SA20 ಲೀಗ್‌ನಲ್ಲಿ ಪಾಲ್ಗೊಂಡಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗ ಫ್ಯಾಬಿಯನ್ ಅಲೆನ್ ಅವರಿಗೆ ಆಘಾತಕ್ಕೊಳಗಾಗುವ ಘಟನೆ ನಡೆದಿದ್ದು, ಗನ್ ಹಿಡಿದು ದುಷ್ಕರ್ಮಿಗಳು ಅವರನ್ನು ಲೂಟಿ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಹೌದು, ಜೋಹಾನ್ಸ್‌ಬರ್ಗ್‌ನಲ್ಲಿ ಫ್ಯಾಬಿಯನ್ ಅಲೆನ್ ಜತೆ ಈ ದುರ್ಘಟನೆ ನಡೆದಿದೆ. ಅಲ್ಲಿ ಅಲೆನ್‌ಗೆ ಬಂಧೂಕು ತೋರಿಸಿ ಬೆದರಿಸಿ ಅವರನ್ನು ಲೂಟಿ ಮಾಡಿದ್ದಾರೆ. ಅಲೆನ್ ಐಪಿಎಲ್‌ನಲ್ಲಿಯೂ ಆಡಿದ್ದಾರೆ.
28 ವರ್ಷದ ಕೆರಿಬಿಯನ್ ಮೂಲದ ಆಲ್ರೌಂಡರ್ ಫ್ಯಾಬಿಯನ್ ಅಲೆನ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದ ಅವರು ಸದ್ಯ SA20 ಲೀಗ್‌ನಲ್ಲಿ ಪಾರ್ಲ್ಸ್ ರಾಯಲ್ಸ್ ಫ್ರಾಂಚೈಸಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.
ದಕ್ಷಿಣ ಆಫ್ರಿಕಾದ ಪ್ರಖ್ಯಾತ ಹೋಟೆಲ್‌ನಲ್ಲಿ ಹೊರಗಡೆ ಫ್ಯಾಬಿಯನ್ ಅಲೆನ್ ನಿಂತಿದ್ದಾಗ, ಬಂಧೂಕುದಾರಿ ದರೋಡೆಕಾರರು ಬಂದು ಗನ್ ಪಾಯಿಂಟ್ ಹಿಡಿದು ಬಲವಂತವಾಗಿ ಅಲೆನ್ ಅವರ ಮೊಬೈಲ್ ಫೋನ್, ಬ್ಯಾಗ್ ಹಾಗೂ ಇನ್ನಿತರ ವಸ್ತುಗಳನ್ನು ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ.
Cricbuzz ವರದಿಯ ಪ್ರಕಾರ, ಫಿನ್ ಅಲೆನ್ ಅವರನ್ನು ಅವರ ತಂಡವು ಉಳಿದುಕೊಂಡಿದ್ದ ಪ್ರಖ್ಯಾತ ಸ್ಯಾಂಡ್‌ಟನ್ ಸನ್ ಹೋಟೆಲ್ ಬಳಿ ಈ ದುರ್ಘಟನೆ ನಡೆದಿದೆ. ಈ ಶಾಕ್‌ನಿಂದ ಕ್ರಿಕೆಟಿಗ ಹೊರಬಂದಂತಿಲ್ಲ.
ಈ ದುರ್ಘಟನೆಯು ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರ ಭದ್ರತೆಯ ಕುರಿತಂತೆ ಪ್ರಶ್ನೆಗಳು ಏಳುವಂತೆ ಮಾಡಿವೆ. ಈ ಘಟನೆಯ ಸಂಬಂಧ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯಾಗಲಿ ಅಥವಾ ಪಾರ್ಲ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
Fabian Allen
ಎರಡನೇ ಆವೃತ್ತಿಯ SA20 ಲೀಗ್ ಟೂರ್ನಿಯು ಇದೀಗ ಪ್ಲೇ ಆಫ್ ಹಂತ ತಲುಪಿದೆ. ಪಾರ್ಲ್ ರಾಯಲ್ಸ್ ತಂಡವು ಇದೀಗ ಫೆಬ್ರವರಿ 07ರಂದು ಪ್ಲೇ ಆಫ್‌ನ ಎಲಿಮಿನೇಟರ್ ಪಂದ್ಯವನ್ನಾಡಲು ಸಜ್ಜಾಗಿದೆ.