ಸ್ಯಾಂಡಲ್ವುಡ್ ನಟ ಶ್ರೀನಗರ ಕಿಟ್ಟಿ ಇದೇ ಮೊದಲ ಬಾರಿಗೆ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಈ ನಟನ ಮುಂದಿನ ಸಿನಿಮಾಗೆ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ.
25
ಶ್ರೀನಗರ ಕಿಟ್ಟಿ ಜೋಗತಿ ಬಸಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ‘ವೇಷಗಳು’ಸಿನಿಮಾದ ಘೋಷಣೆಯಾಗಿದೆ. ಈ ಚಿತ್ರದ ಮೂಲ ಕಥೆ ಪತ್ರಕರ್ತ ರವಿ ಬೆಳಗೆರೆ ಅವರದು.
35
ಇದರಲ್ಲಿ ಶ್ರೀನಗರ ಕಿಟ್ಟಿ ಬಸಮ್ಮ ಹಾಗೂ ಅರ್ಧನಾರೀಶ್ವರಿ ಪಾತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಅವರ ಪಾತ್ರ ಪರಿಚಯದ ಟೀಸರ್ ಬಿಡುಗಡೆಯಾಗಿದೆ. ‘ವೇಷಗಳು’ ಚಿತ್ರಕ್ಕೆ ಕಿಶನ್ ರಾವ್ ದಳವಿ ನಿರ್ದೇಶನ, ಗ್ರೀನ್ ಟ್ರೀ ಸ್ಟುಡಿಯೋಸ್ ನಿರ್ಮಾಣ ಇದೆ.
ಈ ಚಿತ್ರವನ್ನ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ಅರ್ಪಿಸುತ್ತಿದ್ದು, ವಿದ್ವಾನ್ ಕೌಶಿಕ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸೌಜನ್ಯ ದತ್ತರಾಜು ಹಾಗೂ ರಾಜ್ ಗುರು ವೇಷಗಳು ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ.
55
ಇತ್ತೀಚೆಗೆ ನಾಗಶೇಖರ್ ನಿರ್ದೇಶನದಲ್ಲಿ ನಟ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ ʻಸಂಜು ವೆಡ್ಸ್ ಗೀತಾ 2’ ಸಿನಿಮಾ ತೆರೆಕಂಡಿತು. ಹಾಗೂ ಮಾದೇವ ಚಿತ್ರ 25 ದಿನಗಳ ಪೂರೈಸಿದೆ.