Gold Medal: ನಮ್ಮ ಬೀದರ್‌ಗೆ ಕೂಗಳತೆ ದೂರದ ಊರಿನ ಹೆಣ್ಣುಮಗಳು ಈಗ ದೇಶದ ಹೆಮ್ಮೆ; 21ರ ಹರೆಯದಲ್ಲೇ 'ಚಿನ್ನ' ಗೆದ್ದು ಮನು ಭಾಕರ್‌ರನ್ನೇ ಹಿಂದಿಕ್ಕಿದ ಗೋಲ್ಡನ್‌ ಗರ್ಲ್!

Published : Jul 27, 2026, 04:43 PM IST

ಬೀದರ್ ಸಮೀಪದ, ಚಾಲಕನ ಮಗಳಾದ 21ರ ಹರೆಯದ ಇಶಾ, ಶೂಟಿಂಗ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ISSF ವಿಶ್ವಕಪ್‌ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರನ್ನು ಹಿಂದಿಕ್ಕಿ ಚಿನ್ನ ಗೆದ್ದ ಇವರು, ಏಷ್ಯನ್ ಗೇಮ್ಸ್‌ನಲ್ಲೂ ನಾಲ್ಕು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. 

PREV
15
ಬೀದರ್‌ನಿಂದ ಕೂಗಳೆತ ದೂರದ ಹುಡುಗಿ!

ನಮ್ಮ ಬೀದರ್‌ಗೆ ಕೂಗಳತೆ ದೂರದ ಊರಿನ 21 ರ ಹರೆಯದ ಇಶಾ, ಇಂದು ತಮ್ಮ ಅಪ್ರತಿಮ ಗುರಿ ಸಾಧನೆಯಿಂದ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಚಾಲಕನ ಮಗಳಾಗಿ ಬೆಳೆದು, ಆರ್ಥಿಕ ಸಂಕಷ್ಟಗಳ ನಡುವೆಯೂ ಕಠಿಣ ಶ್ರಮದಿಂದ ಶೂಟಿಂಗ್ ಕ್ಷೇತ್ರದಲ್ಲಿ ಬೆಳಗಿದ ಈ 'ಗೋಲ್ಡನ್ ಗರ್ಲ್', ಏಷ್ಯನ್ ಗೇಮ್ಸ್‌ನಲ್ಲೂ ಮಿಂಚಿ, ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರನ್ನೇ ಹಿಂದಿಕ್ಕಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಗಡಿಭಾಗದ ಮನೆಮಾತಾಗಿರುವ ಈ ಯುವ ತಾರೆಯ ಅದ್ಭುತ ಯಶಸ್ಸಿನ ಪಯಣ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ.

25
ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಖ್ಯಾತಿ!

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಶೂಟರ್‌ಗಳು ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ ಮತ್ತು ಈಗ ಸೋಮವಾರ ನಡೆದ ISSF ವಿಶ್ವಕಪ್‌ನಲ್ಲಿ, ಭಾರತೀಯ ಶೂಟರ್‌ಗಳು ಅದ್ಭುತ ಪ್ರದರ್ಶನ ನೀಡಿ ಎರಡು ಪದಕಗಳನ್ನು ಗೆದ್ದಿದ್ದಾರೆ. 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಆಡುತ್ತಿರುವ 21 ವರ್ಷದ ಇಶಾ ಸಿಂಗ್ ಅದ್ಭುತ ಪ್ರದರ್ಶನದೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಬಾರಿ, ಅವರು ಒಲಿಂಪಿಕ್ ತಾರೆ ಮನು ಭಾಕರ್ ಅವರನ್ನು ಹಿಂದಿಕ್ಕಿದರು. ಅಂತಿಮ ಸುತ್ತಿನಲ್ಲಿ, ಇಶಾ 40 ಹಿಟ್‌ಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದರು.

35
ಮೂರನೇ ಸ್ಥಾನ ಪಡೆದ ಮನು ಭಾಕರ್!

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ವಿಶ್ವಕಪ್‌ನಲ್ಲಿ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಇಶಾ ಈ ಸಾಧನೆ ಮಾಡಿದರು. ಅಂತಿಮ ಸುತ್ತಿನಲ್ಲಿ, ಅವರು 50ರಲ್ಲಿ 40 ಶಾಟ್‌ ಬಹಳ ಒತ್ತಡದಲ್ಲಿ ನಿಖರವಾಗಿ ಶೂಟ್‌ ಮಾಡಿದ್ದಾರೆ. ಅವರು ಚೀನಾದ ಜಾಂಗ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಭಾರತದ ಸ್ಟಾರ್ ಅಥ್ಲೀಟ್ ಮನು ಭಾಕರ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು.

45
ಯಾರು ಈ ಇಶಾ ಸಿಂಗ್ ?

ಜನವರಿ 1, 2005 ರಂದು ಹೈದರಾಬಾದ್‌ನಲ್ಲಿ ಜನಿಸಿದ ಇಶಾ ಸಿಂಗ್ ಬಾಲ್ಯದಿಂದಲೂ ಶೂಟಿಂಗ್ ಬಗ್ಗೆ ಒಲವು ಹೊಂದಿದ್ದರು. ಅವರ ತಂದೆ ಚಾಲಕ. ಆರಂಭದಲ್ಲಿ ಗೋ-ಕಾರ್ಟಿಂಗ್, ಟೆನಿಸ್ ಮತ್ತು ಬ್ಯಾಡ್ಮಿಂಟನ್ ಆಡಿದ ನಂತರ, ಅವರು 10 ನೇ ವಯಸ್ಸಿನಲ್ಲಿ ಶೂಟಿಂಗ್ ಅನ್ನು ಆರಿಸಿಕೊಂಡರು. ಅವರ ತಂದೆ ಆರಂಭದಲ್ಲಿ ಮನೆಯಲ್ಲಿ ಅಭ್ಯಾಸದ ಗುರಿ ಸಾಧಿಸಲು ಬಹುದೊಡ್ಡ ಸಾಥ್‌ ನೀಡಿದ್ದಾರೆ. ಅಲ್ಲಿ ಅಭ್ಯಾಸ ಮಾಡಿದ ನಂತರ, ಅವರು ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್ ಅವರ ಅಕಾಡೆಮಿಯಲ್ಲಿ ಅಧಿಕೃತ ತರಬೇತಿ ಪಡೆಯಲು ಪ್ರಾರಂಭಿಸಿದರು.

55
ಏಷ್ಯನ್ ಕ್ರೀಡಾಕೂಟದಲ್ಲಿ 4 ಪದಕಗಳು!

ಕೋಚ್‌ ಗಗನ್ ನಾರಂಗ್ ಅವರಿಂದ ತರಬೇತಿ ಪಡೆದ ನಂತರ, ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಸೇರಿದಂತೆ ಒಟ್ಟು 4 ಪದಕಗಳನ್ನು ಗೆದ್ದರು. ಇದಲ್ಲದೆ, ಮ್ಯೂನಿಚ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 43 ಅಂಕಗಳನ್ನು ಗಳಿಸುವ ಮೂಲಕ ಅವರು ಹೊಸ ವಿಶ್ವ ದಾಖಲೆ ಬರೆದಿದ್ದರು. ಅವರ ನಿರಂತರ ಯಶಸ್ಸಿಗೆ, ಭಾರತ ಸರ್ಕಾರವು ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು. ಕೇವಲ 21 ನೇ ವಯಸ್ಸಿನಲ್ಲಿ, ಅವರು ಅನೇಕ ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories