387 ವರ್ಷಗಳ ಬಳಿಕ ಶನಿ-ಗುರು ಸಮಾಗಮ ಸಂಭ್ರಮ

First Published | Dec 22, 2020, 9:38 AM IST

ಬೆಂಗಳೂರು(ಡಿ.22): 387 ವರ್ಷಗಳ ಬಳಿಕ ಶನಿ ಹಾಗೂ ಗುರು ಗ್ರಹಗಳು ಪರಸ್ಪರ ಸಮೀಪಿಸಿದ ಅಪರೂಪದ ದೃಶ್ಯವನ್ನು ನೆಹರು ತಾರಾಲಯದಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಸೇರಿದಂತೆ ನಾಗರಿಕರು ಕಣ್ತುಂಬಿಕೊಂಡು ಆನಂದಿಸಿದ್ದಾರೆ. 

ಅಪರೂಪದ ಖಗೋಳ ವಿದ್ಯಮಾನವನ್ನು ನೋಡಬೇಕೆಂಬ ಉತ್ಸಾಹದಲ್ಲಿ ಜನರು ಸರತಿ ಸಾಲಿನಲ್ಲಿ ಕಾಯ್ದು ನಿಂತಿದ್ದರು.
ಆಗಸದಲ್ಲಿ ನಡೆಯುವ ಈ ಕೌತುಕವನ್ನು ಕಣ್ತುಂಬಿಕೊಳ್ಳಬೇಕೆಂಬ ಹಂಬಲದಲ್ಲಿ ಜನರು ಗುಂಪು ಗುಂಪಾಗಿ ಬಂದಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಉದ್ದದ ಸಾಲಿನಲ್ಲಿ ನಿಂತು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು.
Tap to resize

ಸೋಮವಾರ ಸಂಜೆ 5.28ರಿಂದ 7.12ರ ವರೆಗೆ ಅವಧಿಯಲ್ಲಿ ಗ್ರಹಗಳು ಪರಸ್ಪರ ಸಮೀಪಕ್ಕೆ ಬಂದು ಗೋಚರವಾಗುವ ದೃಶ್ಯಗಳನ್ನು ನೋಡಿ ಆನಂದಿಸಿದರು.
ಕೇವಲ 6 ನಿಮಿಷಗಳ ಅಂತರದಲ್ಲಿ ಸಮಾಗಮವಾಗುವ ದೃಶ್ಯ ಕಾಣುತ್ತಿದ್ದಂತೆ ಎಲ್ಲರೂ ಜೋರಾಗಿ ಕೂಗಿ ಸಂಭ್ರಮಿಸಿದರು. ಬರಿಗಣ್ಣಿನಿಂದಲೂ ನೋಡಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕೌತುಕವನ್ನು ವೀಕ್ಷಿಸಿದರು.

Latest Videos

click me!