Vijayalakshmi Darshan: ಕನ್ನಡ ಚಿತ್ರರಂಗದ ನಟ, ಸದ್ಯ ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ಗಂಡನನ್ನು ನೆನೆದು ಥೈಲ್ಯಾಂಡ್ ಟ್ರಿಪ್ ನ ಹಳೆಯ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ದೃಷ್ಟಿ ತೆಗೆದಿದ್ದಾರೆ.
ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಹೆಚ್ಚಾಗಿ ಒಂದಲ್ಲ ಒಂದು ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಪತಿಯ ಜೊತೆಗಿನ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
27
ಜೈಲಲ್ಲಿರುವ ಪತಿಯನ್ನು ನೆನೆದ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ನೆನೆಪಿಸಿಕೊಂಡು ಥೈಲ್ಯಾಂಡ್ ಟ್ರಿಪ್ ಮಾಡಿದ ಮುದ್ದಾದ ಫೊಟೊಗಳನ್ನು ಶೇರ್ ಮಾಡಿದ್ದಾರೆ. Thailand through my lens🇹🇭 ಎಂದು ಕ್ಯಾಪ್ಶನ್ ಕೊಡಿದ್ದಾರೆ.
37
ಡೆವಿಲ್ ಶೂಟಿಂಗ್
ತಿಂಗಳ ಹಿಂದೆ ಥೈಲ್ಯಾಂಡಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ನಡೆದಿತ್ತು. ಅಲ್ಲಿ ಶೂಟಿಂಗ್ ತಂಡದ ಜೊತೆ, ಪತಿ ಜೊತೆ ತಾವೂ ಕೂಡ ತೆರಳಿದ್ದರು ದರ್ಶನ್ ಪತ್ನಿ. ಇದೀಗ ಗಂಡ ಜೈಲಲ್ಲಿರುವ ಹೊತ್ತಿಗೆ ಗಂಡನನ್ನು ನೆನೆದು ಫೋಟೊ ಶೇರ್ ಮಾಡುತ್ತಿದ್ದಾರೆ.
ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕೈಲು ಸೇರಿದ್ದರು. ಬೇಲ್ ಮೇಲೆ ಹೊರ ಬಂದಿದ್ದ ನಟ, ಮತ್ತೆ ಕಳೆದ ತಿಂಗಳು ಜೈಲು ಸೇರಿದ್ದರು.
57
ಟೆಂಪಲ್ ರನ್ ಟು ಸೋಶಿಯಲ್ ಲೈಫ್
ದರ್ಶನ್ ಜೈಲು ಸೇರಿದ ಆರಂಭದಲ್ಲಿ ವಿಜಯಲಕ್ಷ್ಮೀ ಕಾಮಾಕ್ಯಾ ಮಂದಿರದಿಂದ ಹಿಡಿದು, ಕೇರಳದ ದೇಗುಲದವರೆಗೂ ಹಲವು ದೇಗುಲಗಳಿಗೆ ಭೇಟಿ ಕೊಟ್ಟು, ಪೂಜೆ, ಹೋಮ, ಹವನ ಮಾಡಿಸಿದ್ದರು. ಆದರೆ ಎರಡನೆ ಬಾರಿ ಜೈಲು ಪಾಲಾದಾಗ, ದೇಗುಲಗಳನ್ನು ಬಿಟ್ಟು ಸೋಶಿಯಲ್ ಲೈಫ್ ಬಗ್ಗೆ ಹೆಚ್ಚು ಪ್ರಾನುಖ್ಯತೆ ತೋರುತ್ತಿದ್ದಾರೆ.
67
ಅಭಿಮಾನಿಗಳ ಹಾರೈಕೆ
ವಿಜಯಲಕ್ಷ್ಮೀ ಹಂಚಿಕೊಂಡಿರುವ ಫೋಟೊ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ಆದಷ್ಟು ಬೇಗ ಇದೇ ತರ ಖುಷಿಯಾಗಿರೋ ಸಮಯ ಬರಲಿ, ಈ ಜೋಡಿ ಮೇಲೆ ಯಾರ ಕೆಟ್ಟ ಕಣ್ಣು ಬಿಳದೆ ಇರಲಿ! ನಮ್ಮ ಯಜಮಾನರು ಆದಷ್ಟು ಬೇಗ ಆರೋಪ ಮುಕ್ತವಾಗಿ ಆಚೆ ಬರಲಿ. ನೀವು ಇಬ್ಬರು ನಗು ನಗುತ ನೂರು ಕಾಲ ಜೊತೆ ಇರುವುದೇ ನಮಗೆ ಅಂದರೆ ಅಭಿಮಾನಿಗಳ ಆಸೆ ಎಂದು ಹೇಳಿದ್ದಾರೆ ಜನ.
77
ಲೈಫ್ ಎಂಜಾಯ್ ಮಾಡ್ತಿದ್ದಾರೆ ವಿಜಯಲಕ್ಷ್ಮಿ
ಗಂಡನ ಜೈಲುವಾಸದಿಂದ ಒಂದು ಸಲ ಸೋಶಿಯಲ್ ಮೀಡಿಯಾವನ್ನೆ ಡಿಲಿಟ್ ಮಾಡಿದ್ದ ವಿಜಯಲಕ್ಷ್ಮೀ ಇದೀಗ ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿರುವ ಫೋಟೊಗಳು, ದರ್ಶನ್ ಜೊತೆಗಿನ ಹಳೆಯ ಫೋಟೊಗಳು ಹಾಗೂ ಇತ್ತೀಚಿಗೆ ದಿನಕರ್ ತೂಗುದೀಪ ಬರ್ತ್ ಡೇ ಫೋಟೊಗಳನ್ನು ಹಂಚಿಕೊಂಡಿದ್ದರು. ಒಟ್ಟಲ್ಲಿ ಹೇಳೋದಾದರೆ, ವಿಜಯಲಕ್ಷ್ಮಿ ಸದ್ಯ ಜೀವನ ಎಂಜಾಯ್ ಮಾಡ್ತಿದ್ದಾರೆ.