ಗುಲಾಬಿ ಸೀರೆಯಲ್ಲಿ ಮಿಂಚಿದ ಸಂಗೀತ ಶೃಂಗೇರಿ, ನಿಮ್ಮಿಂದಲೇ ಸೀರೆಗೆ ಕಳೆ ಬಂತು ಅಂತಿದ್ದಾರೆ ಫ್ಯಾನ್ಸ್!

Published : May 28, 2024, 12:42 PM IST

ಸ್ಯಾಂಡಲ್ ವುಡ್ ನಟಿ ಮತ್ತು ಬಿಗ್ ಬಾಸ್ ಸೀಸನ್ 10 ರಲ್ಲಿ ಮಿಂಚಿದ ಸ್ಪರ್ಧಿ ಸಂಗೀತ ಶೃಂಗೇರಿ ಇದೀಗ ಗುಲಾಬಿ ಬಣ್ಣದ ಸೀರೆಯುಟ್ಟು ಪೋಸ್ ನೀಡಿದ್ದಾರೆ.   

PREV
17
ಗುಲಾಬಿ ಸೀರೆಯಲ್ಲಿ ಮಿಂಚಿದ ಸಂಗೀತ ಶೃಂಗೇರಿ, ನಿಮ್ಮಿಂದಲೇ ಸೀರೆಗೆ ಕಳೆ ಬಂತು ಅಂತಿದ್ದಾರೆ ಫ್ಯಾನ್ಸ್!

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಹಿರಿತೆರೆಯಲ್ಲೂ ಮಿಂಚುತ್ತಿರುವ ಸ್ಯಾಂಡಲ್ ವುಡ್ ಬ್ಯೂಟಿ ಮತ್ತು ಬಿಗ್ ಬಾಸ್ ಸೀಸನ್ 10 ರಲ್ಲಿ ತಮ್ಮ ಮಾತು, ಅದ್ಭುತ ಆಟಗಳ ಮೂಲಕ ಭಾರಿ ಸದ್ದು ಮಾಡಿದ ಚೆಲುವೆ ಸಂಗೀತಾ ಶೃಂಗೇರಿ (Sangeetha Sringeri). 
 

27

ಹರ ಹರ ಮಹಾದೇವ ಸೀರಿಯಲ್‌ನಲ್ಲಿ ಸತಿಯಾಗಿ ನಟಿಸಿ ಜನಪ್ರಿಯತೆ ಪಡೆದ ಸಂಗೀತ, 777 ಚಾರ್ಲಿ (777 Charlie)  ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದರು, ಬಳಿಕ ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್, ಮಾರಿಗೋಲ್ಡ್ ಸಿನಿಮಾದಲ್ಲಿ ಮಿಂಚಿದ ನಟಿ ಇವರು. 
 

37

ಬಿಗ್ ಬಾಸ್ ಸೀಸನ್ ಹತ್ತರಲ್ಲಿ (Bigg Boss Season 10)  ಪ್ರತಿಯೊಬ್ಬ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು, ಎಲ್ಲಾ ಗೇಮ್ಸ್‌ನಲ್ಲೂ ಅದ್ಭುತವಾಗಿ ಆಟವಾಡಿ, ಸೀಸನ್‌ನ ಎರಡನೇ ರನ್ನರ್ ಅಪ್ ಆಗಿ ಗೆದ್ದು ಬಂದಿರುವ ಸಂಗೀತಾ ಸದ್ಯ ಸಿನಿಮಾ, ಶೂಟಿಂಗ್ (Shootng), ಪ್ರವಾಸ (travel) ಎಂದು ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಫೋಟೋ ಶೂಟ್ (Photo Shoot) ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

47

ಸಂಗೀತ ಶೃಂಗೇರಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗುಲಾಬಿ ಬಣ್ಣದ ಸೀರೆಯುಟ್ಟು ಅದಕ್ಕೆ ಗುಲಾಬಿ ಗುಲಾಬಿ vibes ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ತಮ್ಮ ಮೆಚ್ಚಿನ ನಟಿಯನ್ನು ಸೀರೆಯಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ದೇವತೆ ತರ ಕಾಣಿಸ್ತಿದ್ದೀರಿ, ಸೀರೇಯುಟ್ಟ ಬೊಂಬೆ ನೀವು, ದೃಷ್ಟಿ ಆಗಬಹುದೇನೋ? ಅಪ್ಸರೆ, ನೀವೆನು ಮೆಜೀಶಿಯನ್ನಾ? ನಿಮ್ಮನ್ನು ನೋಡ್ತಾ ಇದ್ರೆ, ಬೇರೆಲ್ಲಾ ಕಾಣೆಯಾಗುತ್ತೆ ಎಂದು ಬರೆದಿದ್ದಾರೆ. 
 

57

ಇನ್ನು ಕೆಲವರು ನಮ್ಮ ರಾಕಿಂಗ್ ಕ್ವೀನ್ (Rocking Queen) ಸಂಗೀತಾ ಯಾವ ಬಾಲಿವುಡ್ ನಟಿಯರಿಗಿಂತ ಕಡಿಮೆ ಇಲ್ಲ. ನಿನ್ನಿಂದಾಗಿಯೇ ಆ ಸೀರೆಗೆ ಒಂದು ಕಳೆ ಬಂತು. ನೂರಾರು ಸುಮ ಸೇರಿ ಹೆಣ್ಣಾಗಿ ಬಂದಳಮ್ಮ..ಮಂದಾರ ಮದನಾರಿ ಸ್ವರ್ಗಾನೇ ತಂದಳಮ್ಮ ಎಂದು ಹಾಡಿ ಕೂಡ ಹೊಗಳಿದ್ದಾರೆ. ನಿಮ್ಮ ಅಂದ ನೋಡಿ ನಾವು ಕಳೆದು ಹೋದ್ವಿ ಎಂದು ಇನ್ನೂ ಕೆಲವು ಜನ ಕಾಮೆಂಟ್ ಮಾಡಿದ್ದಾರೆ. 
 

67

ಇನ್ನು ಸಂಗೀತ ಅವರು ಇದೇ ಪಿಂಕ್ ಸೀರೆಯುಟ್ಟು ಕಲರ್ಸ್ ಕನ್ನಡದ (Colors Kannada) ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದರು. ಒಂದೊಂದು ಕತೆಗೂ ಹೊಸ ಬಣ್ಣ; ಇಷ್ಟದ ಕತೆಗಳು ಮತ್ತಷ್ಟು ಹತ್ತಿರ! ಎನ್ನುವ ಪ್ರೋಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದ್ದು, ಇದರಲ್ಲಿ ಸಂಗೀತ ಶೃಂಗೇರಿ ಕ್ಯೂಟ್ ಆಗಿ ಎಲ್ಲಾ ಸೀರಿಯಲ್ ಬಗ್ಗೆ ಹೇಳಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
 

77

ನಮ್ಮ ಸಿಂಹಿಣಿ ಗತ್ತು ಕಲರ್ಸ್ ಕನ್ನಡಕ್ಕೆ ಗೊತ್ತು ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ನಿಮ್ಮಿಂದಾಗಿಯೇ ಮತ್ತೆ ಕಲರ್ಸ್ ಕನ್ನಡ ಫಾಲೋ ಮಾಡ್ತಿದ್ದೀನಿ, ನಿಮ್ಮ ಪ್ರೋಮೋನ ಅದೆಷ್ಟು ಸಲ ನೋಡಿದೇ ಗೊತ್ತಿಲ್ಲ, ಇಲ್ಲಿವರೆಗೆ ಅಷ್ಟೊಂದು ಸೀರಿಯಲ್ ನೋಡ್ತ ಇರ್ಲಿಲ್ಲ ಸಂಗೀ ಹೇಳಿದ್ರಲ್ಲ ಇನ್ನೂ ಪಕ್ಕಾ ನೋಡ್ತೀವಿ ಅಂತಾನೂ ಜನ ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories