ತೆರೆಗೆ ಸಜ್ಜಾಗುತ್ತಿದೆ ಜಗ್ಗೇಶ್ 'ತೋತಾಪುರಿ'!

First Published | Mar 21, 2022, 2:51 PM IST

ಶೀಘ್ರದಲ್ಲಿ ಸಿನಿ ರಸಿಕರನ್ನು ಮನೋರಂಜಿಸಲು ರೆಡಿಯಾಗುತ್ತಿದೆ ತೋತಾಪುರಿ 1 ಸಿನಿಮಾ. ಮೇರಿ ಜಾನ್ ಹಾಡಿಗೆ 125 ಮಿಲಿಯನ್ ವೀಕ್ಷಣೆ. 
 

ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಕಾಂಬಿನೇಶನ್‌ನ ‘ತೋತಾಪುರಿ 1’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಚಿತ್ರದ ನಿರ್ಮಾಪಕ ಕೆ ಎ ಸುರೇಶ್ ಅವರು ತಯಾರಿ ಮಾಡಿ ಕೊಳ್ಳುತ್ತಿದ್ದಾರೆ. 

ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಮೇರಿ ಜಾನ್ ಹಾಡು 125 ಮಿಲಿಯನ್ ದಾಟಿದೆ. ಜಗ್ಗೇಶ್ ಅವರ ನಟನೆಯ ಚಿತ್ರಗಳ ಹಾಡು ಈ ಮಟ್ಟಕ್ಕೆ ಯಶಸ್ಸು ಕಂಡಿರುವುದು ಇದೇ ಮೊದಲು. 

Tap to resize

ಹೀಗೆ ಹಾಡುಗಳ ಹಿಟ್‌ನ ಉತ್ಸಾಹದಲ್ಲಿರುವ ಚಿತ್ರವು ಬಿಡುಗಡೆಯ ಸಂಭ್ರಮಕ್ಕೂ ತಯಾರಾಗುತ್ತಿದೆ. ನಿರ್ದೆಶಕ ವಿಜಯಪ್ರಸಾದ್ ಅವರೇ ಮೇರಿ ಜಾನ್ ಹಾಡಿಗೆ ಸಾಹಿತ್ಯ ನೀಡಿದ್ದು, ಅನೂಪ್ ಸೀಳಿನ್ ಸಂಗಿತ ಸಂಯೋಜಿಸಿದ್ದಾರೆ.


‘ಇತ್ತಿಚೆಗೆ ಬಿಡುಗಡೆಯಾದ ‘ಬಾಗ್ಲು ತೆಗಿ ಮೆರಿ ಜಾನ್’ ಹಾಡು 125 ಮಿಲಿಯನ್‌ಗೂ ಅಧಿಕ ಹಿಟ್‌ಸ್ ದಾಖಲಿಸಿ ಮುನ್ನುಗ್ಗುತ್ತಿದೆ. ಮೊನಿಫ್ಲಿಕ್‌ಸ್ ಆಡಿಯೋಸ್ ಯೂಟ್ಯೂಬ್ ಚಾನಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಈ ಹಾಡಿಗೆ ಪ್ರಸ್ತುತ ಈ ಚಾನಲ್‌ವೊಂದರಲ್ಲೆ 16 ಮಿಲಿಯನ್‌ಗೂ ಅಧಿಕ ಹಿಟ್‌ಸ್ ದಾಖಲಾಗಿದೆ. 

ಇನ್ನೂ, ಸಾಮಾಜಿಕ ಜಾಲತಾಣದಲ್ಲಿ 85 ಮಿಲಿಯನ್‌ಗೂ ಅಧಿಕ ಹಿಟ್‌ಸ್ ದಾಖಲಾಗಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ಈ ಹಾಡು ಇಷ್ಟವಾಗಿರುವುದು ಈ ಚಿತ್ರದ ನಿರ್ಮಾಪಕನಾಗಿ ನನಗೆ ಹೆಮ್ಮೆ ಅನಿಸುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ಕೆ ಎ ಸುರೇಶ್   

ಈ ಚಿತ್ರದಲ್ಲಿ ಬೇರೆ ಥರದ ಜರ್ನಿ ಇದೆ. ಇಡೀ ಸಿನಿಮಾ ಬೇರೆಯೇ ಮಜಲಿನಲ್ಲಿದೆ. ಕುಟುಂಬದವರೆಲ್ಲ ಬಂದು ನೋಡಬಹುದು. ಆದರೆ ನನ್ನ ಚಿತ್ರಗಳಿಗೆ ಯಾವಾಗಲೂ ‘ಎ’ ಸರ್ಟಿಫಿಕೇಟೇ ಸಿಗೋದು. ನಿರ್ಮಾಪಕರಿಗೆ ನಾನೇ ಹೇಳಿರ್ತೀನಿ, ‘ಸಾರ್‌, ಎ ಸರ್ಟಿಫಿಕೇಟ್‌ ನಾವೇ ತಗೊಂಡು ಹೋಗೋಣ, ಅವರು ಸೀಲು ಸೈನ್‌ ಹಾಕಿಕೊಟ್ಟರೆ ಸಾಕು’ ಅಂತ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ತೋತಾಪುರಿ ಒಂದು ಭಾವೈಕ್ಯತೆಯ ಸಿನಿಮಾ. ಅದನ್ನು ನನ್ನ ಸ್ಟೈಲಿನಲ್ಲಿ ಪ್ರಸ್ತುತ ಪಡಿಸಿದ್ದೀನಿ'ಎಂದಿದ್ದಾರೆ ನಿರ್ದೇಶಕರು

ಯಾವ ಧೈರ್ಯದ ಮೇಲೆ ತೋತಾಪುರಿ ರಿಲೀಸ್‌ಗೂ ಮೊದಲೇ ಭಾಗ 2 ನ್ನೂ ಮಾಡಿದ್ರಿ?
ಈ ಐಡಿಯಾ ಕೊಟ್ಟಿದ್ದು ನಿರ್ಮಾಪಕರು. ಕತೆ ಬಹಳ ಗಾಢವಾಗಿದೆ, ಜೊತೆಗೆ ವಿಸ್ತಾರವೂ ಇದೆ. ಗಾಢ ಕಥೆಯನ್ನು ಕಡಿಮೆ ಅವಧಿಗೆ ಕಟ್‌ ಮಾಡಿ ಕೊಟ್ಟರೆ ಜನರಿಗೆ ಹೇರಿಕೆ ಆಗುತ್ತೆ. ಹಾಗೆ ಎರಡು ಭಾಗವಾಗಿ ಮಾಡೋಣ ಅಂದರು. ನನಗೆ ಕತೆ ಬಗ್ಗೆ ಆತ್ಮವಿಶ್ವಾಸ ಇತ್ತು. ನಿರ್ಮಾಪಕರ ಮಾತಿಗೆ ಜೈ ಅಂದೆ.

ನಿಮ್‌ ಪ್ರಕಾರ ತೋತಾಪುರಿ ಯಶಸ್ವಿ ಆಗೋದಕ್ಕೆ 5 ಕಾರಣಗಳು?
ಕತೆ, ವಸ್ತು ವಿಷಯ, ನಿರೂಪಣೆ, ಕನೆಕ್ಟ್ ಆಗುವ ಪಾತ್ರಗಳು, ಸಂಗೀತ ಹಾಗೂ ಇವೆಲ್ಲದರ ಫೈನಲ್‌ ಫಲಿತಾಂಶ.

Latest Videos

click me!