ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ಮತ್ತೋರ್ವ ನಟ, 2025ಕ್ಕೆ ಅಪ್ಪನಾಗುತ್ತಿದ್ದೇನೆಂದು ಘೋಷಣೆ

First Published | Nov 16, 2024, 6:55 PM IST

ಕನ್ನಡ ಚಿತ್ರರಂಗದ ನಟ, ರೆಡಿಯೋ ಜಾಕಿ ರಿಷಿ ಮತ್ತು ಪತ್ನಿ ಸ್ವಾತಿ ಪರಶುರಾಮನ್ 2025ರಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ನಟ, ಬಹುಮುಖ ಪ್ರತಿಭೆ, ರೆಡಿಯೋ ಜಾಕಿ ರಿಷಿ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. 2025ರಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ರಿಷಿ ಮತ್ತು ಪತ್ನಿ ಸ್ವಾತಿ ಪರಶುರಾಮನ್ ಘೋಷಿಸಿದ್ದಾರೆ.
 

ನಾವು 2025 ಇನ್ನೂ ಅತ್ಯುತ್ತಮವಾಗಿರುವುದನ್ನು ನಿರೀಕ್ಷಿಸುತ್ತಿದ್ದೇವೆ. ಆಶೀರ್ವಾದ, ಕೃತಜ್ಞತೆ ಮತ್ತು ಪ್ರೀತಿಯಿಂದ  ನಮ್ಮ ವಾರ್ಷಿಕೋತ್ಸವದಂದು ಇದನ್ನು ಘೋಷಿಸಲು ಮತ್ತು ನಮ್ಮ ಕುಟುಂಬದ ಹೊಸ ಸದಸ್ಯರನ್ನು ಶೀಘ್ರದಲ್ಲೇ ಸ್ವಾಗತಿಸುತ್ತಿದ್ದೇವೆ . ಇದು ನಮ್ಮ ಪ್ರಯಾಣದ ಮುಂದಿನ ದೊಡ್ಡ ಹೆಜ್ಜೆ ಮತ್ತು ನಾವು ಇನ್ನೂ ಹೆಚ್ಚು ಉತ್ಸುಕರಾಗಿರಲು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

Tap to resize

'ಆಪರೇಷನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತವಾಗಿರುವ ನಟ ರಿಷಿ 2019ರಲ್ಲಿ ಚೆನ್ನೈನಲ್ಲಿ ತಮ್ಮ ಗೆಳತಿ ಸ್ವಾತಿ ಜೊತೆ ಹಸೆಮಣೆ ಏರಿದ್ದರು. ಮದುವೆಯಾಗಿ  5 ವರ್ಷಗಳ ಬಳಿಕ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
 

ಮೂಲತಃ ಮೈಸೂರಿನವರಾದ ಇಂಜಿನಿಯರಿಂಗ್ ಪದವೀಧರ ರಿಷಿ. ಸ್ವಾತಿ ಪರಶುರಾಮನ್ ಕೂಡ ಇಂಜಿನಿಯರಿಂಗ್ ಮಾಡಿದ್ದಾರೆ. ಆದರೆ ಸ್ವಾತಿ  ಬರಹಗಾರ್ತಿ ಕೂಡ ಹೌದು.

ಕಿರುತೆರೆಯಲ್ಲಿ ನಟನೆಯನ್ನು ಆರಂಭಿಸಿ ಬೆಳ್ಳಿತೆರೆಗೆ ಕಾಲಿಟ್ಟ ನಟ ರಿಷಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲೇ ಸಿನಿಪ್ರೇಮಿಗಳ ಗಮನ ಸೆಳೆದಿದ್ದರು. ಬೆಳ್ಳಿತೆರೆಗೆ ಬರುವ ಮೊದಲು 'ಮಹಾಪರ್ವ' ಮತ್ತು 'ಅನುರೂಪ' ಧಾರಾವಾಹಿಯಲ್ಲಿ  ಕಾಣಿಸಿಕೊಂಡಿದ್ದರು. ರೇಡಿಯೋ ಜಾಕಿ ಆಗು ಕೂಡ ಗುರುತಿಸಿಕೊಂಡಿದ್ದರು.

ಪೇಮಸ್‌ ರೇಡಿಯೋ ಜಾಕಿ RJ ನೇತ್ರಾ ಇವರ ಸಹೋದರಿ ಅನ್ನುವುದು ಹಲವರಿಗೆ ಗೊತ್ತಿಲ್ಲ, ಅಕ್ಕ ತಮ್ಮ ಇಬ್ಬರೂ ರೆಡಿಯೋ ಜಾಕಿ ಎನ್ನುವುದು ವಿಶೇಷ.

ಇತ್ತೀಚೆಗೆ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು.
 

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ತಬಲಾ ನಾಣಿ ಅವರ ಏಕೈಕ ಪುತ್ರಿ ಚಿತ್ರಾ ಮತ್ತು ನಟ ರಾಮ್ ಚೇತನ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ಇನ್ನು ಮೂಲತ ಕನ್ನಡದವರಾದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟು 2025ರ ಹೊಸ ವರ್ಷಕ್ಕೆ ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ.

Latest Videos

click me!