ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಕಸ್ತೂರಿ ಶಂಕರ್ ಸದ್ಯ ತಮಿಳು ಭಾಷಿಕ ಜನರ ಕುರಿತು ಮಾತನಾಡಿ ಜನರ ಟಾರ್ಗೆಟ್ ಆಗಿದ್ದಾರೆ.
ಜಾಣ, ಇಬ್ಬರ ನಡುವೆ ಮುದ್ದಿನ ಆಟ, ತುತ್ತಾ ಮುತ್ತಾ, ಹಬ್ಬ, ಪ್ರೇಮಕ್ಕೆ ಸೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮದುರೈ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ ಸಕ್ತೂರಿ ಫೋಷಕರು ಲಾಯರ್. ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಗಳು ಲ್ಯೂಕೇಮಿಯಾ ಸರ್ವೈವರ್.
1992ರಲ್ಲಿ ಕಸ್ತೂರಿ ಶಂಕರ್ ಮಿಸ್ ಚೆನ್ನೈ ಕಿರೀಟ ಪಡೆದಿದ್ದಾರೆ. ಅದೇ ವರ್ಷ ಫೆಮಿನಾ ಮಿಸ್ ಮದರಾಸ್ ಬ್ಯೂಟಿ ಪೇಜೆಂಟ್ ಅವಾರ್ಡ್ ಪಡೆದಿದ್ದಾರೆ. ಮಾಡಲಿಂಗ್ ಮೂಲಕ ತಮ್ಮ ವೃತ್ತಿ ಆರಂಭಿಸಿದ್ದರು.
ಕಾಂಟ್ರವರ್ಸಿಗಳನ್ನು ಮಾಡಿಕೊಳ್ಳುವುದರಲ್ಲಿ ಕಸ್ತೂರಿ ಸಿಕ್ಕಾಪಟ್ಟೆ ಫೇಮಸ್. ಸಮಾಜದಲ್ಲಿ ನಡೆಯುತ್ತಿರುವ ಹಲವು ವಿಚಾರಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಿ ಟ್ರೋಲ್ ಆಗುತ್ತಾರೆ.
2017ರಲ್ಲಿ ರಜನಿಕಾಂತ್ ರಾಜಕೀಯ ಭವಿಷ್ಯದ ಬಗ್ಗೆ ಕಾಮೆಂಟ್ ಮಾಡಿ ನೆಗೆಟಿವ್ ಆಗಿ ಟ್ರೋಲ್ ಆಗಿಬಿಟ್ಟರು. ಮೀ ಟೂ ಚಾಲ್ತಿಯಲ್ಲಿ ಇದ್ದಾಗ ಹಲವು ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಧ್ವನಿ ಎತ್ತಿದ್ದರು.
2020ರಲ್ಲಿ ನಟ ಅಜಿತ್ ಅಭಿಮಾನಿ ಎಂದು ಹೇಳುತ್ತಿದ್ದ ವ್ಯಕ್ತಿ ಕಸ್ತೂರಿ ಶಂಕರ್ ಬಗ್ಗೆ ತುಂಬಾ ಕೀಳಾಗಿ ಕಾಮೆಂಟ್ ಮಾಡಿದ್ದನು. ಒಂದು ರಾತ್ರಿ ಸುಖ ಬೇಕು ಅಂದ್ರೆ ತಾಯಿ ಅಥವಾ ತಂಗಿ ಜೊತೆ ಮಲ್ಕೋ ಎಂದು ನೇರವಾಗಿ ಉತ್ತರಿಸಿದ್ದರು.