ವನಿತಾ ವಿಜಯ್ ಪತಿ ನಿಧನ, Egg Freeze ಮಾಡಿದ ಉಪಾಸನಾ; ಮೇ ತಿಂಗಳು ರೌಂಡಪ್!

Published : Dec 16, 2023, 02:06 PM IST

ಪ್ರತಿ ವರ್ಷ ಮೇ ತಿಂಗಳು ಸಖತ್ ಕೂಲ್ ಆಗಿರುತ್ತದೆ. ಅದೇ ರೀತಿ ಅಂದು ನಡೆದ ಕೂಲ್ ವಿಚಾರಗಳಲ್ಲಿ ಮಿಸ್ ಮಾಡಲೇ ಬಾರದಂತ 9 ನ್ಯೂಸ್ ಇಲ್ಲಿದೆ.... 

PREV
19
ವನಿತಾ ವಿಜಯ್ ಪತಿ ನಿಧನ, Egg Freeze ಮಾಡಿದ ಉಪಾಸನಾ; ಮೇ ತಿಂಗಳು ರೌಂಡಪ್!

ತಮಿಳು ನಟಿ, ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್ ಮದುವೆ ವಿಚಾರವಾಗಿಯೇ ಹೆಚ್ಚು ಸುದ್ದಿಯಾಗಿದ್ದರು ಎರಡಲ್ಲ ಮೂರು ವಿವಾಹವಾಗಿದ್ದರು ವನಿತಾ ವಿಜಯ್ ಕುಮಾರ್. ನಟಿ ವನಿತಾ ವಿಜಯ್ ಕುಮಾರ್ ಖ್ಯಾತ ತಂತ್ರಜ್ಞ ಪೀಟರ್ ಪೌಲ್ ಜೊತೆ 3ನೇ ಮದುವೆಯಾಗಿದ್ದರು. ಲಾಕ್‌ಡೌನ್ ಸಮಯದಲ್ಲಿ ಇಬ್ಬರೂ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಲಂಡನ್‌ನಲ್ಲಿ ವಿವಾಹವಾಗಿದ್ದ ಈ ಜೋಡಿ ನಂತರ ಮದುವೆಯನ್ನು ಮುರಿದುಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ ದುರಂತ ಎಂದರೆ ಪೀಟರ್ ಪೌಲ್ ಈಗ ಬಾರದಲೋಕಕ್ಕೆ ಹೊರಟು ಹೋಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೀಟರ್ ಕೊನೆಯುಸಿರೆಳಿದರು.
 

29

 ಕೇರಳದಲ್ಲಿ ಸುಮಾರು 32 ಸಾವಿರ ಹುಡುಗಿಯರು  ನಾಪತ್ತೆಯಾಗಿರುವ ವಿಷಯವನ್ನು ಆಧರಿಸಿದ ದಿ ಕೇರಳ ಸ್ಟೋರಿ ಕಥೆ  ಹೆಣೆಯಲಾಗಿದೆ.ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ ಉಗ್ರಗಾಮಿಗಳಾಗಿಸುವ ಕಥೆ ಇದೆ.  ಈ ಚಿತ್ರವು ನೈಜ ಕಥೆಯನ್ನು ಆಧರಿಸಿದೆ ಎಂದು ಚಿತ್ರ ನಿರ್ಮಾಪಕರು ಹೇಳಿಕೊಂದ್ದರು ಆದರೆ ಈ ಚಿತ್ರಕ್ಕೆ ಕಾಂಗ್ರೆಸ್ಸಿಗರು ಸೇರಿದಂತೆ ಒಂದು ವರ್ಗದಿಂದ ಬಹಳ ವಿರೋಧ ವ್ಯಕ್ತವಾಗುತ್ತಿತ್ತು.. ಖುದ್ದು ಕೇರಳ ಸರ್ಕಾರವೇ ಈ ಚಿತ್ರದ ವಿರುದ್ಧ ದನಿ ಎತ್ತಿದೆ. 

39

ಸಾಹಸಸಿಂಹ ಡಾ.ವಿಷ್ಣುವರ್ಧನ್ ನಟನೆಯ ಡಿಸೆಂಬರ್ 31 ಸಿನಿಮಾ ನಿರ್ದೇಶನ ಮಾಡಿದ್ದ ತಮಿಳಿನ ಖ್ಯಾತ ನಟ ಮತ್ತು ನಿರ್ದೇಶಕ  ಮನೋಬಾಲಾ ಅಗಲಿದರು. ತೀವ್ರ ಅನಾರೋಗ್ಯದಿಂದ ಬಳುತ್ತಿದ್ದ ನಟ ಮನೋಬಾಲ ನ್ನೈನಲ್ಲಿ ಕೊನೆಯುಸಿರೆಳೆದರು. ರಡು ವಾರಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳುತ್ತಿದ್ದ ಮನೋಬಾಲ ಅವರು ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರಂತೆ.
 

49

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರನ ಮಗಳು ನಿಹಾರಿಕಾ ಮದುವೆಯಾಗಿ 2 ವರ್ಷಗಳಾಗಿದೆ ಅಷ್ಟೆ. ಆದರೆ ಆಗಲೇ ಪತಿಯಿಂದ ದೂರ ಆಗುತ್ತಿದ್ದಾರೆ, ವಿಚ್ಛೇದನ ಪಡೆದಿದ್ದಾರೆ. 2020 ಡಿಸೆಂಬರ್ ನಲ್ಲಿ ನಿಹಾರಿಕಾ, ಚೈತನ್ಯ ಜೊನ್ನಲಗಡ್ಡ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದರು. ಉದಯಪುರದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು. ಆದರೀಗ ಎರಡು ವರ್ಷ ಆಗುತ್ತಿದ್ದಂತೆ ಇಬ್ಬರೂ ವಿಚ್ಚೇದನ ಪಡೆದಿದ್ದಾರೆ.

59

ನನ್ನರಸಿ ರಾಧೆ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನೆಮಾತಾಗಿದ್ದ ನಟಿ ಸಹನಾ ಶೆಟ್ಟಿ ದಾಂಪತ್ಯಕ್ಕೆ ಕಾಲಿಟ್ಟರು.ಊರ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಸಹನಾ ಶೆಟ್ಟಿ ತನ್ನ ಕ್ರಶ್ ಪ್ರತಾಪ್ ಶೆಟ್ಟಿ ಜೊತೆ ಹಸೆಮಣೆ ಏರಿದರು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಹನಾ ಮತ್ತು ಪ್ರತಾಪ್ ಪತಿ-ಪತ್ನಿಯರಾದ್ದರು. 

69

ಯುವ ನಟಿ ಅನಿಕಾ ಶ್ರದ್ಧಾಂಜಲಿ ಪೋಸ್ಟ್ ವೈರಲ್ ಆಗಿದ್ದು ಪೋಸ್ಟರ್ ನೋಡಿ ಅಭಿಮಾನಿಗಳು ಶಾಕ್ ಆಗಿತ್ತು. ಅನಿಕಾ ಬಗ್ಗೆ ವೈರಲ್ ಆಗಿರುವ ಪೋಸ್ಟ್ ನೋಡಿ ಅಭಿಮಾನಿಗಳು  ಶಾಕ್ ಆಗಿದ್ದಾರೆ. ಅನಿಕಾಗೆ ಶ್ರದ್ದಾಂಜಲಿ ಸಲ್ಲಿಸಿ ಮಾಡಿರುವ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ದಾರೆ. ಬಳಿಕ ಅಸಲಿ ವಿಚಾರ ಗೊತ್ತಾಗಿ ನಿಟ್ಟುಸಿರು ಬಿಟ್ಟಿರು. 

79

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ನಿಶ್ಚಿತಾರ್ಥ ಮಾಡಿಕೊಂಡರು. ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡರು. ಪರಿಣೀತಿ ಮತ್ತು ರಾಘವ್ ಚಡ್ಡ ಮದುವೆ ವಿಚಾರ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇಬ್ಬರೂ ಒಟ್ಟಿಗೆ ಡಿನ್ನರ್, ಟ್ರಿಪ್ ಅಂತ ಒಟ್ಟಿಗೆ ಓಡಾಡುವ ಮೂಲಕ ಡೇಟಿಂಗ್ ವಿಚಾರ ಬಹಿರಂಗ ಪಡಿಸಿದ್ದರು. ಮೇ 13ರಂದು ದೆಹಲಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪರಿಣೀತಿ ಮತ್ತು ರಾಘವ್ ಇಬ್ಬರೂ ಎಂಜೇಜ್ ಆದರು.
 

89

ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ  ಮದುವೆಯಾಗಿ 10 ವರ್ಷಗಳ ಬಳಿಕ ಉಪಾಸನಾ ಮೊದಲ ಮಗುವಿಗೆ ಗರ್ಭಿಣಿಯಾದರು. ಆದರೆ ಆರಂಭದಲ್ಲೇ  Egg Freeze ಮಾಡಿದ್ದರಂತೆ. ಅನೇಕ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡೆವು. ಆಗ ಸಮಯದಲ್ಲಿ ನಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಬೇಕಾಗಿತ್ತು. ಆರ್ಥಿಕ ಮಟ್ಟ ಮತ್ತಷ್ಟು ಸುಧಾರಿಸಲಿ ಎಂದು ನಿರ್ಧರಿಸಿದೆವು ಎಂದು ಉಪಾಸನಾ ಹೇಳಿದ್ದರು.
 

99

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿ ಮೇ ತಿಂಗಳಿನಲ್ಲಿ ಮಗಳ ಫೋಟೋ ರಿವೀಲ್ ಮಾಡಿದರು. ಧ್ರುವ ಸರ್ಜಾ ಮಗಳಿಗೆ 7 ತಿಂಗಳು ತುಂಬಿದ ಮೇಲೆ ಫೋಟೋ ಶೇರ್ ಮಾಡಿದ್ದರು. ಆ ಸಮಯದಲ್ಲಿ ಒಂದು ತಿಂಗಳಿದ್ದಾಗ ಕ್ಲಿಕ್ ಮಾಡಿದ ಫೋಟೋ ಅಪ್ಲೋಡ್ ಮಾಡಿದ್ದರು. 

Read more Photos on
click me!

Recommended Stories