೊಟ್ಟೆ ಪ್ರೊಟೀನ್ ಮೂಲವಾಗಿದ್ದು, ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತದೆ. ಇದು ಮೆದುಳಿನ ಕಾರ್ಯ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಮೂಳೆಗಳು ಸ್ಟ್ರಾಂಗ್ ಆಗಲು ಬೇಕಾದ ಕ್ಯಾಲ್ಶಿಯಂ ಕೂಡ ಇದರಲ್ಲಿದೆ. ಇನ್ನು ಬೇಯಿಸಿದ ಅಣಬೆಯಲ್ಲಿ ಕಡಿಮೆ ಕ್ಯಾಲರಿ ಮತ್ತು ಕೊಬ್ಬು ಇದು ತೂಕ ಇಳಿಕೆಗೆ ಸಹಕಾರಿ. ಜೊತೆಗೆ ರೋಗ್ಯ ನಿರೋಧಕ ಶಕ್ತಿಯನ್ನು ಹೊಂದಿದ್ದು, ಹೃದಯದ ಆರೋಗ್ಯಕ್ಕೂ ಉತ್ತಮ. ಇನ್ನು ಬೇಯಿಸಿದ ಕಪ್ಪು ಕಡಲೆ ದಿನವಿಡೀ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಉತ್ತಮ ಜೀರ್ಣಕ್ರಿಯೆಗೂ ಸಹಕಾರಿ, ಜೊತೆಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ಸಹಕಾರಿ.
56
ತರಬೇತಿಗೆ ಮುನ್ನ ಲಘು ಊಟ
ಇದು ಕೇವಲ ಉಪಾಹಾರದ ಬಗ್ಗೆ ಅಲ್ಲ; ಅವರ ಕಠಿಣ ವ್ಯಾಯಾಮ ಮತ್ತು ಟ್ರೈನಿಂಗ್ ಪಿರಿಯಡ್ ಹೊರತಾಗಿಯೂ, ಅವರ ಮಧ್ಯಾಹ್ನ ಊಟವು ತುಂಬಾ ಹಗುರವಾಗಿರುತ್ತದೆ. ಅವರು ಮಧ್ಯಾಹ್ನ ಊಟಕ್ಕೆ ಸಲಾಡ್ ಮತ್ತು ಸೀ ಫುಡ್ ಸೇವಿಸುತ್ತಾರೆ. ಲಘು ಊಟಗಳು ಸುಲಭವಾಗಿ ಜೀರ್ಣವಾಗುತ್ತವೆ, ಇದರಿಂದ ತರಬೇತಿಯ ಸಮಯದಲ್ಲಿ ಹೆವಿ ಫೀಲ್ ಆಗುವುದಿಲ್ಲ, ಅಲ್ಲದೇ ಸುಲಭವಾಗಿ ವ್ಯಾಯಾಮ ಮಾಡಲು ಸಾಧ್ಯವಾಗುತ್ತದೆ.
66
ಪದಕದ ಹಿಂದಿನ ನಿಜವಾದ ಶಿಸ್ತು
ವೇಟ್‌ಲಿಫ್ಟಿಂಗ್‌ನಂತಹ ಕ್ರೀಡೆಗಳಲ್ಲಿ, ದೇಹದ ತೂಕದಲ್ಲಿ 100–200 ಗ್ರಾಂ ವ್ಯತ್ಯಾಸವಿದ್ದರೂ ಸಹ ಕ್ರೀಡಾಪಟುವನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬಹುದು. ಅದಕ್ಕಾಗಿಯೇ ಮೀರಾಬಾಯಿ ಚಾನು ಹೆಚ್ಚುವರಿ ಫ್ಯಾಟ್ ಅಥವಾ ತೂಕವನ್ನು ಸೇರಿಸದೆ ಶಕ್ತಿಯನ್ನು ಒದಗಿಸುವ ಆಹಾರಕ್ರಮದ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತಾರೆ. ಕ್ರೀಡಾಪಟುಗಳ ಯಶಸ್ಸು ಮತ್ತು ಪದಕಗಳನ್ನು ನಾವು ಹೆಚ್ಚಾಗಿ ಆನಂದಿಸುತ್ತೇವೆ, ಆದರೆ ಮೀರಾಬಾಯಿ ಚಾನು ಅವರ ಕಥೆಯು ಪ್ರತಿ ಚಿನ್ನದ ಪದಕದ ಹಿಂದೆ ವರ್ಷಗಳ ಸಮರ್ಪಣೆ, ತ್ಯಾಗ ಮತ್ತು ಕಠಿಣ ಶಿಸ್ತು ಅಡಗಿದೆ ಎಂದು ನಮಗೆ ನೆನಪಿಸುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.