ಒಂದೊಳ್ಳೆ ಕತೆ ಹುಡುಕಿ ಮಗನ ‘ವಿಷ್ಣು ಪ್ರಿಯ’ ಸಿನಿಮಾ ಮಾಡಿದ್ದೇನೆ: ನಿರ್ಮಾಪಕ ಕೆ.ಮಂಜು

Published : Feb 20, 2025, 05:09 PM ISTUpdated : Feb 20, 2025, 05:14 PM IST

ಒಳ್ಳೆಯ ಕತೆ ಹುಡುಕುತ್ತಿದ್ದೆ. ಆ ಬಗ್ಗೆ ಪ್ರಕಟಣೆಯನ್ನೂ ಕೊಟ್ಟೆ. ಬಹಳಷ್ಟು ಕತೆಗಳು ಬಂದವು. ಸಿಂಧುಶ್ರೀ ಬರೆದ ಕತೆ ಇಷ್ಟವಾಯಿತು. ಒಂದೊಳ್ಳೆ ಕತೆ ಹುಡುಕಿ ಈ ಸಿನಿಮಾ ಮಾಡಿದ್ದೇನೆ. ಎಲ್ಲರ ಬೆಂಬಲ ಬೇಕು ಹೀಗೆ ಹೇಳಿದ್ದು ನಿರ್ಮಾಪಕ ಕೆ.ಮಂಜು. 

PREV
15
ಒಂದೊಳ್ಳೆ ಕತೆ ಹುಡುಕಿ ಮಗನ ‘ವಿಷ್ಣು ಪ್ರಿಯ’ ಸಿನಿಮಾ ಮಾಡಿದ್ದೇನೆ: ನಿರ್ಮಾಪಕ ಕೆ.ಮಂಜು

‘ನನ್ನ ಮಗನ ಮೂರನೇ ಚಿತ್ರ ಕಾದಂಬರಿ ಚಿತ್ರ ಮಾಡಬೇಕೆಂಬ ಆಸೆ ಇತ್ತು. ಒಳ್ಳೆಯ ಕತೆ ಹುಡುಕುತ್ತಿದ್ದೆ. ಆ ಬಗ್ಗೆ ಪ್ರಕಟಣೆಯನ್ನೂ ಕೊಟ್ಟೆ. ಬಹಳಷ್ಟು ಕತೆಗಳು ಬಂದವು. ಸಿಂಧುಶ್ರೀ ಬರೆದ ಕತೆ ಇಷ್ಟವಾಯಿತು. ಒಂದೊಳ್ಳೆ ಕತೆ ಹುಡುಕಿ ಈ ಸಿನಿಮಾ ಮಾಡಿದ್ದೇನೆ. ಎಲ್ಲರ ಬೆಂಬಲ ಬೇಕು’.

25

- ಹೀಗೆ ಹೇಳಿದ್ದು ನಿರ್ಮಾಪಕ ಕೆ.ಮಂಜು. ಅವರ ಪುತ್ರ ಶ್ರೇಯಸ್‌ ಮಂಜು ಮತ್ತು ಪ್ರಿಯಾ ವಾರಿಯರ್ ನಟನೆಯ, ವಿ.ಕೆ. ಪ್ರಕಾಶ್ ನಿರ್ದೇಶನದ ‘ವಿಷ್ಣು ಪ್ರಿಯ’ ಸಿನಿಮಾ ಫೆ.21ರಂದು ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಕಥೆಗಾರ್ತಿ ಸಿಂಧುಶ್ರೀ ಕೂಡ ಇದ್ದರು.
 

35

ಶ್ರೇಯಸ್ ಮಂಜು, ‘ಈ ಸಿನಿಮಾದಲ್ಲಿ 90ರ ದಶಕದ ಫೀಲ್ ಕಟ್ಟಿಕೊಡಲು ಪ್ರಯತ್ನ ಮಾಡಿದ್ದೇವೆ. ನನ್ನ ತಂದೆ ಈ ಸಿನಿಮಾವನ್ನು ಫ್ಯಾಷನ್‌ಗಾಗಿ ಮಾಡುತ್ತಿದ್ದೇನೆ ಎಂದಿದ್ದರು. ಅದರಂತೆ ಇದು ಕಂಟೆಂಟ್ ಇರುವ ಸಿನಿಮಾ’ ಎಂದರು.

45

ಗೆಲುವು ಸಿಗುವುದು ಸರಸ್ವತಿಗೆ ಮಾತ್ರ ಅಂತ ನಂಬಿದ್ದೇನೆ. ಅದಕ್ಕಾಗಿ ಶ್ರಮ ಪಡುತ್ತೇನೆ. ಸಿನಿಮಾಗೆ ಬಿಟ್ರೆ ಬೇರೆ ಯಾವುದಕ್ಕೂ ತಲೆ ತಗ್ಗಿಸುವುದಿಲ್ಲ. ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಮಾಡಬೇಕು ಅಂತಲೇ ನಾನು ಖ್ಯಾತ ನಿರ್ದೇಶಕ ವಿಕೆ ಪ್ರಕಾಶ್‌ರನ್ನು ಭೇಟಿ ಮಾಡಿದ್ದೆ. ಅವರು ವರ್ಕ್ ಶಾಪ್ ಮಾಡಿ ಉತ್ತಮವಾಗಿ ನಟನೆ ತೆಗೆಸಿದರು. ಇದು ನಟನೆ ಮೇಲೆ ಗಮನ ಹರಿಸಿರುವ ಸುಂದರ ಸಿನಿಮಾ’ ಎಂದರು.

55

ಪ್ರಿಯಾ ವಾರಿಯರ್, ‘ನನಗೆ ಕನ್ನಡ ಅರ್ಥ ಆಗುತ್ತದೆ. ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ನಾನು ಮಾತನಾಡುತ್ತಿದ್ದೆ ಕೂಡ. ಆದರೆ ಈಗ ಟಚ್‌ ಬಿಟ್ಟು ಹೋಗಿದೆ. ಇನ್ನೊಮ್ಮೆ ಬಂದಾಗ ಕನ್ನಡ ಮಾತಾಡುತ್ತೇನೆ ಅಂದಿದ್ದೆ. ಆಗಿಲ್ಲ. ಮುಂದಿನ ಸಲ ಖಂಡಿತಾ ಸಿದ್ಧವಾಗಿ ಬರುತ್ತೇನೆ’ ಎಂದರು.
 

Read more Photos on
click me!

Recommended Stories