Aerospace Technology| ಏರೋಸ್ಪೇಸ್‌ಗೆ ಬೆಂಗ್ಳೂರಲ್ಲಿ ವಿಫುಲ ಅವಕಾಶ: ಸಿಎಂ ಬೊಮ್ಮಾಯಿ

First Published Nov 13, 2021, 8:34 AM IST

ಬೆಂಗಳೂರು(ನ.13):  ಏರೋಸ್ಪೇಸ್‌ ತಂತ್ರಜ್ಞಾನಕ್ಕೆ(Aerospace Technology) ನಗರದಲ್ಲಿ ವಿಫುಲ ಅವಕಾಶಗಳಿದ್ದು, ಲಾಕ್‌ಹೀಡ್‌ ಮಾರ್ಟಿನ್‌ ಸಂಸ್ಥೆ ತನ್ನ ಅಸ್ತಿತ್ವವನ್ನು ಹೊಂದಲು ಅಗತ್ಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಲಾಕ್‌ಹೀಡ್‌ ಮಾರ್ಟಿನ್‌ ಸಂಸ್ಥೆಯ(Lockheed Martin Institute) ಅಂತಾರಾಷ್ಟ್ರೀಯ ಸರಬರಾಜು ಸರಪಳಿ ಮತ್ತು ಕೈಗಾರಿಕಾ ಅಭಿವೃದ್ಧಿ ಉಪಾಧ್ಯಕ್ಷ ವಿನ್ಸೆಂಟ್‌ ಪ್ಯಾನ್ಜೆರಾ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಭಾರತ(India) ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ವಿಶ್ವದಲ್ಲಿಯೇ(World) 6ನೇ ಸ್ಥಾನವನ್ನು ಹೊಂದಿದೆ. ಕರ್ನಾಟಕ(Karnataka) ಮತ್ತು ಬೆಂಗಳೂರು(Bengaluru) ಭವಿಷ್ಯದ ತಂತ್ರಜ್ಞಾನದ ಶಕ್ತಿಕೇಂದ್ರಗಳು. ಲಾಕ್‌ಹೀಡ್‌ ಮಾರ್ಟಿನ್‌ ಕಂಪನಿ ಜಗತ್ತಿನ ಪ್ರಮುಖ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಾಗಿದೆ ಎಂದ ಸಿಎಂ

ಏರೋಸ್ಪೇಸ್‌ ಅವಕಾಶಗಳು ಬೆಂಗಳೂರಿನಲ್ಲಿ ಅಧಿಕವಾಗಿವೆ. ರಾಜ್ಯ ಸರ್ಕಾರದ(Government of Karnataka) ಹೂಡಿಕೆದಾರ ಸ್ನೇಹಿ ನೀತಿ(Investor Friendly Policy) ಮತ್ತು ಪ್ರೋತ್ಸಾಹಕಗಳಿಂದಾಗಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣವನ್ನು ಹೊಂದಿದೆ ಎಂದು ತಿಳಿಸಿದ ಬಸವರಾಜ ಬೊಮ್ಮಾಯಿ 

ಈ ಸಂದರ್ಭದಲ್ಲಿ ಐಟಿ-ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

click me!