ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಸಖತ್ ಸಿನಿಮಾ ಶೂಟಿಂಗ್‌ಗಳಿಂದ ಬ್ರೇಕ್ ತೆಗೆದುಕೊಂಡು ಜಾಲಿ ಮೂಡ್‌ನಲ್ಲಿದ್ದಾರೆ.
ಪುತ್ರಿ ಶೈರ್ಯ, ತಂಗಿ ಮಕ್ಕಳಾದ ವೈಷ್ಣವಿ ಮತ್ತು ಗೋಪಿನಾಥ್, ಆಪ್ತ ಸ್ನೇಹಿತೆ ಪ್ರಿಯಾಳ ಪುತ್ರ ಹಾಗೂ ಮತ್ತೊಬ್ಬ ಸ್ನೇಹಿತೆಯ ಮಗಳ ಜೊತೆ ಟ್ರಿಪ್ ಮಾಡಿದ್ದಾರೆ.
ಮಕ್ಕಳ ಜೊತೆಗಿನ ಮೊದಲ ಗೋವಾ ಟ್ರಿಪ್ ಇದಾಗಿತ್ತು, ಏರ್ಪೋರ್‌ಟ್‌ನಲ್ಲಿ ಕ್ಲಿಕ್ ಮಾಡಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿ 'Ok lets goa' ಎಂದು ರಾಘು ಬರೆದುಕೊಂಡಿದ್ದಾರೆ.
ಇದ್ದಾಗ ಮೇಲೆ ಮತ್ತೊಮ್ಮೆ ಮಗ ಮತ್ತು ಆತನ ಸ್ನೇಹಿತರ ಜೊತೆ ಗೋವಾ ಟ್ರಿಪ್ ಮಾಡಿದ್ದಾರೆ. 'Ok goa it is..again' ಎಂದು ಬರೆದುಕೊಂಡಿದ್ದಾರೆ.
ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ರಾಘು ಗೋವಾದಲ್ಲಿ ಆಚರಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ತುಂಬಾ ಬರ್ತಡೇ ವಿಶ್‌ಗಳಿಂದ ತುಂಬಿಕೊಂಡಿದೆ.
ಗೋವಾದಿಂದ ಹಿಂತಿರುಗಿ ಬರುವಾಗ ಮಕ್ಕಳ ಬೇಸರದಲ್ಲಿ ನಿಂತುಕೊಂಡಿರುವ ಫೋಟೋ ಹಾಕಿ 'CLEARLY… I am the only one happy getting back to ನಮ್ಮೂರು' ಎಂದಿದ್ದಾರೆ ರಾಘು.
ಈ ಫೋಟೋದಲ್ಲಿ ರಾಘು ಫಾಲೋವರ್ ಆಗಿರುವ ಮಹಿಳೆ 'ರೀ ನಮ್ ಮೆಸೇಜ್‌ಗೆ ಯಾಕ್ ರಿಪ್ಲೈಡ್ ಮಾಡಲ್ಲ' ಎಂದು ಕಾಮೆಂಟ್ ಮಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ.
Vaishnavi Chandrashekar