ಸೂಟ್‌ ಧರಿಸಿ, ಕೈಯಲ್ಲಿ ವಿಂಟೇಜ್ ರಿವಾಲ್ವರ್‌ ಹಿಡಿದ ಶಿವಣ್ಣ: ಥ್ರಿಲ್ ಆದ ಫ್ಯಾನ್ಸ್!

Published : Jul 10, 2025, 05:59 PM IST

ಹೇಮಂತ್‌ ರಾವ್‌ ನಿರ್ದೇಶನದ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌ʼ ಚಿತ್ರದ ಶಿವರಾಜ್‌ಕುಮಾರ್‌ ಅವರ ಲುಕ್‌ ಬಿಡುಗಡೆಯಾಗಿದೆ.

PREV
15

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಚಿತ್ರಗಳ ಯಶಸ್ಸಿನ ಬಳಿಕ ನಿರ್ದೇಶಕ ಹೇಮಂತ್‌ ರಾವ್‌ ಕೈಗೆತ್ತಿಕೊಂಡಿರುವ 666 ಆಪರೇಷನ್ ಡ್ರೀಮ್ ಥಿಯೇಟರ್‌ ಚಿತ್ರ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಕೆರಳಿಸಿದೆ.

25

ಇತ್ತೀಚೆಗೆ ನಟ ಧನಂಜಯ್ ಅವರ ಎರಡು ಲುಕ್‌ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರತಂಡವೀಗ ಶಿವರಾಜ್‌ಕುಮಾರ್‌ ಅವರ ಫಸ್ಟ್‌ ಲುಕ್‌ ಅನಾವರಣಗೊಳಿಸಿದೆ. ಇಂತಹ ಲುಕ್‌ನಲ್ಲಿ ಶಿವಣ್ಣನನ್ನು ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

35

ರೆಟ್ರೋ ಲುಕ್ಕಿನಲ್ಲಿ ಕಾಣಿಸಿಕೊಂಡಿರುವ ಶಿವರಾಜ್‌ಕುಮಾರ್‌ '666 ಆಪರೇಷನ್‌ ಡ್ರೀಮ್‌ ಥಿಯೇಟರ್‌' ಚಿತ್ರದಲ್ಲಿ ಸ್ಪೈ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಸೂಟ್‌ ಧರಿಸಿ, ಕೈಯಲ್ಲಿ ವಿಂಟೇಜ್ ರಿವಾಲ್ವರ್‌ ಹಿಡಿದು ತೀಕ್ಷ್ಣ ನೋಟದೊಂದಿಗೆ ಹೆಜ್ಜೆ ಹಾಕುತ್ತಾ ಸ್ಟೈಲಿಶ್ ಆಗಿ ಕಂಡು ಬಂದಿದ್ದಾರೆ.

45

ಅವರ ಪಾತ್ರದ ಝಲಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇನ್ನು ಶಿವಣ್ಣ ಪ್ರತಿ ಸಿನಿಮಾದಲ್ಲಿಯೂ, ಪ್ರತಿ ಪಾತ್ರದಲ್ಲಿಯೂ ಹೊಸತನ ನೀಡುತ್ತಾರೆ. ಆ ಸಾಲಿಗೆ ಈ ಚಿತ್ರವೂ ಕೂಡ ಸೇರ್ಪಡೆಯಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ. ಇದು ರೆಟ್ರೋ ಕಥೆಯನ್ನು ಒಳಗೊಂಡಿದೆ.

55

ಸದ್ಯ ಡಾ. ವೈಶಾಕ್ ಜೆ. ಗೌಡ ಅವರ ವೈಶಾಕ್ ಜೆ. ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಹಾಗೂ ವಿಶ್ವಾಸ್ ಕಶ್ಯಪ್ ನಿರ್ಮಾಣ ವಿನ್ಯಾಸ , ಇಂಚರಾ ಸುರೇಶ್ ಕಾಸ್ಟೈಮ್ ಡಿಸೈನ್ ಇದೆ.

Read more Photos on
click me!

Recommended Stories