"ಅಲ್ಲಾ ಕೆಟ್ಟ ದೃಷ್ಠಿಯಿಂದ...": ತಲಾಕ್ ಪಡೆದ ಸಾನಿಯಾ ಮಿರ್ಜಾಗೆ ಅಮ್ಮನ ಕಿವಿಮಾತು ವೈರಲ್‌

Published : Feb 06, 2024, 05:12 PM IST

ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ಹೆಸರು. ಇದೀಗ ಸಾನಿಯಾ ಮಿರ್ಜಾ ಅವರ ತಾಯಿಯಾ ಕಾಮೆಂಟ್ ವೈರಲ್ ಆಗಿದೆ.   

PREV
17
"ಅಲ್ಲಾ ಕೆಟ್ಟ ದೃಷ್ಠಿಯಿಂದ...": ತಲಾಕ್ ಪಡೆದ ಸಾನಿಯಾ ಮಿರ್ಜಾಗೆ ಅಮ್ಮನ ಕಿವಿಮಾತು ವೈರಲ್‌

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ನಡುವಿನ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ. ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಾ ಬಂದಿವೆ.

27

ಶೋಯೆಬ್ ಮಲಿಕ್ ಪಾಕಿಸ್ತಾನದ ನಟಿ ಸನಾ ಜಾವೆದ್ ಜತೆ ಮೂರನೇ ಮದುವೆಯಾಗಿದ್ದಾರೆ. ಇದು ಸನಾ ಜಾವೆದ್ ಪಾಲಿಗೆ ಮೂರನೇ ಮದುವೆ. ಸನಾ ವಾರನ್ನು ಮದುವೆಯಾಗಿರುವುದನ್ನು ಸ್ವತಃ ಶೋಯೆಬ್ ಮಲಿಕ್ ಖಚಿತಪಡಿಸಿದ್ದರು.

37

ಶೋಯೆಬ್ ಮಲಿಕ್ ಜತೆಗಿನ 14 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದ ಬಳಿಕ ಅಂದರೆ ತಲಾಖ್ ಪಡೆದ ನಂತರ ಸಾನಿಯಾ ಮಿರ್ಜಾ ಇದೀಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ.

47

ಸಾನಿಯಾ ಮಿರ್ಜಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ಹಂಚಿಕೊಂಡ ಕೆಲವು ಫೋಟೋಗಳು ಅವರ ಫ್ಯಾನ್ಸ್‌ ಮೆಚ್ಚುಗೆಗೆ ಪಾತ್ರವಾಗಿದೆ.

57

ಇದೆಲ್ಲದರ ನಡುವೆ ಈ ಫೋಟೋಗೆ ಸಾನಿಯಾ ಮಿರ್ಜಾ ತಾಯಿ ನಸೀಮಾ ಮಿರ್ಜಾ ಮಾಡಿದ ಕಾಮೆಂಟ್ ಇದೀಗ ಸಾಕಷ್ಟು ವೈರಲ್ ಆಗಿದೆ. ನಸೀಮಾ ಮಿರ್ಜಾ ತಮ್ಮ ಮಗಳನ್ನು ಉದ್ದೇಶಿಸಿ, "ಅಲ್ಲಾ ನನ್ನ ಪ್ರೀತಿಯ ಮಗಳನ್ನು ಕೆಟ್ಟ ದೃಷ್ಠಿ(ಕಣ್ಣುಗಳಿಂದ)ಯಿಂದ ಕಾಪಾಡಲಿ" ಎಂದು ಮನವಿ ಮಾಡಿಕೊಂಡಿದ್ದಾರೆ.

67

ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಹೈದರಾಬಾದ್‌ನಲ್ಲಿ 2010ರ ಏಪ್ರಿಲ್‌ನಲ್ಲಿ ಮದುವೆಯಾಗಿದ್ದರು. ಅವರಿಬ್ಬರಿಗೆ ಒಂದು ಗಂಡು ಮಗುವಿದ್ದು, ಆ ಮಗುವಿನ ಹೆಸರು ಇಜಾನ್ ಮಿರ್ಜಾ ಮಲಿಕ್.

77

ಶೋಯೆಬ್ ಮಲಿಕ್‌ನಿಂದ ತಲಾಖ್ ಪಡೆದ ಬಳಿಕ ಇಜಾನ್ ಮಿರ್ಜಾ ಮಲಿಕ್ ತಮ್ಮ ತಾಯಿ ಸಾನಿಯಾ ಮಿರ್ಜಾ ಜತೆಗಿದ್ದಾರೆ. ಸಾನಿಯಾ ಮಿರ್ಜಾ ಭವಿಷ್ಯದಲ್ಲಿ ಮದುವೆಯಾಗುತ್ತಾರೋ ಅಥವಾ ಒಂಟಿಯಾಗಿಯೇ ಜೀವನ ಸಾಗಿಸುತ್ತಾರೋ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories