ರನ್‌ ಮಳೆ ಸುರಿಸಿದ್ರೂ ಇಂಡಿಯನ್‌ ಟೀಂನಿಂದಲೇ ವೈಭವ್‌ ಸೂರ್ಯವಂಶಿಗೆ ಅನ್ಯಾಯ? ಕೊನೆಗೂ ಉತ್ತರ ಕೊಟ್ಟ BCCI

Published : Jul 04, 2026, 05:47 PM IST

Indian Cricketer Vaibhav Sooryavanshi: ಐಪಿಎಲ್‌ನಲ್ಲಿ ತನಗೆ ಬೌಲಿಂಗ್‌ ಮಾಡ್ತಿರೋದು ಜಸ್ಪ್ರೀತ್‌ ಬೂಮ್ರಾ ಎನ್ನೋದು ಗೊತ್ತಿದ್ದೇ, ಮೊದಲ ಬೌಲ್‌ನಲ್ಲಿ ಸಿಕ್ಸರ್‌ ಬಾರಿಸಿದ್ದ 15 ವರ್ಷದ ಹುಡುಗ ವೈಭವ್‌ ಸೂರ್ಯವಂಶಿ ಬಗ್ಗೆಯೇ ಚರ್ಚೆ ಶುರು ಆಗಿದೆ. ಹಾಗಾದರೆ ಈಗ ಆಟ ಆಡಲು ಅವಕಾಶ ಇದೆಯಾ?

PREV
15
ಆಟ ಆಡಲು ಅವಕಾಶ ಕೊಟ್ಟಿಲ್ಲ

ಇಂಡಿಯನ್‌ ಟೀಂಗೆ ವೈಭವ್‌ರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮೊದಲು ಆಗ್ರಹ ಮಾಡಲಾಯ್ತು. ಈಗ ಐರ್ಲೆಂಡ್‌, ಇಂಗ್ಲೆಂಡ್‌ ಸರಣಿಗಳಲ್ಲಿ ಆಟ ಆಡಲು ಅವಕಾಶ ಕೊಟ್ಟಿಲ್ಲ ಎಂದು ಕ್ರಿಕೆಟ್‌ ಪ್ರಿಯರಿಗೆ ಬೇಸರ ಆಗುತ್ತಿದೆ.

25
ಅನೇಕರು ಇಂಡಿಯನ್‌ ಟೀಂಗೆ ಟೀಕೆ ಮಾಡಿದ್ರು

ಐಪಿಎಲ್ 2026 ರಲ್ಲಿ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ, 237.31 ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಗಳಿಸಿದ್ದರು. ಇವರ ಆಟವನ್ನು ನೋಡಿ ಕ್ರಿಕೆಟ್‌ ದಿಗ್ಗಜರೇ ಬೆರಗಾಗಿದ್ದಾರೆ. ಅಷ್ಟೇ ಅಲ್ಲದೆ ವೈಭವ್‌ರಲ್ಲಿ ಎಐ ಚಿಪ್‌ ಇರಬಹುದಾ ಎಂದು ಕೂಡ ಕೆಲವರು ಹೇಳಿದ್ದುಂಟು. ಐರ್ಲೆಂಡ್, ಇಂಗ್ಲೆಂಡ್ ಸರಣಿಗಳಲ್ಲಿ ವೈಭವ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲು ಅವಕಾಶ ಸಿಕ್ಕಿಲ್ಲ ಎಂಬ ಬಗ್ಗೆ ಕೆಲವರು ಟೀಕೆ ಮಾಡಿದ್ದರು. ಇದಕ್ಕೆ ಫಸ್ಟ್‌ ಟೈಮ್‌ ಬಿಸಿಸಿಐ ಪ್ರತಿಕ್ರಿಯೆ ನೀಡಿದೆ.

35
ರಾಜೀವ್‌ ಶುಕ್ಲಾ ಏನಂದ್ರು?

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡಿ, "ಯಾರನ್ನು ಆಟ ಆಡಿಸಬೇಕು ಎನ್ನೋದು ಕೋಚ್, ಕ್ಯಾಪ್ಟನ್‌ ನಿರ್ಧಾರ ಮಾಡ್ತಾರೆ. ಸರಿಯಾದ ಟೈಮ್‌ ಬಂದಾಗ ಸೂರ್ಯವಂಶಿಗೆ ಖಂಡಿತ ಅವಕಾಶ ಸಿಗುತ್ತದೆ, ಅನಗತ್ಯ ಗೊಂದಲ ಬೇಡ" ಎಂದು ಹೇಳಿದ್ದಾರೆ.

45
ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಏನಂತಾರೆ?

ಭಾರತದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಪ್ರಕಾರ, ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಅವರಂತಹ ಆಟಗಾರರಿಗೆ ಬೆಂಬಲ ಕೊಡಬೇಕು. ಟೀಂನಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಹಳೆಯ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದು ಅಗತ್ಯ ಎನ್ನಲಾಗಿದೆ.

55
ಮಾಜಿ ಕ್ರಿಕೆಟರ್‌ಗಳಿಂದಲೂ ಒತ್ತಾಯ

ಮಾಜಿ ಕ್ರಿಕೆಟ್‌ ಆಟಗಾರರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್, ರವಿಶಾಸ್ತ್ರಿ ಮುಂತಾದವರು ವೈಭವ್‌ರನ್ನು ಆಟ ಆಡಲು ಬಿಡಿ ಎಂದು ಹೇಳುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories