ಅಯ್ಯೋ ದೇವ್ರೆ.....ವಿಜಯಲಕ್ಷ್ಮಿ ಧರಿಸಿರುವ ಈ ಸೀರೆ ಬೆಲೆಗೆ ಒಂದು ಮನೆ ಲೀಸ್‌ಗೆ ಹಾಕೋಬೋದಿತ್ತು ನೋಡಿ!

Published : Feb 21, 2025, 11:32 AM ISTUpdated : Feb 21, 2025, 11:34 AM IST

ಅತ್ತಿಗೆ ಎಷ್ಟು ದುಬಾರಿ ಜೀವನ ನಡೆಸುತ್ತಿದ್ದಾರೆ ಅನ್ನೋದನ್ನು ಕೇಳಿ ಅಭಿಮಾನಿಗಳು ಫುಲ್ ಶಾಕ್. ಈ ಸೀರೆಯಲ್ಲಿ ಅಂತ ಸ್ಪೆಷಲ್ ಏನಿದೆ?

PREV
16
ಅಯ್ಯೋ ದೇವ್ರೆ.....ವಿಜಯಲಕ್ಷ್ಮಿ ಧರಿಸಿರುವ ಈ ಸೀರೆ ಬೆಲೆಗೆ ಒಂದು ಮನೆ ಲೀಸ್‌ಗೆ ಹಾಕೋಬೋದಿತ್ತು ನೋಡಿ!

ಕನ್ನಡದ ನಟ ದರ್ಶನ್ ಮಾತ್ರವಲ್ಲದೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್‌ ಕೂಡ ಕರ್ನಾಟಕದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹೆಸರಿನಲ್ಲಿ ಫ್ಯಾನ್‌ ಪೇಜ್‌ಗಳು ಕೂಡ ತುಂಬಾ ಇದೆ.

26

ಉದ್ಯಮಿ ಆಗಿರುವ ವಿಜಯಲಕ್ಷ್ಮಿ ಸಿಕ್ಕಾಪಟ್ಟೆ ಸ್ಟೈಲಿಷ್. ಟ್ರೆಂಡ್‌ನಲ್ಲಿ ಇರುವ ಯಾವುದೇ ಡಿಸೈನರ್ ಹಾಗೂ ಡ್ರೆಸ್‌ಗಳಿದ್ದರೂ ಬೆಲೆ ಬಗ್ಗೆ ಚಿಂತಿಸದೆ ಖರೀದಿಸುತ್ತಾರೆ. 

36

ಕೆಲವು ದಿನಗಳ ಹಿಂದೆ ನಟಿ ರಕ್ಷಿತಾ ಸಹೋದರ ರಾಣಾ ಮದುವೆ ಅದ್ಧೂರಿಯಾಗಿ ನಡೆದಿದೆ. ಆ ಮದುವೆಯಲ್ಲಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 

46

ಈ ಮದುವೆ ವಿಜಯಲಕ್ಷ್ಮಿ ನೀಲಿ ಬಣ್ಣದ ಸಿಲ್ಕ್‌ ಝರಿ ಇರುವ ಎಂಬ್ರಾಯ್ಡರಿ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ಸಂಪೂರ್ಣವಾಗಿ ಡಿಸೈನ್ ಮಾಡಿರುವುದು ಜಯಂತಿ ರೆಡ್ಡಿ ಲೇಬಲ್‌ ಎಂಬುವವರು.

56

ಈ ನೀಲಿ ಬಣ್ಣದ ಸೀರೆಯು 1,68,900 ರೂಪಾಯಿಗಳು. ಸೀರೆ ಬೆಲೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅತ್ತಿಗೆ ಈ ಹಣದಲ್ಲಿ ನಾನು ಸಿಂಗಲ್ ಬೆಡ್‌ರೂಮ್‌ ಮನೆ ಲೀಸ್‌ಗೆ ಹಾಕೋಬೋದು ಎಂದು ಕಾಮೆಂಟ್ ಮಾಡಿದ್ದಾರೆ ಫ್ಯಾನ್ಸ್. 

66

ವಿಜಯಲಕ್ಷ್ಮಿ ಧರಿಸುವುದು ಡಿಸೈನರ್ ಬಟ್ಟೆಗಳೇ ಆಗಿರುವ ಕಾರಣ 'ವಿಜಯಲಕ್ಷ್ಮಿ ಕ್ಲಾಸೆಟ್‌' ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್‌ ಓಪನ್ ಮಾಡಲಾಗಿದೆ. ಅದರಲ್ಲಿ ಪ್ರತಿ ಬಟ್ಟೆಯ ಬೆಲೆಗಳನ್ನು ರಿವೀಲ್ ಮಾಡಿದ್ದಾರೆ.

Read more Photos on
click me!

Recommended Stories