ಮಕ್ಕಳ ಜೊತೆ ಮೋಜು ಮಸ್ತಿ ಮಾಡುತ್ತಿರುವ ರಾಕಿಂಗ್ ದಂಪತಿ; ಫೋಟೋ ನೋಡಿ!

First Published | Jan 21, 2021, 10:12 AM IST

ಸಿನಿಮಾ ಹಾಗೂ ಪರ್ಸನಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಯಶ್‌ ಇದೀಗ ಕುಟುಂಬ ಸಮೇತ  ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಮಕ್ಕಳ ತುಂಟಾಟದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ...
 

ಕೆಜಿಎಫ್‌ ಚಾಪ್ಟರ್‌ 2 ಟೀಸರ್ ಬಿಡುಗಡೆಯಾಗಿದ್ದು, ಇದು ಯಶಸ್ಸಾದ ಬೆನ್ನಲ್ಲೇ ಕುಟುಂಬದ ಜೊತೆ ಜಾಲಿ ಟ್ರಿಪ್ ಮಾಡುತ್ತಿರುವ ನಟ ಯಶ್.
ಕೆಜಿಎಫ್‌ ಕಿಂಗ್ ಮಾಲ್ಡೀವ್ಸ್‌ಗೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
Tap to resize

ಮಾಲ್ಡೀವ್ಸ್‌ನ ಕಾನ್ರಾಡ್ ಹೋಟೆಲ್‌ನಲ್ಲಿ ತಂಗಿರುವ ರಾಕಿಂಗ್ ಫ್ಯಾಮಿಲಿ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಯಶ್ ಹಾಗೂ ರಾಧಿಕಾಳ ಫೋಟೋಗಿಂತ ಐರಾ ಮತ್ತು ಯಥರ್ವ್‌ ಫೋಟೋ ಶೇರ್ ಮಾಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ತುಂಟಿ ಐರಾಳ ಫೋಟೋ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಯಶ್‌ ಮಾಸ್‌ ಲುಕ್‌ ಹಾಗೂ ರಾಧಿಕಾಳ ಬಬ್ಲಿ ಲುಕ್‌ನ ಫೋಟೋ ನೋಡಿ ನೆಟ್ಟಿಗರು ಈಗಲೂ ಇವರಿಬ್ಬರೂ ರೊಮ್ಯಾಂಟಿಕ್‌ ಎಂದಿದ್ದಾರೆ.
ಐರಾ ಸೇಮ್‌ ತಾಯಿಯ ರೀತಿ ಬೀಚ್ ಬೇಬಿಯೇ. ಈ ಹಿಂದೆ ಡಾಟರ್ಸ್‌ ಡೇಗೆ ವಿಶೇಷವಾಗಿ ಅಪ್ಲೋಡ್ ಮಾಡಲಾಗಿದ್ದ ಫೋಟೋದಲ್ಲೂ ರಾಧಿಕಾ-ಐರಾ ಬೀಚ್ ಬಳಿ ಮಲಗಿದ್ದರು.
ರಾಧಿಕಾ, ಐರಾ ಹಾಗೂ ಯಥರ್ವ್‌ ಒಂದೇ ರೀತಿಯ ಹ್ಯಾಟ್‌ ಧರಿಸಿರುವುದು ತುಂಬಾ ಚೆನ್ನಾಗಿದೆ.
ಮಾಲ್ಡೀವ್ಸ್‌ ಪ್ರಯಣ ಎಷ್ಟು ದಿನಗಳ ಕಾಲ ತಿಳಿದಿಲ್ಲ. ಆದರೆ ಹೀಗೆ ರಾಕಿಂಗ್ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Latest Videos

click me!