ಬೇಕೆಂದೇ ತಪ್ಪು ಹೆಸರು ತೋರಿಸಿದ ಮಾಧ್ಯಮ; ಕ್ಲಾಸ್ ತೆಗೆದುಕೊಂಡ 'ಮಿಲನಾ' ನಟಿ ಪಾರ್ವತಿ

Published : Mar 07, 2023, 10:27 AM ISTUpdated : Mar 07, 2023, 10:38 AM IST

ಬಹುಭಾಷಾ ನಟಿ ಪಾರ್ವತಿ ತಿರುವೋತ್ತು ಹೆಸರನ್ನು ಕೆಲವು ಮಾಧ್ಯಮಗಳು ಬೇಕೆಂದು ತಪ್ಪಾಗಿ ತೋರಿಸುತ್ತಿರುವುದಕ್ಕೆ ಗರಂ ಆಗಿದ್ದಾರೆ. ಟ್ರೋಲ್‌ಗಳ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ.

PREV
19
ಬೇಕೆಂದೇ ತಪ್ಪು ಹೆಸರು ತೋರಿಸಿದ ಮಾಧ್ಯಮ; ಕ್ಲಾಸ್ ತೆಗೆದುಕೊಂಡ 'ಮಿಲನಾ' ನಟಿ ಪಾರ್ವತಿ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಮಿಲನಾ ಮತ್ತು ಪೃಥ್ವಿ ಸಿನಿಮಾದಲ್ಲಿ ಅಭಿನಯಿಸಿರುವ ಪಾರ್ವತಿ ತಿರುವೋತ್ತು ಸೋಷಿಯಲ್ ಮೀಡಿಯಾ, ಪ್ರೀತಿ ಮತ್ತು ಹೆಸರು ಬದಲಾಯಿಸಿರುವುದರ ಬಗ್ಗೆ ಮಾತನಾಡಿದ್ದಾರೆ.

29

'ನನ್ನ ಪ್ರಕಾರ ಯಶಸ್ಸು ಅಂದ್ರೆ ಸಿನಿಮಾ ಹಿಟ್ ಆಗುವುದು ಬಾಕ್ಸ್ ಆಫೀಸ್ ಕೆಲಕ್ಷನ್ ಮಾಡುವುದಲ್ಲ. ನಾನು ಅದ್ಭುತವಾಗಿ ನಟಿಸಿದರೆ ಸಿನಿಮಾ ಹಿಟ್ ಎಂದುಕೊಳ್ಳುವೆ' ಎಂದು ಯಶಸ್ಸಿನ ಬಗ್ಗೆ ಪಾವರ್ತಿ ಹೇಳಿದ್ದಾರೆ.

39

'ನಾನು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿರುವೆ. ಆರಂಭದಲ್ಲಿ ಸೋಷಿಯಲ್ ಮೀಡಿಯಾ ತುಂಬಾನೇ ಟಾಕ್ಸಿಕ್ ನೆಮ್ಮದಿ ಹಾಳು ಮಾಡುತ್ತದೆ ಅಂದು ಕೊಂಡಿದ್ದೆ. ಆದರೆ ಪ್ರಪಂಚದಲ್ಲಿ ಒಳ್ಳೆ ವ್ಯಕ್ತಿಗಳಿದ್ದಾರೆ ಎಂದು ಗೊತ್ತಾಗಿತ್ತು' ಎಂದು ಪಾರ್ವತಿ 7 ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

49

ಪಾರ್ವತಿ ತುಂಬಾನೇ ಬೋಲ್ಡ್‌ ನಟಿ. ಚಿತ್ರಕಥೆಯಲ್ಲಿ ತಮ್ಮ  ಪಾತ್ರ ಜನರಿಗೆ ಏನೆಂದು ಸಂದೇಶ ಸಾರುತ್ತೆ ಎಂಬುದರ ಬಗ್ಗೆ ಚಿಂತಿಸುತ್ತಾರೆ. ಆದಷ್ಟು ಮೇಕಪ್ ಹೆಚ್ಚಿಗೆ ಬಳಸದೆ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ. 

59

ಪುನೀತ್ ರಾಜ್‌ಕುಮಾರ್ ಜೊತೆ ಮಿಲನಾ ಸಿನಿಮಾ ಮತ್ತು ಪೃಥ್ವಿ ಸಿನಿಮಾದಲ್ಲಿ ಪಾರ್ವತಿ ಅಭಿನಯಿಸಿದ್ದಾರೆ. ಮಲಯಾಳಂ, ತಮಿಳು, ತಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಪಾರ್ವತಿ ನಟಿಸಿದ್ದಾರೆ. 

69

' ಹಲವಾರು ಬಾರಿ ನನ್ನನ್ನು ಟ್ರೋಲ್ ಮಾಡಿದ್ದರು ಆದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಹಿಂದೆ ನನ್ನನ್ನು ಕೆಟ್ಟದಾಗಿ ಟ್ರೋಲ್ ಮಾಡಿದ ವ್ಯಕ್ತಿಯನ್ನು ಎಳೆದು ತಪ್ಪನ್ನು ಅರ್ಥ ಮಾಡಿಸಿರುವೆ.ಜೀವನಕ್ಕೆ ಲವ್ ಒಂದು necessity. ಪ್ರತಿಯೊಬ್ಬರೂ ಒಮ್ಮೆಯಾದರೂ ಜೀವನದಲ್ಲಿ ಪ್ರೀತಿಸಿರುತ್ತಾರೆ' 

79

'ನಾನು ಹೆಚ್ಚಿಗೆ ಫೆಮಿನಿಸ್ಟ್‌ ಕ್ಯಾರೆಕ್ಟರ್‌ಗಳ್ನು ಆಯ್ಕೆ ಮಾಡಿಕೊಳ್ಳುತ್ತೀನಿ ಎಂದುಕೊಂಡಿದ್ದಾರೆ. ನಿಜ ಹೇಳಬೇಕು ಅಂದ್ರೆ ನನ್ನ ವ್ಯಕ್ತಿತ್ವಕ್ಕಿಂತ ಸ್ಟ್ರಾಂಗ್ ಆಗಿರುವ ಪಾತ್ರವನ್ನು ನಾನು ಅಯ್ಕೆ ಮಾಡಿಕೊಳ್ಳುವುದು. ಮಹಿಳೆಯರು ಫೆಮಿನಿಸ್ಟ್ ಆಗಿರಬೇಕು ಹಾಗೆ ಹೀಗೆ ಎಂದು ಬಿಂಬಿಸುವುದು ನನಗೆ ಇಷ್ಟವಿಲ್ಲ.'

89

'ಕ್ಯಾರೆಕ್ಟರ್‌ ಚೆನ್ನಾಗಿದ್ದರೆ ಖಂಡಿತ ಸಿನಿಮಾ ಇಷ್ಟ ಪಡುತ್ತಾರೆ. ಒಂದೇ ರೀತಿ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟವಿಲ್ಲ. ಪ್ರತಿಯೊಂದು ಪಾತ್ರವನ್ನು ನಾನು ಒಪ್ಪಿಕೊಳ್ಳುವುದಿಲ್ಲ, ಕಥೆ ಇಷ್ಟವಾಗುತ್ತದೆ ಆದರೆ ಪಾತ್ರ ಲಾಜಿಕ್‌ ಇರುವುದಿಲ್ಲ ಆದರೂ ಕಥೆಗೆ ಹೊಂದಿಕೆ ಆಗುತ್ತದೆ ಎಂದು ನಾನು ಸಿನಿಮಾ ಮಾಡುವೆ' 

99

'ನನ್ನ ಅಫೀಶಿಯಲ್ ಹೆಸರನ್ನು ಕೆಲವೊಂದು ಮೀಡಿಯಾಗು ಬಳಸುವುದಿಲ್ಲ ಬದಲಿಗೆ ಯಾವುದೋ ಯಾವುದೋ ಕ್ರಿಯೇಟ್ ಮಾಡುತ್ತಾರೆ. ನಾನು ಪರ್ವತಿ ಮೆನನ್ ಅಲ್ಲ ನನ್ನ ಹೆಸರನ್ನು ಹಾಗೆ ಬಳಸಬೇಡಿ. ನನ್ನ ನಿಜವಾದ ಹೆಸರು ಪಾರ್ವತಿ ಪಾರ್ವತಿ ತಿರುವೋತ್ತು ಎಂದು. ಗೌರವ ಕೊಡಿ'ಎಂದಿದ್ದಾರೆ ಪಾರ್ವತಿ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories