ಅಭಿಷೇಕ್-ಅವಿವಾ ವೆಡ್ಡಿಂಗ್ ಪಾರ್ಟಿ: ಸಂಭ್ರಮದಲ್ಲಿ ಯಶ್, ಶಿವಣ್ಣ, ಪ್ರಭುದೇವ, ಜಯಪ್ರದಾ ಸೇರಿ ತಾರೆಯರ ದಂಡು

First Published | Jun 11, 2023, 11:41 AM IST

ಅಭಿಷೇಕ್-ಅವಿವಾ ಅದ್ದೂರಿ ವೆಡ್ಡಿಂಗ್ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಾದ ಯಶ್, ಶಿವಣ್ಣ, ಪ್ರಭುದೇವ, ಜಯಪ್ರದಾ ಸೇರಿ ಅನೇಕ ತಾರೆಯರ ಭಾಗಿಯಾಗಿ ಸಂಭ್ರಮಿಸಿದ್ದಾರೆ. 

ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಜೂನ್ 5ರಂದು ಬಹುಕಾಲದ ಗೆಳತಿ ಅವಿವಾ ಬಿದಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫ್ಯಾಷನ್ ಡಿಸೈನರ್ ಅವಿವಾ ಬಿದಪ ಮತ್ತು ಅಭಿಷೇಕ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಪತಿ ಪತ್ನಿಯರಾಗಿದ್ದಾರೆ. 

ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ಅಭಿ-ಅವಿವಾ ಮದುವೆಗೆ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು.

Tap to resize

ಕನ್ನಡ ಸಿನಿಮಾ ಗಣ್ಯರು ಮಾತ್ರವಲ್ಲದೇ ಪರಭಾಷೆಯ ತಾರೆಯರು ಆಗಮಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಮದುವೆ ಮತ್ತು ಆರತಕ್ಷತೆ ಬಳಿಕ ಅಭಿಷೇಕ್ ಮತ್ತು ಅವಿವಾ ಅದ್ದೂರಿ ಪಾರ್ಟಿ ಆಯೋಜಿಸಿದ್ದರು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಬಹುತೇಕ ಸ್ಟಾರ್ಸ್ ಆಗಮಿಸಿದ್ದರು. 
 

ಸಂಗೀತ ಪಾರ್ಟಿಯಲ್ಲಿ ತಾರೆಯರು ಮಸ್ತ್ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಸುಮಲತಾ ಅಂಬರೀಷ್, ಅಭಿಷೇಕ್, ಅವಿವಾ ಜೊತೆ ರಾಕಿಂಗ್ ಸ್ಟಾರ್ ಯಶ್ ಕೂಡ ಕುಣಿದು ಕುಪ್ಪಳಿದ್ದಾರೆ. ಅಂಬರೀಶ್ ಹಾಡಿಗೆ ಎಲ್ಲರೂ ಹೆಜ್ಜೆ ಹಾಕಿದ್ದಾರೆ. 
 

ಸಂಗೀತ ಸಮಾರಂಭದಲ್ಲಿ ಮಾಲಾಶ್ರೀ ಕುಟುಂಬ, ಗುರುಕಿರಣ್ ಕುಟುಂಬ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಕೂಡ ಭಾಗಿಯಾಗಿ ಸಂಭ್ರಮಿಸಿದ್ದರು. 

ಪ್ರಭುದೇವ, ಹಿರಿಯ ನಟಿ ಜಯಪ್ರದಾ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿ ಮಸ್ತ್ ಎಂಜಾಯ್ ಮಾಡಿದ್ದಾರೆ. 

ಜೂನ್ 5ರಂದು ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದರು. ಜೂನ್ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡರು. ಇದೀಗ ಪಾರ್ಟಿಯಲ್ಲಿ ಮಿಂಚಿದ್ದಾರೆ. 

ಮಂಡ್ಯದಲ್ಲಿ ಅದ್ದೂರಿ ಆರತಕ್ಷತೆಗೆ ಅಂಬಿ ಕುಟುಂಬ ಸಿದ್ಧತೆ ನಡೆಸುತ್ತಿದ್ದೆ. ಅಂಬರೀಷ್ ಅವರ ಪ್ರೀತಿಯ ಊರು ಮಂಡ್ಯ. ಹಾಗಾಗಿ ಅಲ್ಲೂ ಅಭಿಷೇಕ್ ಮದುವೆ ಸಂಭ್ರಮ ನಡೆಯಬೇಕು ಎನ್ನುವ ಕಾರಣಕ್ಕೆ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
 

ಅಭಿಷೇಕ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಮರ್ ಸಿನಿಮಾ ಬಳಿಕ ಅಭಿಷೇಕ್ ನಟಿಸುತ್ತಿರುವ 2ನೇ ಸಿನಿಮಾ ಇದಾಗಿದೆ. 

ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 

abhishek ambareesh

ಬ್ಯಾಡ್ ಮ್ಯಾನರ್ಸ್ ಈಗಾಗಲೇ ಟೀಸರ್ ಮತ್ತು ಟ್ರೈಲರ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದೆ. ಮದುವೆ ಸಂಭ್ರಮವೆಲ್ಲ ಮುಗಿಸಿ ಅಭಿಷೇಕ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. 
 

Latest Videos

click me!