ಸಂಪ್ರದಾಯ ಮರೆಯದ ವಿಜಯಲಕ್ಷ್ಮಿ; 'ದೀಪದ ಬೆಳಕು ಕುಟುಂಬದ ಕಷ್ಟ ದೂರ ಮಾಡಲಿ' ಎಂದ ದರ್ಶನ್ ಪತ್ನಿ!

Published : Nov 10, 2026, 10:17 AM IST

ಪತಿ ಜೊತೆಯಲ್ಲಿಲ್ಲದ ನೋವಿದ್ದರೂ ಹಬ್ಬದ ಸಂಪ್ರದಾಯವನ್ನು ಮರೆಯದೇ ದೀಪಾವಳಿ ಹಬ್ಬದ ಪ್ರಯುಕ್ತ ವಿಜಯಲಕ್ಷ್ಮಿ ಸಾಂಪ್ರದಾಯಿಕ ಪೂಜೆ ನೆರವೇರಿಸಿರುವ ವಿಜಯಲಕ್ಷ್ಮೀ ದರ್ಶನ್ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋಟೋ ನೋಡಿ..

PREV
15

ದೀಪಾವಳಿ ಹಬ್ಬದ ಪ್ರಯುಕ್ತ ವಿಜಯಲಕ್ಷ್ಮಿ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದ್ದಾರೆ. ತಲೆಯಲ್ಲಿ ಮಲ್ಲಿಗೆ ಹೂ ಮುಡಿದು, ಸುಂದರವಾಗಿ ಸಿದ್ಧಗೊಂಡಿರುವ ಅವರ ಫೋಟೋಗಳು ಅಭಿಮಾನಿಗಳ ಮನಗೆದ್ದಿವೆ. ಪತಿ ಜೊತೆಯಲ್ಲಿಲ್ಲರದ ನೋವಿದ್ದರೂ ಹಬ್ಬದ ಸಂಪ್ರದಾಯವನ್ನು ಮುಂದುವರಿಸಿರುವ ಅವರ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

25

ವಿಜಯಲಕ್ಷ್ಮಿ ಅವರ ಮುಖದಲ್ಲಿ ಮಂದಹಾಸ ಕಾಣಿಸುತ್ತಿದ್ದರೂ, ಮನಸ್ಸಿನಲ್ಲಿ ಪತಿಯ ಕುರಿತಾದ ಚಿಂತೆ ಮತ್ತು ನೋವು ಇದ್ದೇ ಇದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ದುಃಖವನ್ನು ಬದಿಗಿಟ್ಟು ಕುಟುಂಬಕ್ಕಾಗಿ ಧೈರ್ಯದಿಂದ ಮುನ್ನಡೆಯುತ್ತಿರುವುದನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಸಾಂತ್ವನದ ಮಾತುಗಳನ್ನಾಡುತ್ತಿದ್ದಾರೆ.

35

ಇನ್ನು ದೀಪಾವಳಿಯ ಅಂಗವಾಗಿ ಮನೆಯ ದೇವರ ಕೋಣೆಯಲ್ಲಿ ಹಣತೆಗಳನ್ನು ಬೆಳಗಿಸಿ ಗಣೇಶ ಹಾಗೂ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬದ ಸಂಕಷ್ಟಗಳು ದೂರವಾಗಿ ಮನೆಯಲ್ಲಿ ಮತ್ತೆ ಸಂತೋಷ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ. ದೀಪಾವಳಿಯ ಬೆಳಕು ದರ್ಶನ್ ಅವರ ಜೀವನದಲ್ಲೂ ಹೊಸ ಭರವಸೆಯನ್ನು ತರಲಿ ಎಂಬ ಆಶಯ ಅಭಿಮಾನಿಗಳಲ್ಲಿದೆ.

45

ಇತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲೇ ದಿನ ಕಳೆಯುತ್ತಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ಹಬ್ಬ ಆಚರಿಸುವುದು ವಿಜಯಲಕ್ಷ್ಮಿ ಅವರಿಗೆ ಸುಲಭದ ಸಂಗತಿಯಲ್ಲ. ಆದರೂ ಕುಟುಂಬದವರೊಂದಿಗೆ ಹಬ್ಬದ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ತಮ್ಮ ಸ್ಥೈರ್ಯವನ್ನು ತೋರಿಸಿದ್ದಾರೆ.

55

ಒಟ್ಟಿನಲ್ಲಿ ದರ್ಶನ್ ಅವರ ಅನುಪಸ್ಥಿತಿಯ ನೋವಿನ ನಡುವೆಯೂ ವಿಜಯಲಕ್ಷ್ಮಿ ಆಚರಿಸಿರುವ ದೀಪಾವಳಿ ಅಭಿಮಾನಿಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದೆ. ನೆಚ್ಚಿನ ನಟ ಆದಷ್ಟು ಬೇಗ ಸಂಕಷ್ಟದಿಂದ ಹೊರಬರಲಿ, ಅವರ ಕುಟುಂಬದಲ್ಲಿ ಮತ್ತೆ ನೆಮ್ಮದಿ ಮತ್ತು ಸಂತೋಷದ ಬೆಳಕು ಮೂಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories