ಫಾರ್ಮ್‌ನಲ್ಲಿ ಮಕ್ಕಳಿಗೆ ಈಸ್ಟರ್ ಹಂಟ್ ಆಟ ಆಡಿಸಿದ ಯಶ್- ರಾಧಿಕಾ ದಂಪತಿ; ಆಯ್ರಾ, ಯಥರ್ವ್ ಮುದ್ದು ಮೊಲಗಳು ಎಂದ ಫ್ಯಾನ್ಸ್

First Published | Apr 1, 2024, 11:04 AM IST

ಮಕ್ಕಳಿಗೆ ಸಮಯ ಕೊಡೋದ್ರಲ್ಲಿ ಹಾಗೂ ಎಲ್ಲ ಹಬ್ಬಗಳನ್ನು ಅವರಿಗೆ ತಿಳಿಸೋದ್ರಲ್ಲಿ ಯಶ್- ರಾಧಿಕಾ ಪಂಡಿತ್ ದಂಪತಿ ಎಂದಿಗೂ ಹಿಂದೆ ಬಿದ್ದಿಲ್ಲ. ಇದೀಗ ರಾಧಿಕಾ ತಮ್ಮ ಕುಟುಂಬದೊಂದಿಗೆ ಫಾರ್ಮ್‌ನಲ್ಲಿ ಕಳೆದ ಕ್ಷಣಗಳ ಫೋಟೋ ಶೇರ್ ಮಾಡಿದ್ದಾರೆ. 

ಮಕ್ಕಳಿಗೆ ಸಮಯ ಕೊಡೋದ್ರಲ್ಲಿ ಹಾಗೂ ಎಲ್ಲ ಹಬ್ಬಗಳನ್ನು ಅವರಿಗೆ ತಿಳಿಸೋದ್ರಲ್ಲಿ ಯಶ್- ರಾಧಿಕಾ ಪಂಡಿತ್ ದಂಪತಿ ಎಂದಿಗೂ ಹಿಂದೆ ಬಿದ್ದಿಲ್ಲ.

ಈ ಬಾರಿ ಈಸ್ಟರ್ ಹಬ್ಬದಂದು ಪರಿಸರದ ಮಡಿಲಲ್ಲಿ ಮಕ್ಕಳಿಗೆ ಈಸ್ಟರ್ ಎಗ್ ಹುಡುಕುವ ಆಟ ಆಡಿಸಿ ಸಂತೋಷ ತಂದಿದ್ದಾರೆ ಈ ತಾರಾ ಜೋಡಿ.

Tap to resize

ಮಕ್ಕಳೊಂದಿಗೆ ಫಾರ್ಮ್‌ಗೆ ಹೋಗಿರುವ ಯಶ್ ಮತ್ತು ರಾಧಿಕಾ, ಅಲ್ಲಿನ ಮೊಲಗಳೊಂದಿಗೆ ಮಕ್ಕಳನ್ನು ಆಟವಾಡಿಸಿದ್ದಾರೆ. ಹಲವು ಮೊಲಗಳ ನಡುವೆ ಆಯ್ರಾ ಹಾಗೂ ಯಥರ್ವ್ ಕೂಡಾ ಮುದ್ದು ಮೊಲಗಳಂತೆ ಕಾಣಿಸುತ್ತಾರೆ. 

ಬಳಿಕ ಆಯ್ರಾ ಹಾಗೂ ಯಥರ್ವ್‌ಗೆ ಈಸ್ಟರ್ ಎಗ್ ಹುಡುಕುವ ಆಟ ಆಡಿಸಿದ್ದಾರೆ. ಪೊದೆಗಳ ಸಂದಿಗೊಂದಿಗಳಲ್ಲಿ ಅಡಗಿಸಿಟ್ಟ ಕಲರ್‌ಫುಲ್ ಮೊಟ್ಟೆಗಳನ್ನು ಮಕ್ಕಳು ಹುಡುಕುವುದೇ ಈ ಆಟವಾಗಿದೆ.
 

ಈ ಕುರಿತ ಫೋಟೋ ಹಾಗೂ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ನಟ ನಟಿಯ ಅಭಿಮಾನಿಗಳು ಫೋಟೋ ನೋಡಿ ಖುಷಿಯಾಗಿದ್ದಾರೆ. 

'ನಮ್ಮ ಪುಟ್ಟ ಮೊಲಗಳು ಈಸ್ಟರ್ ಹಂಟ್ ಮಾಡುತ್ತಾ ಉತ್ತಮ ಸಮಯ ಕಳೆದರು. ಎಲ್ಲರಿಗೂ ಹ್ಯಾಪಿ ಈಸ್ಟರ್' ಎಂದು ರಾಧಿಕಾ ಬರೆದಿದ್ದಾರೆ. 
 

ಒಂದು ಫೋಟೋದಲ್ಲಿ ಮಕ್ಕಳಿಬ್ಬರೂ ಮೊಲಗಳನ್ನು ಕೈಲಿ ಹಿಡಿದು, ಮತ್ತೊಂದರಲ್ಲಿ ತಾವು ಹುಡುಕಿದ ಈಸ್ಟರ್ ಎಗ್ ಹಿಡಿದು ಸಂತೋಷದಿಂದ ತುಂಬಿರುವುದನ್ನು ಕಾಣಬಹುದು. 
 

ಈ ಮುದ್ದಾದ ಕುಟುಂಬದ ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಲವ್ಲಿ ಫ್ಯಾಮಿಲಿ, ಮಕ್ಕಳು ಎಷ್ಟು ಬೇಗ ಇಷ್ಟು ದೊಡ್ಡ ಆಗಿದಾರೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. 

Latest Videos

click me!