ಸೋನಲ್ ಜೊತೆಗೆ ಬ್ಲಾಕ್ ಬಸ್ಟರ್ ಜೀವನ ಆರಂಭಿಸೋಕೆ ತರುಣ್ ಸುಧೀರ್ ರೆಡಿ, ಮುದ್ದಾದ ಫೋಟೊ ಹಂಚಿಕೊಂಡ ಜೋಡಿ

First Published | Aug 16, 2024, 1:38 PM IST

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಮುದ್ದಾದ ಫೋಟೋಗಳನ್ನು ಹಂಚಿಕೊಂಡ ಜೋಡಿ, ತಮ್ಮ ಹೊಸ ಜೀವನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೋ ಸತಿಪತಿಗಳಾದ ಮೊದಲ ಬಾರಿಗೆ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈಗಷ್ಟೇ ಮದುವೆಯಾಗಿದೆ ಜೊತೆಯಾಗಿ ನಮ್ಮ ಬ್ಲಾಕ್‌ಬಸ್ಟರ್ ಜೀವನಕ್ಕೆ ಸಿದ್ಧವಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ ನೂತನ ಜೋಡಿಗಳು.

Tap to resize

ನಮ್ಮ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿ ಹರಸಿದ ಪ್ರತಿಯೊಬ್ಬ ಪ್ರೀತಿಪಾತ್ರರಿಗೂ ನಮ್ಮ ಧನ್ಯವಾದಗಳು. ನಿಮ್ಮಿಂದ ನಮಗಾದ ಸಂತೋಷಕ್ಕೆ ಮೇರೆ ಇಲ್ಲ  ಎಂದು ಬರೆದುಕೊಂಡಿದ್ದಾರೆ.

ಹಿಂದೂ ಸಂಪ್ರದಾಯದ ಪ್ರಕಾರ ತರುಣ್ ಮತ್ತು ಸೋನಲ್ ಸತಿಪತಿಗಳಾಗಿದ್ದು, ಮುಂದಿನ ತಿಂಗಳು ಸೋನಲ್ ಅವರ ಕುಟುಂಬದಂತೆ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಪದ್ದತಿಯಲ್ಲಿ ಮದುವೆ ನಡೆಯಲಿದೆ.

ಆಗಸ್ಟ್ 10, 11 ರಂದು ನಡೆದ ವಿವಾಹ ಕಾರ್ಯಕ್ರಮದಲ್ಲಿ ಬಿ ಎಸ್ ಯಡಿಯೂರಪ್ಪ, ಡಿಸಿಎಂ ಡಿಕೆ ಶಿವಕುಮಾರ್, ರಿಷಬ್ ಶೆಟ್ಟಿ, ಯೋಗರಾಜ್ ಭಟ್, ಉಪೇಂದ್ರ, ದುನಿಯಾ ವಿಜಯ್, ಧನಂಜಯ್, ಜಗಪತಿ ಬಾಬು ಸೇರಿದಂತೆ ರಾಜಕೀಯ ಮತ್ತು ಸಿನಿಮಾ ರಂಗದ ಅನೇಕ ಗಣ್ಯರು ವಧೂವರರನ್ನು ಹಾರೈಸಿದ್ದರು.

ಮದುವೆ ಬಳಿಕ ದರ್ಶನ್‌ರನ್ನು ನೆನೆದು ತರುಣ್ ಭಾವುಕರಾದರು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ದರ್ಶನ್‌ರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದಾಗಿ ದಂಪತಿ ಮದುವೆ ದಿನ ತಿಳಿಸಿದ್ದರು.

ರಾಬರ್ಟ್‌ ಸಿನಿಮಾ ಸಮಯದಲ್ಲಿ ಇಬ್ಬರ ಪರಿಚಯವಾಗಿತ್ತು. ಬಳಿಕ ಸ್ನೇಹಿತರಾಗಿ ಮುಂದೆ ಕಾಟೇರ ಸಿನಿಮಾ ಹೊತ್ತಿಗೆ ಪ್ರೇಮ ಬೆಳೆದು ಈಗ ಮದುವೆಯಾಗಿ ದಂಪತಿಗಳಾಗಿದ್ದಾರೆ.

ದರ್ಶನ್‌ ಅವರೇ ಸೋನಲ್‌ ಹಾಗೂ ನಮ್ಮ ಮನೆಯವರ ಜೊತೆ ಮದುವೆ ಮಾತುಕತೆ ಮಾಡಿದ್ದರು ಎಂದು ಮದುವೆಗೂ ಮುನ್ನ ತರುಣ್‌ ಸುಧೀರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಮದುವೆ ಮಂಟಪವನ್ನು ಸಿನಿಮಾ ಸೆಟ್‌ನಂತೆ ಸೊಗಸಾಗಿ ವಿನ್ಯಾಸಗೊಳಿಸಲಾಗಿತ್ತು. ತರುಣ್ ಆಪ್ತ ಸ್ನೇಹಿತರಾದ ಶರಣ್ ಮತ್ತು ಪ್ರೇಮ್ ಮುಂಚೂಣಿಯಲ್ಲಿ ನಿಂತು ಓಡಾಡಿದರು.

Latest Videos

click me!