RRRಗೆ ಆಸ್ಕರ್, ಸುಶ್ಮಿತಾ ಸೇನ್‌ಗೆ ಹಾರ್ಟ್‌ ಅಟ್ಯಾಕ್, 'ಸತ್ಯ' ನಟನ ಮದುವೆ; ಮಾರ್ಚ್‌ ತಿಂಗಳಲ್ಲಿ ಸುದ್ದಿ ಹೀಗಿತ್ತು!

Published : Dec 15, 2023, 03:33 PM IST

 ಅಬ್ಬಬ್ಬಾ! ಮಾರ್ಚ್‌ ತಿಂಗಳಿನಲ್ಲಿ ಏನೆಲ್ಲಾ ಆಯ್ತು ಗೊತ್ತಾ? ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಶಾರುಖ್ ಖಾನ್‌ರಿಂದ ಅಮಿತಾಭ್‌ವರೆಗೂ ಏನಾಯ್ತು ನೋಡಿ..... 

PREV
18
RRRಗೆ ಆಸ್ಕರ್, ಸುಶ್ಮಿತಾ ಸೇನ್‌ಗೆ ಹಾರ್ಟ್‌ ಅಟ್ಯಾಕ್, 'ಸತ್ಯ' ನಟನ ಮದುವೆ; ಮಾರ್ಚ್‌ ತಿಂಗಳಲ್ಲಿ ಸುದ್ದಿ ಹೀಗಿತ್ತು!

ಬಾಲಿವುಡ್‌ ಕಿಂಗ್ ಶಾರುಖ್ ಖಾನ್‌ ಮುಂಬೈನಲ್ಲಿ ಭವ್ಯ ಬಂಗ್ಲೆಯೊಳಗೆ ಇಬ್ಬರು ಅಭಿಮಾನಿಗಳು ಪ್ರವೇಶ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ ತಡೆದು ವಿಚಾರಣೆ ಶುರು ಮಾಡುವಷ್ಟರಲ್ಲಿ ಎಫ್‌ಐಆರ್‌ ದಾಖಲಾಗಿದೆ. ಯಾವ ಕಾರಣಕ್ಕೆ ಏಕಾಏಕಿ ನುಗ್ಗಿದ್ದಾರೆ ಎಂದು ತಿಳಿದು ಬಂದಿಲಲ್ಲ ಆದರೆ ಶಾರುಖ್‌ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಘಟನೆ ನಡೆದಿರುವುದು ಬೆಳ್ಳಂಬೆಳಗ್ಗೆ 4 ಗಂಟೆಗೆ ನಡೆದಿದೆ.

28

ಬಾಲಿವುಡ್ ಸ್ಟಾರ್, ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್  ಅವರಿಗೆ ಮಾರ್ಚ್‌ ತಿಂಗಳು ಹೃದಯಾಘಾತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಡವಾಗಿ ಬಹಿರಂಗ ಪಡಿಸಿದ್ದರು.  ಕೆಲ ದಿನಗಳ ಬಳಿಕ ಈ ಶಾಕಿಂಗ್​ ಸುದ್ದಿ ತಿಳಿಸಿದ್ದ ಅವರು,  ತಮಗೆ ಮಾಸಿವ್ ಹಾರ್ಟ್ ಆಟ್ಯಾಕ್ ಆಗಿದ್ದು, 95 % ಬ್ಲಾಕೇಜ್ ಇರುವುದಾಗಿ ಹೇಳಿಕೊಂಡಿದ್ದರು.
 

38

RRR ಸಿನಿಮಾದ ನಾಟು ನಾಟು.. ಹಾಡು 2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಇದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ಕ್ಷಣವಾದೆ. ನಾಟು ನಾಟು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ವಿನ್ ಆಗಿದೆ. ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. 2023 ರ ಆಸ್ಕರ್ ಪ್ರಶಸ್ತಿ ವಿಜೇತರನ್ನು ಘೋಷಿಸುತ್ತಿದ್ದಂತೆ ನಿರ್ದೇಶಕ ಎಸ್‌ಎಸ್ ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಸಂತೋಷ, ಕಣ್ಣೀರು ಮತ್ತು ಅಪ್ಪುಗೆಯಿಂದ ಸಂಭ್ರಮಿಸಿದ್ದರು.

48

ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಕಿರೀಕ್ ಕೀರ್ತಿ ವೈವಾಹಿಕ ಜೀವನದಲ್ಲಿ ಆದ ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ದಿನಕ್ಕೊಂದು ಸುದ್ದಿ ಕ್ರಿಯೇಟ್ ಮಾಡುತ್ತಿರುವ ನೆಟ್ಟಿಗರಿಗೆ ಕ್ಲಾರಿಟಿ ಕೊಟ್ಟಿದ್ದರು. ಇಬ್ಬರು ಪರಸ್ಪರ ಒಪ್ಪಿಗೆ ಮೇಲೆ ದೂರವಾಗಿದ್ದಾರೆ. ಇಬ್ಬರು ಕೋ-ಪೇರೆಂಟಿಂಗ್ ಮಾಡುತ್ತಿದ್ದಾರೆ. 

58

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮಾನ್ಸಿ ಪಾತ್ರದಲ್ಲಿ ಶಿಲ್ಪಾ ಅಯ್ಯರ್  ಮತ್ತು ಉದ್ಯಮಿ ಸಚಿನ್‌  ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದು ಪಕ್ಕಾ ಅರೇಂಜ್ಡ್‌ ಮ್ಯಾರೇಜ್‌ ಎನ್ನಬಹುದು. ಸಿನಿ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿದ್ದರು. 

68

ಸತ್ಯ' ಧಾರಾವಾಹಿ ನಟ ಹಾಗೂ ಕಾಮಿಡಿ ಕಿಲಾಡಿ ಸ್ಪರ್ಧಿಯಾಗಿದ್ದ ಸೀರುಂಡೆ ರಘು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ರಂಜಿತರನ್ನು ಸರಳ ಸಮಾರಂಭದ ಮೂಲಕ ವಿವಾಹವಾದರು. ಕಾಮಿಡಿ ಕಿಲಾಡಿ ಖ್ಯಾತಿಯ ಮಂಥನ,ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಸದಾ ಸೇರಿದಂತೆ ನೂರಾರು ಕಲಾವಿದರು ಹಿತೈಷಿಗಳು ಭಾಗವಹಿಸಿ ಶುಭ ಹಾರೈಸಿದ್ದರು.

78

ಟಾಲಿವುಡ್  ನಟ ಮಂಚು ಮನೋಜ್  ಮತ್ತು ಭೂಮಾ ಮೌನಿಕಾ ರೆಡ್ಡಿ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಮಂಚು ಅವರಿಗೆ ಇದು 2ನೇ ಮದುವೆ ಆಗಿದೆ. ಕಳೆದ ವರ್ಷ ವಿನಾಯಕ ಚೌತಿಯ ಉತ್ಸವದಲ್ಲಿ ಮನೋಜ್ ಮತ್ತು  ಭೂಮಾ ಮೌನಿಕಾ ರೆಡ್ಡಿ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. 
 

88

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಶೂಟಿಂಗ್ ವೇಳೆ ಗಾಯಗೊಂಡಿದ್ದರು.  ಪ್ರಾಜೆಕ್ಟ್ K ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು ಅಮಿತಾಭ್ ಕೂಡ ಭಾಗಿಯಾಗಿದ್ದರು. ಚಿತ್ರೀಕಕಣದ ಆಕ್ಷನ್ ದೃಶ್ಯದ ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಪಕ್ಕೆಲುಬಿಗೆ ಬಲವಾಗಿ ಏಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಲಾಗಿತ್ತು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories