ನಟ ದರ್ಶನ್ ಜೈಲಿನಲ್ಲಿದ್ದರೂ ಅವರ 'ದಿ ಡೆವಿಲ್' ಚಿತ್ರ ಬಿಡುಗಡೆಯಾಗಿದೆ. ಈ ನಡುವೆ, ದರ್ಶನ್ ಫೋಟೋ ಹಿಡಿದ ಮಹಿಳೆಯೊಬ್ಬರು ದೇವಾಲಯದ ಮುಂದೆ ನಿಂತು, ಹೆಣ್ಣುಮಕ್ಕಳನ್ನು ರಕ್ಷಿಸುವುದಾಗಿ ಮತ್ತು ಕೆಲವರ ಬಂಡವಾಳ ಬಯಲು ಮಾಡುವುದಾಗಿ ನಿಗೂಢವಾಗಿ ಎಚ್ಚರಿಕೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.
ನಟ ದರ್ಶನ್ (Darshan) ಅತ್ತ ಜೈಲಿನಲ್ಲಿದ್ದರೆ, ಇಲ್ಲಿ ಅವರ ದಿ ಡೆವಿಲ್ (The Devil Movie) ರಿಲೀಸ್ ಆಗಿದೆ. ದರ್ಶನ್ ಮತ್ತು ರಚನಾ ರೈ ನಟಿಸಿರುವ ಈ ಚಿತ್ರವನ್ನು ವೀಕ್ಷಿಸಲು ಅಪಾರ ಸಂಖ್ಯೆಯನ್ನು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇದಾಗಲೇ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ತಮ್ಮ ಮಗ ವಿನೀಶ್ ಮತ್ತು ನಟ ಧನ್ವೀರ್ ಅವರೊಂದಿಗೆ ಬಂದು ಸಿನಿಮಾ ವೀಕ್ಷಿಸಿ ಹೋಗಿದ್ದಾರೆ.
28
ವಿಜಯಲಕ್ಷ್ಮಿ ರಿಯಾಕ್ಷನ್
ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ವಿಜಯಲಕ್ಷ್ಮಿ, 'ಮಾತುಗಳಿಗೆ ಮೀರಿದ ಚಿತ್ರ' ಎಂದು ಬಣ್ಣಿಸಿದ್ದಾರೆ. ದರ್ಶನ್ ಅವರ ನಟನಯು ಮಾಂತ್ರಿಕ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಎರಡು ವಿಭಿನ್ನ ಪಾತ್ರಗಳನ್ನು ದರ್ಶನ್ ಇಷ್ಟೊಂದು ಸೊಗಸಾಗಿ ನಿರ್ವಹಿಸುವುದನ್ನು ನೋಡುವುದು ಅವಿಸ್ಮರಣೀಯ ಎಂದು ಕೊಂಡಾಡಿದ್ದಾರೆ.
38
ದರ್ಶನ್ ಫೋಟೋ ಹಿಡಿದು
ಇದರ ನಡುವೆಯೇ, ಇದೀಗ ಮಹಿಳೆಯೊಬ್ಬರು ದರ್ಶನ್ ಫೋಟೋ ಹಿಡಿದು ಜನರಿಗೆ ವಾರ್ನಿಂಗ್ ಕೊಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈತುಂಬಾ ಕುಂಕುಮ, ಜಪಮಾಲೆ ಹಿಡಿದುಕೊಂಡಿರುವ ಈ ಮಹಿಳೆ ಕೈಯಲ್ಲಿ ದರ್ಶನ್ ಫೋಟೋ ಹಿಡಿದು ದೇವಾಲಯದ ಎದುರುಗಳೇ ಜನರಿಗೆ ಬೈಯುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಮೈತುಂಬಾ ಕುಂಕುಮ, ಜಪಮಾಲೆ ಹಿಡಿದುಕೊಂಡಿರುವ ಈ ಮಹಿಳೆ ಕೈಯಲ್ಲಿ ದರ್ಶನ್ ಫೋಟೋ ಹಿಡಿದು ದೇವಾಲಯದ ಎದುರುಗಳೇ ಜನರಿಗೆ ಬೈಯುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
58
ಹೆಣ್ಣನ್ನು ಏನ್ ಅಂದ್ಕೊಂಡ್ರಾ?
ಉದೋ ಉದೋ ಯಲ್ಲಮ್ಮಾ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಇದರಲ್ಲಿ ಈ ಮಹಿಳೆ, ಹೆಣ್ಣುಮಕ್ಕಳನ್ನು ಏನು ಎಂದುಕೊಂಡ್ರಾ, ವಾಮಾಚಾರ ಮಾಡಿ ಕರೆಸಿಕೊಳ್ತೀರಾ? ಅದೆಲ್ಲಾ ಸಾಧ್ಯವಿಲ್ಲ. ಹೆಣ್ಣುಮಕ್ಕಳ ಮೇಲೆ ಏನೂ ಮಾಡಲು ನಾನು ಬಿಡುವುದಿಲ್ಲ ಎಂದಿದ್ದಾರೆ.
68
ನಿಮ್ಮ ಬಂಡವಾಳ ಎಲ್ಲಾ ಗೊತ್ತಿದೆ
ನಿಮ್ಮ ಬಂಡವಾಳ ಎಲ್ಲಾ ನನಗೆ ಗೊತ್ತಿದೆ. ದೊಡ್ಡ ದೊಡ್ಡ ಬಂಡವಾಳ ಹೊರಗೆ ಬರುತ್ತದೆ. ನಾನು ಬಂದಾಯ್ತು, ಹೆಣ್ಣು ಮುನಿದರೆ ಮಾರಿ, ಇನ್ನು ನಿಮ್ಮ ಬಂಡವಾಳ ಎಲ್ಲಾ ಬಯಲಿಗೆ ಎಳೆಯುತ್ತೇನೆ. ಬಿಲದ ಒಳಗೆ ಇದ್ದರೂ ಬಿಡುವುದಿಲ್ಲ ಎಂದು ಈಕೆ ವಾರ್ನ್ ಮಾಡಿದ್ದಾರೆ.
78
ವಿಮೆನ್ ರೈಟ್ಸ್ ಏನೂ ಇಲ್ಲ
ವಿಮೆನ್ ರೈಟ್ಸ್ ಅಂತೀರಾ, ಎಲ್ಲಿಗೆ ರೈಟು ಏನೂ ಇಲ್ಲ ಸುಡಗಾಡು. ಹೆಣ್ಣು ಎಂದರೆ ಹೇಗೆ ಬೇಕೋ ಹಾಗೇ ಬಳಸಿಕೊಳ್ಳಬಹುದು ಅಂದುಕೊಂಡಿದ್ದೀರಾ? ಹೆಣ್ಣು ಮನಸ್ಸು ಮಾಡಿದ್ರೆ ಭದ್ರಕಾಳಿ ಆಗ್ತಾಳೆ. ನಾನೀಗ ಅದೇ ಆಗಿರೋದು. ನಾನು ಬಂದಾಯ್ತು ಯಾರನ್ನೂ ಬಿಡಲ್ಲ ಎಂದಿದ್ದಾರೆ.
88
ಇವನಿಗೇ ಅಂತೀರಾ?
ಕೈಯಲ್ಲಿ ಹಿಡಿದಿರೋ ದರ್ಶನ್ ಅವರ ಫೋಟೋ ತೋರಿಸಿ ಇವನಿಗೇ ಅಂತೀರಾ? ಮನೆಗೆ ಬಂದಾಗ ಮದ್ದು ಹಾಕ್ತೀರಾ? ನೀವೆಲ್ಲಾ ಫ್ರೆಂಡ್ಸ್ ಏನ್ರೋ ಎಂದು ಬೈದಿದ್ದಾರೆ ಮಹಿಳೆ. ಆದರೆ ಎಲ್ಲವೂ ಒಗಟಾಗಿಯೇ ಇದೆ. ಈಕೆ ಯಾರು, ದರ್ಶನ್ ಫೋಟೋ ಹಿಡಿದದ್ದು ಯಾಕೆ, ಈಕೆ ಹೇಳ್ತಿರೋದು ಯಾರ ಬಗ್ಗೆ ಎನ್ನೋದು ಮಾತ್ರ ನಿಗೂಢವಾಗಿದೆ. ಇದೇ ವೇಳೆ ದರ್ಶನ್ ಫೋಟೋ ಹಿಡಿದು ಉರುಳು ಸೇವೆಯನ್ನೂ ಮಾಡಿದ್ದಾರೆ.