ಶೂಟಿಂಗ್‌ ಅಂಗಳಕ್ಕೆ ಇಳಿದ ಯುವ ರಾಜ್‌ಕುಮಾರ್;ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದ ಸಂತೋಷ್‌ ಆನಂದ್‌ರಾಮ್‌

Published : Apr 10, 2023, 10:04 AM IST

ಯುವ ರಾಜ್‌ಕುಮಾರ್ ನಟನೆಯ ಮೊದಲ ಚಿತ್ರದ ದೃಶ್ಯಕ್ಕೆ ಸಂತೋಷ್ ಆನಂದ್‌ರಾಮ್ ಕ್ಲಾಪ್‌ ಮಾಡಿದ್ದಾರೆ. 

PREV
15
 ಶೂಟಿಂಗ್‌ ಅಂಗಳಕ್ಕೆ ಇಳಿದ ಯುವ ರಾಜ್‌ಕುಮಾರ್;ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದ ಸಂತೋಷ್‌ ಆನಂದ್‌ರಾಮ್‌

ಯುವರಾಜ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ ‘ಯುವ’ ಚಿತ್ರಕ್ಕೆ ಇಂದಿನಿಂದ (ಏಪ್ರಿಲ್‌ 9) ಚಿತ್ರೀಕರಣ ಆರಂಭವಾಗಿದೆ. ಮೊದಲ ಹಂತದ ಶೂಟಿಂಗ್‌ ಬೆಂಗಳೂರಿನಲ್ಲೇ ನಡೆಯುತ್ತಿದೆ. 

25

 ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್‌ ನಿರ್ಮಿಸುತ್ತಿದೆ. ವಿಶೇಷ ಎಂದರೆ ತಮ್ಮ ನಿರ್ದೇಶನದ ‘ಯುವ’ ಚಿತ್ರದ ಮೊದಲ ದೃಶ್ಯಕ್ಕೆ ಸಂತೋಷ್‌ ಆನಂದ್‌ರಾಮ್‌ ಅವರೇ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನ ಕೊಟ್ಟರು.

35

ಮೊದಲ ಹಂತದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯಲಿದೆ ಎಂಬುದು ಸದ್ಯದ ಮಾಹಿತಿ. ಅದ್ದೂರಿ ಸೆಟ್‌ಗಳು ಹಾಗೂ ಆ್ಯಕ್ಷನ್‌ ಈ ಚಿತ್ರದ ಹೈಲೈಟ್‌ಗಳಲ್ಲಿ ಒಂದು. 

45

ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟ್ರಿಯಲ್ಲಿ ಹಾಕಿರುವ ಸೆಟ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಸಾಹಸ ನಿರ್ದೇಶಕ ಅರ್ಜುನ್‌ ಅವರ ಸಾರಥ್ಯದಲ್ಲಿ ಆ್ಯಕ್ಷನ್‌ ಸೀನ್‌ಗಳ ಸಂಯೋಜನೆ ನಡೆಯುತ್ತಿದೆ. 

55

ಶ್ರೀಶ ಕೂದುವಳ್ಳಿ ಕ್ಯಾಮೆರಾ, ಅಜನೀಶ್‌ ಲೋಕನಾಥ್‌ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಆಗಿದ್ದು, ಸಾಕಷ್ಟುದೊಡ್ಡ ಪ್ರಮಾಣದಲ್ಲಿ ಟೀಸರ್‌ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದವು. ಈಗ ಚಿತ್ರೀಕರಣ ಶುರುವಾಗಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Read more Photos on
click me!

Recommended Stories