ಶ್ರೀನಗರ ಕಿಟ್ಟಿ ಮುಂದೆ ಲೇಡಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಹಾಟ್ ಬ್ಯೂಟಿ ರಾಗಿಣಿ: ರಚಿತಾ ರಾಮ್‌ಗೆ ಭಯ ಶುರುವಾಗುತ್ತಾ?

First Published | Aug 14, 2024, 9:58 PM IST

ನಾಗಶೇಖರ್‌ ನಿರ್ದೇಶನದ, ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ಜೋಡಿಯಾಗಿ ನಟಿಸುತ್ತಿರುವ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ರಿಲೀಸ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಚಿತ್ರತಂಡದಿಂದ ಹೊಸ ಅಪ್‌ಡೇಟ್ ಬಂದಿದೆ.

ಅರಮನೆ, ಮೈನ, ಸಂಜು ವೆಡ್ಸ್ ಗೀತಾದಂತಹ ಎಮೋಷನಲ್ ಲವ್ ಸ್ಟೋರಿಗಳನ್ನು ಕೊಟ್ಟಿದ್ದ ನಿರ್ದೇಶಕ  ನಾಗಶೇಖರ್ ಇದೀಗ ಕನ್ನಡ ಸಿನಿರಸಿಕರಿಗಾಗಿ ಮತ್ತೊಂದು ಅದ್ಭುತ ಪ್ರೇಮ ಸ್ಟೋರಿಯನ್ನು ಹೇಳಹೊರಟಿದ್ದಾರೆ. 

ಸಂಜು ವೆಡ್ಸ್ ಗೀತಾ ಪಾರ್ಟ್ 2 ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ಹಾಟ್ ಬ್ಯೂಟಿ ರಾಗಿಣಿ ದ್ವಿವೇದಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

Tap to resize

ರಚಿತಾ ರಾಮ್ ಚಿತ್ರದ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡರೆ, ರಾಗಿಣಿ ದ್ವಿವೇದಿ ಚಿತ್ರದ ಲೇಡಿ ವಿಲನ್ ಆಗಿ ಶ್ರೀನಗರ ಕಿಟ್ಟಿಗೆ ಠಕ್ಕರ್ ಕೊಡಲಿದ್ದಾರೆ. ಈ ಮೂಲಕ ಹೊಸ ಬಗೆಯ ಪಾತ್ರದಲ್ಲಿ ರಾಗಿಣಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೀರೋಯಿನ್ ಆಗಿ ಬೋಲ್ಡ್ ಬ್ಯೂಟಿಯಾಗಿ ಸಿನಿಮಾದಲ್ಲಿ ನಟಿಸುತ್ತಿದ್ದ ನಟಿ ರಾಗಿಣಿ, ಸಂಜು ವೆಡ್ಸ್ ಗೀತಾ 2 ಮೂಲಕ ವಿಭಿನ್ನವಾದ ಪಾತ್ರದಲ್ಲಿ ನಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿಶೇಷವಾಗಿ  ರಾಗಿಣಿ ಈ ಚಿತ್ರದಲ್ಲಿ ಸ್ಪೆಷಲ್ ಹಾಡಿಗೂ ಹೆಜ್ಜೆ ಹಾಕಿದ್ದಾರೆ.

ಸಂಜು ವೆಡ್ಸ್ ಗೀತಾ ಪಾರ್ಟ್‌ 2 ಕತೆ ಸಿಕ್ಕಾಪಟ್ಟೆ ಹೊಸದಾಗಿದೆಯಂತೆ. ಈ ಬಾರಿ ಮಳೆ, ಹಸಿರು, ತಣ್ಣನೆಯ ಪ್ರದೇಶಕ್ಕಿಂತ ನಿಗಿ ನಿಗಿ ಸುಡುವ ಬಯಲಿನಲ್ಲಿ ಕತೆ ತೆರೆದುಕೊಳ್ಳಲಿದೆಯಂತೆ ಎಂದು ನಿರ್ದೇಶಕ ನಾಗಶೇಖರ್‌ ಹೇಳಿದ್ದಾರೆ.

ಶಿಡ್ಲಘಟ್ಟದ ಗ್ಲೋಬಲ್‌ ಕತೆಯೊಂದು ಸ್ವಿಟ್ಜರ್ಲ್ಯಾಂಡ್‌ವರೆಗೂ ಪ್ರಯಾಣ ಮಾಡುತ್ತದೆ. ಇಲ್ಲಿನ ಒಂದು ಸಾಮಾನ್ಯ ಪ್ರದೇಶದ ಊರಿನ ಹುಡುಗ ಸ್ವಿಟ್ಜರ್ಲ್ಯಾಂಡ್‌ವರೆಗೂ ಯಾಕೆ ಹೋಗುತ್ತಾನೆ ಎನ್ನುವ ಒಂದು ರೋಚಕ ಪ್ರಯಾಣ ಸಂಜು ವೆಡ್ಸ್‌ ಗೀತಾ 2 ಚಿತ್ರದಲ್ಲಿದೆ.

Latest Videos

click me!