YASH: ಮಡದಿ-ಮಕ್ಕಳ ಜೊತೆ 'ರಾವಣನ ಲುಕ್‌' ಕೊಟ್ಟು ಫ್ಯಾನ್ಸ್‌ಗೆ ದೀಪಾವಳಿ ವಿಶ್ ಮಾಡಿದ ಯಶ್!

Published : Nov 10, 2026, 02:10 PM IST

ನಟ ಯಶ್ ನಟನೆ ಹಾಗೂ ನಿರ್ಮಾಣದ ರಾಮಾಯಣ ಸಿನಿಮಾ ಇಡೀ ಜಗತ್ತಿನಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಸದ್ಯಕ್ಕೆ ಸಿನಿಮಾ ಹಳೆಯ ಎಲ್ಲಾ ದಾಖಲೆಗಳನ್ನೂ ಪುಡಿಪುಡಿ ಮಾಡುತ್ತಿದೆ. ಅಷ್ಟೇ ಅಲ್ಲ, ಕೇವಲ 5 ದಿನಕ್ಕೆ ಜಾಗತಿಕ ಮಟ್ಟದಲ್ಲಿ 633 ಕೋಟಿ ಕಲೆಕ್ಷನ್ ಕಲೆಹಾಕಿದ್ದು ಹೊಸ ದಾಖಲೆ ಬರೆದಿದೆ.

PREV
15

ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ ಸದ್ಯ ರಾಮಾಯಣ ಸಿನಿಮಾದ ಮೂಲಕ ಇಡೀ ಜಗತ್ತಿನಲ್ಲೇ ಟ್ರೆಂಡಿಂಗ್‌ನಲ್ಲಿ ಇರೋದು ಗೊತ್ತೇ ಇದೆ. ರಾಮಾಯಣ ಸಿನಿಮಾದ ಯಶ್ ರಾವಣ ಪಾತ್ರ ಪ್ರಪಂಚದಾದ್ಯಂತ ಪ್ರಶಂಸೆ ಗಳಿಸುತ್ತಿದೆ. ಈ ಸಿನಿಮಾದ ಮೂಲಕ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಇನ್ನೂ ಒಂದು ಹೆಜ್ಜೆ ಮೇಲೆ ಹೋಗಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

25

ಸದ್ಯ ಯಶ್ ಅವರು ರಾಮಾಯಣ ಸಿನಿಮಾದ ಸೀಕ್ವೆಲ್ ಅಂದರೆ, 'ರಾಮಾಯಣ: ಭಾಗ 2' ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಆದರೆ, ಈಗ ದೀಪಾವಳಿ ಪ್ರಯುಕ್ತ ಯಶ್ ಅವರು ತಮ್ಮ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಸದ್ಯ ದೀಪಾವಳಿಗೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಕ್ಕಳ ಜೊತೆ ರಾವಣನ ಲುಕ್ ಹಾಗೂ ನಾರ್ಮಲ್ ಅಪ್ಪನ ಲುಕ್‌ನಲ್ಲಿರುವ ಎರಡು ಫೋಟೋಗಳನ್ನು ಶೇರ್ ಮಾಡಿ,ತಮ್ಮ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

35

ಹಾಗಿದ್ದರೆ ರಾಮಾಯಣದ ರಾವಣ ಯಶ್ ಅವರು ತಮ್ಮ ಫ್ಯಾನ್ಸ್‌ಗಳಿಗೆ ಏನಂತ ವಿಶ್ ಮಾಡಿದ್ದಾರೆ? 'ನಿಮ್ಮೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. 🙏 ನೀವು ತೋರುತ್ತಿರುವ ಪ್ರೀತಿಗೆ ಧನ್ಯವಾದಗಳು (Wishing you all a very Happy Deepavali.🙏 Thank you for the love. 🤗)..' ಎಂದು ನಟ ಯಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಯಶ್ ಅವರ ಈ ಪೋಸ್ಟ್‌ಗಳು ಬಹಳಷ್ಟು ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬಂದಿದ್ದು ಅವರ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ ತುಂಬಿಹೋಗುತ್ತಿದೆ.

45

ಅಂದಹಾಗೆ, ನಟ ಯಶ್ ನಟನೆ ಹಾಗೂ ನಿರ್ಮಾಣದ ರಾಮಾಯಣ ಸಿನಿಮಾ ಇಡೀ ಜಗತ್ತಿನಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಸದ್ಯಕ್ಕೆ ಸಿನಿಮಾ ಹಳೆಯ ಎಲ್ಲಾ ದಾಖಲೆಗಳನ್ನೂ ಪುಡಿಪುಡಿ ಮಾಡುತ್ತಿದೆ. ಅಷ್ಟೇ ಅಲ್ಲ, ಕೇವಲ 5 ದಿನಕ್ಕೆ ಜಾಗತಿಕ ಮಟ್ಟದಲ್ಲಿ 633 ಕೋಟಿ ಕಲೆಕ್ಷನ್ ಕಲೆಹಾಕಿದ್ದು ಹೊಸ ದಾಖಲೆ ಬರೆದಿದೆ. ಜೊತೆಗೆ, ಭಾರತದಲ್ಲಿ ಕೂಡ 'ಧುರಂಧರ್ 2' ಸಿನಿಮಾದ ದಾಖಲೆ ಮುರಿದು ಮುನ್ನುಗ್ಗುತ್ತಿದ್ದು, ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆಯುತ್ತಿದೆ.

55

ರಾಮಾಯಣ ಸಿನಿಮಾ ಬಿಡುಗಡೆಯಾದ 25 ದಿನಗಳೊಳಗೆ ಹಳೆಯ ಎಲ್ಲಾ ದಾಖಲೆಗಳನ್ನೂ ಮುರಿದು ಭಾರತೀಯ ಚಿತ್ರರಂಗ್ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯವುದು ಖಚಿತ ಎಂದು ಸಿನಿಮಾ ಗಳಿಕೆ ತಜ್ಞರು ಅಭಿಪ್ರಾಯ ಹೊರಹಾಕಿದ್ದಾರೆ. ಜೊತೆಗೆ, ಭಾರತೀಯ ಸಿನಿಮಾಗಳ ವಿದೇಶಿ ಗಳಿಕೆಯಲ್ಲೂ ರಾಮಾಯಣ ಹೊಸ ದಾಖಲೆ ಬರೆಯುವುದು ನಿಶ್ಚಿತ ಎನ್ನಲಾಗುತ್ತಿದೆ. ರಾಮಾಯಣ ಯಾವೆಲ್ಲಾ ದಾಖಲೆಗಳನ್ನು ಅಳಿಸಿಹಾಕಿ ಹೊಸ ರೆಕಾರ್ಡ್ ಮಾಡಬಹುದು ಎಂಬುದನ್ನು ಕುತೂಹಲದ ಕಣ್ಣಿಂದ ಕಾಯಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories