ಸೀರೆ ಉಟ್ಟಾಗೆಲ್ಲ ಹಬ್ಬ… ಎನ್ನುತ್ತಾ ಹೂನಗೆ ಚೆಲ್ಲಿದ ಟೋಬಿ ಬೆಡಗಿ ಚೈತ್ರಾ ಆಚಾರ್

Published : Aug 16, 2024, 01:42 PM IST

ಸ್ಯಾಂಡಲ್’ವುಡ್ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದು, ಮುದ್ದಾದ ಫೋಟೊಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.   

PREV
17
ಸೀರೆ ಉಟ್ಟಾಗೆಲ್ಲ ಹಬ್ಬ… ಎನ್ನುತ್ತಾ ಹೂನಗೆ ಚೆಲ್ಲಿದ ಟೋಬಿ ಬೆಡಗಿ ಚೈತ್ರಾ ಆಚಾರ್

ಕನ್ನಡ ಚಿತ್ರರಂಗದ ಭರವಸೆಯ ನಟಿ ಹಾಗೂ ಮಲ್ಟಿ ಟ್ಯಾಲೆಂಟೆಡ್ ಬೋಲ್ಡ್ ಮತ್ತು ಬ್ಯೂಟಿ ಫುಲ್ ನಟಿ ಚೈತ್ರಾ ಆಚಾರ್ (Chaithra Achar), ತಮ್ಮ ಸಿನಿಮಾಗಳಿಗಿಂತ ತಮ್ಮ ಫೋಟೊಗಳ ಮೂಲಕವೇ ಹೆಚ್ಚಾಗಿ ಸುದ್ದಿಯಲ್ಲಿರ್ತಾರೆ. ಹೆಚ್ಚಾಗಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಸೃಷ್ಟಿಸುತ್ತಿರುತ್ತಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ನಟಿ ಚೈತ್ರಾ ಆಚಾರ್, ರೀಲ್ ನಲ್ಲೂ ರಿಯಲ್ ಲೈಫಲ್ಲೂ ತುಂಬಾನೆ ಬೋಲ್ಡ್. ತಮ್ಮ ನೇರ, ದಿಟ್ಟ ಮಾತುಗಳು ಜೊತೆಗೆ ತಮ್ಮ ಬೋಲ್ಡ್ ಡ್ರೆಸ್ಸಿಂಗ್ ಮೂಲಕ ನಟಿ ಸದಾ ಸುದ್ದಿಯಲ್ಲಿರ್ತಾರೆ. 
 

37

ತನಗೆ ಯಾರು ಏನನ್ನ ಮಾಡೋದು ಬೇಡ ಅಂತಾರೋ, ಅದನ್ನ ಮಾಡೋದು ಅಂದ್ರೆ ನಂಗೆ ತುಂಬಾನೆ ಇಷ್ಟ ಎನ್ನುತ್ತಲೇ ತಮ್ಮ ಬೋಲ್ಡ್ ಫೋಟೊಗಳಿಗೆ (bold photos) ಕಾಮೆಂಟ್ ಮಾಡೋರಿಗೆ ತಿರುಗೇಟು ಕೊಟ್ಟಿದ್ದ ನಟಿ, ಇದೀಗ ಕೆಟ್ಟ ಕಾಮೆಂಟ್ ಗಳು ಬಾರದಿರಲು, ಕಾಮೆಂಟ್ ಸೆಕ್ಷನ್ ಕ್ಲೋಸ್ ಮಾಡಿ, ತಮಗೆ ಆರಾಮ ಎನಿಸುವ ಎಲ್ಲಾ ರೀತಿಯ ಉಡುಗೆಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಾರೆ. 
 

47

ಇದೀಗ ವರಮಹಾಲಕ್ಷ್ಮೀ ಹಬ್ಬದ (varamahalakhsmi festival) ಹಿನ್ನೆಲೆಯಲ್ಲಿ ನಟಿ ಚೈತ್ರಾ ನೇರಳೆ ಬಣ್ಣದ ಬಾರ್ಡರ್ ಇರುವಂತಹ, ನೀಲಿ ಬಣ್ಣದ ಸೀರೆಯುಟ್ಟು ತುಂಬಾನೆ ಸಿಂಪಲ್ ಆಗಿ ಚೈತ್ರಾ ಕಾಣಿಸಿಕೊಂಡಿದ್ದು, ಸೀರೆ ಉಟ್ಟಾಗೆಲ್ಲ ಹಬ್ಬನೇ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. 
 

57

ಅವಂತ್ರ ಬೈ ಟ್ರೆಂಡ್ಸ್ ಅವರ ಸಿಲ್ಕ್ ಸೀರೆಯಲ್ಲಿ ಚೈತ್ರಾ ಮಿಂಚುತ್ತಿದ್ದು, ವಿಯರ್ಡ್ಲಿ ವಿಯರ್ಡ್ ಫೋಟೋಗ್ರಾಫಿಗೆ ನಟಿ ತುಂಬಾನೆ ಮುದ್ದಾಗಿ ಪೋಸ್ ನೀಡಿದಾರೆ. ಇವರನ್ನ ನೋಡಿದ್ರೆ, ನಟಿಯ ಮನೆಯಲ್ಲೂ ಹಬ್ಬದ ಸಂಭ್ರಮ ಜೋರಾಗಿಯೇ ಇದ್ದಂತೆ ಕಾಣಿಸುತ್ತೆ. 
 

67

ಕನ್ನಡದಲ್ಲಿ ಬೆರಳೆಣಿಕೆಯಷ್ಟೇ ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ತಮ್ಮ ಅದ್ಭುತವಾದ ನಟನೆಯಿಂದ ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾಗಳ ಪಾತ್ರಗಳ ಮೂಲಕ ಕನ್ನಡದ ಭರವಸೆಯ ನಟಿಯಾಗಿ ಕಾಣಿಸಿಕೊಂಡಿರುವ ಚೈತ್ರಾ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. 
 

77

ಕನ್ನಡ, ತಮಿಳು ಸಿನಿಮಾಗಳಲ್ಲಿ ಚೈತ್ರಾ ಆಚಾರ್ ಬ್ಯುಸಿಯಾಗಿದ್ದು,  ಕನ್ನಡದಲ್ಲಿ ಎರಡು ಸಿನಿಮಾ ಮತ್ತು ತಮಿಳಿನಲ್ಲಿ ಎರಡು ಸಿನಿಮಾಗಳಲ್ಲಿ ಚೈತ್ರಾ ನಟಿಸುತ್ತಿದ್ದಾರೆ. ಸ್ಟ್ರಾಬೆರ್ರಿ, ಹ್ಯಾಪಿ ಬರ್ತ್ ಡೇ ಟು ಮಿ, ಉತ್ತರಕಾಂಡ, ಸಿದ್ಧಾರ್ಥ್ ಸಿನಿಮಾಗಳಲ್ಲಿ ಚೈತ್ರಾ ನಟಿಸುತ್ತಿದ್ದಾರೆ. 
 

Read more Photos on
click me!

Recommended Stories