Rishab Shetty Birthday: ಪತ್ನಿ, ಮಕ್ಕಳ ಜೊತೆ ಜನ್ಮದಿನ ಆಚರಿಸಿಕೊಂಡ ರಿಷಬ್‌ ಶೆಟ್ಟಿ ಫೋಟೋಗಳಿವು!

Published : Jul 09, 2025, 03:51 PM ISTUpdated : Jul 09, 2025, 04:54 PM IST

ನಟ ರಿಷಬ್ ಶೆಟ್ಟಿ ಅವರು ಜನ್ಮದಿನದಂದು ಆನೆಗುಡ್ಡೆಯಲ್ಲಿರುವ ಶ್ರೀವಿನಾಯಕ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳ ಜೊತೆಗೂ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

PREV
19

ಆನೆಗುಡ್ಡೆ ದೇವಸ್ಥಾನದಲ್ಲಿ ಅಭಿಮಾನಿಹಳು 108 ತೆಂಗಿನಕಾಯಿ ಒಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಆ ಬಳಿಕ ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಅಗತ್ಯ ವಸ್ತುಗಳನ್ನು ನೀಡಿ ಅನ್ನದಾನ ಮಾಡಿದ್ದಾರೆ.

29

ಅಷ್ಟೇ ಅಲ್ಲದೆ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಪದಾರ್ಥಗಳನ್ನು ನೀಡಿದ್ದಾರೆ.

39

ಇನ್ನು ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ʼಕಾಂತಾರʼ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾರ್ಥಕ ಎನ್ನುವ ರೀತಿಯಲ್ಲಿ ಆಚರಿಸಿದ್ದಾರೆ.

49

ʼಕಾಂತಾರʼ ಸಿನಿಮಾದಂತಹ ಸೂಪರ್ ಹಿಟ್ ಸಿನಿಮಾ ಮೂಲಕ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಹಿಟ್‌ ಕೊಟ್ಟಿರುವ ರಿಷಬ್ ಶೆಟ್ಟಿ ಇನ್ನೊಂದು ಸಿನಿಮಾ ನೀಡಲು ರೆಡಿ ಆಗಿದ್ದಾರೆ.

59

ಸಿನಿಮಾ ನಿರ್ದೇಶನ, ನಟನೆಯ ʼಕಾಂತಾರ ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2 ರಂದು ತೆರೆ ಕಾಣಲಿದೆ. ಹೊಂಬಾಳೆ ಫಿಲಂಸ್ ಈ ಸಿನಿಮಾಕ್ಕೆ ಹಣ ಹೂಡಲಿದೆ.

69

ನಟ ರಿಷಬ್‌ ಶೆಟ್ಟಿ ಅವರು ʼಕಾಂತಾರʼ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಅವರು ಕುಟುಂಬಕ್ಕೂ ಕೂಡ ಸಮಯ ಕೊಡುತ್ತಾರೆ. 

79

ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಮಕ್ಕಳಾದ ರಾಧ್ಯಾ, ರಣವಿಥ್‌ ಶೆಟ್ಟಿಗೆ ಹೆಚ್ಚಿನ ಸಮಯ ಕೊಡುತ್ತಾರೆ. 

89

ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕೂಡ ಚಿತ್ರರಂಗದಲ್ಲಿ ಫ್ಯಾಷನ್ ಡಿಸೈನರ್‌‌ ಆಗಿ ಕೆಲಸ ಮಾಡುತ್ತಿದ್ದಾರೆ.  

99

ಅಂದಹಾಗೆ ʼಕಾಂತಾರʼ ಸಿನಿಮಾಕ್ಕೆ ಪ್ರಗತಿ ಶೆಟ್ಟಿ ಅವರೇ ಫ್ಯಾಷನ್‌ ಡಿಸೈನರ್‌ ಆಗಿ ಕೆಲಸ ಮಾಡಿದ್ದರು. ಇವರಿಬ್ಬರದ್ದು ಲವ್‌ ಮ್ಯಾರೇಜ್‌ ಆಗಿತ್ತು. 

Read more Photos on
click me!

Recommended Stories