ಕ್ಯಾಮರಾ ಕಣ್ಣಲ್ಲಿ ಜಗತ್ತಿನ ವಿವಿಧೆಡೆ ಶುಕ್ರ ಚಂದ್ರ ಜೊತೆಯಾಗಿ ಕಂಡ ಕ್ಷಣ

First Published | Mar 26, 2023, 4:53 PM IST

ಕಳೆದೊಂದು ತಿಂಗಳಿಂದ ಚಂದ್ರ ಹಾಗೂ ಶುಕ್ರ  ಜೊತೆಯಾಗಿ ಆಕಾಶದಲ್ಲಿ ಕಾಣಸಿಗುತ್ತಿವೆ. ಇವರೆಡರ ಜೊತೆಯಾಟ ನೀಲಾಕಾಶಕ್ಕೆ ಮತ್ತಷ್ಟು ರಂಗು ನೀಡಿವೆ.  ಜಗತ್ತಿನ ವಿವಿಧೆಡೆ ಇವು ಒಂದೊಂದು ರೀತಿ ಕಾಣಿಸುತ್ತಿವೆ. ಇವುಗಳ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಶುಕ್ರ ಹಾಗೂ ಚಂದ್ರ ಜೊತೆಗಿರುವ ನೂರಾರು ಫೋಟೋಗಳು ಹರಿದಾಡುತ್ತಿವೆ. ಇದರ ಜೊತೆಗೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಶುಕ್ರ ಹಾಗೂ ಚಂದ್ರ ಜೊತೆಗಿರುವ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ. ಇದಕ್ಕೆ ಪ್ರತಿಯಾಗಿ ಜಗತ್ತಿನ ವಿವಿಧೆಡೆ ಇರುವ ಅನೇಕರು  ತಾವಿರುವ ಸ್ಥಳದಿಂದ ಚಂದ್ರ ಹಾಗೂ ಶುಕ್ರ ಹೇಗೆ ಕಾಣಿಸುತ್ತಾರೆ ಎಂದು ಫೋಟೋ ತೆಗೆದು ಟ್ವಿಟ್ಟರ್‌ಗೆ ಅಪ್‌ಲೋಡ್ ಮಾಡಿದ್ದಾರೆ.  ಹೀಗಾಗಿ,  ಜಗತ್ತಿನ ವಿವಿಧೆಡೆ ಶುಕ್ರ ಹಾಗೂ ಚಂದ್ರರು ಹೇಗೆ ಕಾಣಿಸುತ್ತಾರೆ ಎಂಬುದನ್ನು ಇಲ್ಲಿ ನೋಡಬಹುದಾಗಿದೆ.

ಕೋಲ್ಕತ್ತಾದಲ್ಲಿ ಕಂಡ ಶುಕ್ರ ಚಂದ್ರ ಸಂಯೋಗ

ಅಪರೂಪದ ಚಂದ್ರ ಮತ್ತು ಶುಕ್ರ ಸಂಯೋಗವು ರಾತ್ರಿ ಆಕಾಶವನ್ನು ಬೆಳಗಿಸುತ್ತವೆ. ಶುಕ್ರ ಕ್ರಮೇಣ ಚಂದ್ರನಿಂದ ದೂರ ಸರಿಯುವವರೆಗೆ ಮತ್ತುಆಕಾಶಕಾಯಗಳು ಅದೇ ದೃಷ್ಟಿ ಕ್ಷೇತ್ರದಲ್ಲಿ ಗೋಚರಿಸುತ್ತವೆ.

ನಮ್ಮ ಆಗುಂಬೆಯಲ್ಲಿ ಕಂಡು ಬಂದ ಶುಕ್ರ ಚಂದ್ರ ಸಂಯೋಗ

ನಮ್ಮ ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹವಾದ ಚಂದ್ರ ಮತ್ತು ಶುಕ್ರ,  ಶುಕ್ರವಾರ ಆಕಾಶದಲ್ಲಿ ಕಂಡಕ್ಷಣ.  ಪ್ರಪಂಚದಾದ್ಯಂತ ಅಪರೂಪದ ಈ ವಿದ್ಯಾಮಾನವನ್ನು  ಸಾವಿರಾರು ಜನ ವೀಕ್ಷಿಸಿದ್ದಾರೆ. 

Latest Videos


ಚಿಲಿಯ ಬಂದರು ನಗರಿ Valparaísoದಲ್ಲಿ ಶುಕ್ರ ಚಂದ್ರ ಸಂಯೋಗ

ಚಿಲಿಯ ಬಂದರು ನಗರಿ Valparaísoದಲ್ಲಿ  ಶುಕ್ರ ಚಂದ್ರ ಸಂಯೋಗ,  ಶುಕ್ರ ಹಾಗೂ ಚಂದ್ರ ಕಿಲೋಮೀಟರ್ ಅಂತರದಲ್ಲಿದ್ದರೂ ಸಹ, ಎರಡೂ ಬಹುತೇಕ ಸಮೀಪ ಒಂದೇ ರೇಖೆಯಲ್ಲಿ ಕಾಣಿಸುತ್ತಿವೆ.

ಯುಕೆಯ ವೆಸ್ಟ್ ಸೋಮರ್‌ಸೆಟ್‌ನಲ್ಲಿ ಚಂದ್ರ ಶುಕ್ರ ಸಂಯೋಗ.

ಯುಕೆಯ ವೆಸ್ಟ್ ಸೋಮರ್‌ಸೆಟ್‌ನಲ್ಲಿ ಚಂದ್ರ ಶುಕ್ರ ಸಂಯೋಗ. ಆಕಾಶದಲ್ಲಿ ಎರಡು ಆಕಾಶ ಗ್ರಹಗಳು ಪರಸ್ಪರ ಹತ್ತಿರ ಕಾಣಿಸಿಕೊಂಡಾಗ ಗ್ರಹಗಳ ಸಂಯೋಗ ಸಂಭವಿಸುತ್ತದೆ.

ಬ್ರೆಜಿಲ್‌ನ ಬೆಲೊ ಹಾರಿಜಾಂಟೆಯಲ್ಲಿ ಕಂಡು ಬಂದ ಶುಕ್ರ ಚಂದ್ರ ಸಂಯೋಗ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಟ್ವಿಟರ್‌ನಲ್ಲಿ ಬಳಕೆದಾರರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಅಪರೂಪದ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳಲು ನಾಸಾ ಜನರಿಗೆ ಮನವಿ ಮಾಡಿತ್ತು. 

ಅಮೆರಿಕಾದ ವರ್ಜಿನಿಯಾ

ಸೂರ್ಯಾಸ್ತದ ಸ್ವಲ್ಪ ಹೊತ್ತಿನ ನಂತರ  ಅಮೆರಿಕಾದ ವರ್ಜಿನಿಯಾದಲ್ಲಿ ಕಂಡು ಬಂದ ಶುಕ್ರ ಚಂದ್ರ ಸಂಯೋಗ. ಈ ಸಂಜೆ ಸೂರ್ಯಾಸ್ತದ ನಂತರ ಚಂದ್ರನನ್ನು ಕಾಣಲು ಪಶ್ಚಿಮಕ್ಕೆ ನೋಡಿ,  ಜೊತೆಗೆ ಪ್ರಜ್ವಲಿಸುವ ಪ್ರಕಾಶಮಾನವಾದ ಶುಕ್ರನು ಕಾಣುತ್ತಾನೆ ಎಂದು ನಾಸಾ ಟ್ವಿಟ್ ಮಾಡಿತ್ತು.

ತಮಿಳುನಾಡಿನಲ್ಲಿ ಕಂಡು ಬಂದ ಶುಕ್ರ ಚಂದ್ರ ಸಂಯೋಗ.

ಈ ಎರಡು ಆಕಾಶಕಾಯಗಳು ನೋಡುಗರಿಗೆ ಒಂದೇ ರೇಖೆಯಲ್ಲಿವೆ ಹಾಗೂ ಪರಸ್ಪರ ಹತ್ತಿರದಲ್ಲಿವೆ ಎಂಬ ಭ್ರಮೆಯನ್ನು ಸೃಷ್ಟಿಸುತ್ತವೆ ಎಂದು ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಔಟ್ರೀಚ್ ಮತ್ತು ಎಜುಕೇಶನ್ ವಿವರಿಸಿದೆ.

ಮಲೇಷಿಯಾ

ಮಲೇಷಿಯಾದಲ್ಲಿ ಕಂಡು ಬಂದ ಶುಕ್ರ ಚಂದ್ರ ಸಂಯೋಗ.  ನಮ್ಮ ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹವಾದ ಚಂದ್ರ ಮತ್ತು ಶುಕ್ರ,  ಶುಕ್ರವಾರ ಆಕಾಶದಲ್ಲಿ ಕಂಡಕ್ಷಣ.  

click me!