ವಿರಾಟ್ ಕೊಹ್ಲಿ ಬಳಿಯಿರುವ 10 ದುಬಾರಿ ವಸ್ತುಗಳಿವು..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

Published : Feb 04, 2024, 06:02 PM IST

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಖಾಸಗಿ ಬದುಕಿನ ಬಗ್ಗೆ ತಿಳಿಯಲು ಆಸಕ್ತರಾಗಿರುತ್ತಾರೆ. ನಾವಿಂದು ವಿರಾಟ್ ಕೊಹ್ಲಿ ಬಳಿಯಿರುವ ದುಬಾರಿ ವಸ್ತುಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ  

PREV
111
ವಿರಾಟ್ ಕೊಹ್ಲಿ ಬಳಿಯಿರುವ 10 ದುಬಾರಿ ವಸ್ತುಗಳಿವು..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಟೀಂ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ನಾವಿಂದು ವಿರಾಟ್ ಕೊಹ್ಲಿ ಬಳಿಯಿರುವ ಟಾಪ್ 10 ದುಬಾರಿ ಉತ್ಫನ್ನಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ

211

ಮುಂಬೈನ ವರ್ಲಿಯಲ್ಲಿರುವ ವಿರಾಟ್ ಕೊಹ್ಲಿಯ ಅಪಾರ್ಟ್‌ಮೆಂಟ್‌ನ ಮೌಲ್ಯ ಬರೋಬ್ಬರಿ 34 ಕೋಟಿ ರುಪಾಯಿಗಳು. ಇದು ವಿರಾಟ್ ಕೊಹ್ಲಿ ಬಳಿ ಇರುವ ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ಎನಿಸಿದೆ.

311

ವಿರಾಟ್ ಕೊಹ್ಲಿ ಕೇವಲ ಕ್ರಿಕೆಟಿಗ ಮಾತ್ರವಲ್ಲ, ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೋವಾ ಫುಟ್ಬಾಲ್ ಕ್ಲಬ್ ತಂಡದ ಮಾಲೀಕ ಕೂಡಾ ಹೌದು. ಐಎಸ್‌ಎಲ್ ಟೂರ್ನಿಯಲ್ಲಿ ಗೋವಾ ಎಫ್‌ಸಿ ತಂಡದ ಮೌಲ್ಯ 33 ಕೋಟಿ ರುಪಾಯಿಗಳಾಗಿವೆ.

411

ವಿರಾಟ್ ಕೊಹ್ಲಿ ಬಳಿಯಿರುವ ಮತ್ತೊಂದು ದುಬಾರಿ ಉತ್ಫನ್ನವೆಂದರೆ ರೋಲೆಕ್ಸ್ ಡೈಟೋನಾ ರೈನ್‌ಬೋ ಎವರೋಸ್ ಗೋಲ್ಡ್‌ ವಾಚ್. ಈ ದುಬಾರಿ ವಾಚಿನ ಮೌಲ್ಯ ಬರೋಬ್ಬರಿ 69 ಲಕ್ಷ ರುಪಾಯಿಗಳು.

511

ವಿರಾಟ್ ಕೊಹ್ಲಿ ಬಳಿ ಹಲವಾರು ಐಶಾರಾಮಿ ಕಾರುಗಳ ಕಲೆಕ್ಷನ್‌ಗಳಿವೆ. ಈ ಪೈಕೀ 1.1 ಕೋಟಿ ರುಪಾಯಿ ಮೌಲ್ಯದ Audi RS5 Coupe ಕಾರಿಯ ಒಡೆಯ ನಮ್ಮ ಆರ್‌ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ.

611

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಬಳಿ ಐಶಾರಾಮಿ ರೇಂಜ್ ರೋವರ್ ಕಾರು ಕೂಡಾ ಇದೆ. ಈ ರೇಂಜ್ ರೋವರ್ ಕಾರಿನ ಮೌಲ್ಯ ಸುಮಾರು 2.7 ಕೋಟಿ ರುಪಾಯಿಗಳು.

711

ಇನ್ನು ಆರ್‌ಸಿಬಿ ಮೂಲದ ಕ್ರಿಕೆಟಿಗ ವಿರಾಟ್ ಕೊಹ್ಲಿ ಬೆಂಟ್ಲಿ ಕಂಪನಿಯ ಐಶಾರಾಮಿ ಕಾರು ಕೂಡಾ ಇದೆ. ವಿರಾಟ್ ಕೊಹ್ಲಿ 2019ರಲ್ಲಿ ಬೆಂಟ್ಲಿ ಪ್ಲೈಯಿಂಗ್ ಸ್ಪೋರ್ ಇದ್ದು, ಇದರ ಮೌಲ್ಯ ಬರೋಬ್ಬರಿ 3.97 ಕೋಟಿ ರುಪಾಯಿಗಳಾಗಿವೆ.

811

ವಿರಾಟ್ ಕೊಹ್ಲಿ ಫ್ಯಾಷನ್ ಬ್ರಾಂಡ್‌ ಆಗಿರುವ WROGN ಕಂಪನಿಯ ಮಾಲೀಕ ಕೂಡಾ ಹೌದು. ಈ WROGN ಕಂಪನಿಯ ಮಾರುಕಟ್ಟೆಯ ಮೌಲ್ಯ ಸುಮಾರು 13.2 ಕೋಟಿ ರುಪಾಯಿಗಳಾಗಿವೆ.

911

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯು ಗುರ್‌ಗಾವ್‌ನಲ್ಲಿ ಐಶಾರಾಮಿ ಬಂಗ್ಲೆಯನ್ನು ಖರೀದಿಸಿದ್ದಾರೆ. ವಿರುಷ್ಕಾ ದಂಪತಿ ಈ ಖರೀದಿಸಿದ ಬಂಗ್ಲೆಯ ಮೌಲ್ಯ ಬರೋಬ್ಬರಿ 80 ಕೋಟಿ ರುಪಾಯಿಗಳಾಗಿವೆ. 

1011

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಮುಂಬೈನ ವರ್ಲಿಯಲ್ಲಿ ಮಾತ್ರವಲ್ಲದೇ ವರ್ಸೋವಾದಲ್ಲಿಯೂ ಒಂದು ಪ್ಲಾಟ್ ಹೊಂದಿದ್ದಾರೆ. ಈ ಪ್ಲಾಟ್‌ನ ಮೌಲ್ಯ ಬರೋಬ್ಬರಿ 10 ಕೋಟಿ ರುಪಾಯಿಗಳಾಗಿವೆ.

1111

ಇನ್ನು ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ಮಾಲೀಕತ್ವದ One8 Commune ಹೆಸರಿನ ರೆಸ್ಟೋರೆಂಟ್‌ಗಳು ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಮೌಲ್ಯ ಕೋಟಿ ಲೆಕ್ಕಾಚಾರದಲ್ಲಿದೆ.

Read more Photos on
click me!

Recommended Stories