ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಅಂಬರೀಶ್ ರೊಮ್ಯಾಂಟಿಕ್ ಫೋಟೋ ವೈರಲ್

First Published | Mar 6, 2023, 3:18 PM IST

ಅವಿವಾ ಬಿದ್ದಪ್ಪ ಹುಟ್ಟುಹಬ್ಬಕ್ಕೆ ಸ್ಪೆಷಲ್ ಫೋಟೋ ಹಂಚಿಕೊಂಡ ಅಭಿ. ಅಣ್ಣಂಗೆ ಲವ್ ಆಗಿದೆ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು.... 

ಕನ್ನಡ ಚಿತ್ರರಂಗದ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಭಾವಿ ಪತ್ನಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

'ನಾನು ನಿನ್ನನ್ನು ಪಡೆದಿದ್ದೇನೆ, ಎಂದೆಂದಿಗೂ.  ಹ್ಯಾಪಿ ಬರ್ತಡೇ ಈ ವರ್ಷ ಬೆಸ್ಟ್‌ ವರ್ಷವಾಗಲಿ. ನಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕ್ಷಣವನ್ನು ಜೊತೆಗೆ ಅನುಭವಿಸೋಣ. ಲಿಟಲ್ ಕ್ಯೂಟಿ' ಎಂದು ಅಭಿಷಕ್ ಬರೆದುಕೊಂಡಿದ್ದಾರೆ.

Tap to resize

ಅವಿವಾ ಕೂಡ ಅಭಿಷೇಕ್ ಜೊತೆಗಿರುವ ಫೋಟೋ ಹಂಚಿಕೊಂಡು 'ನನ್ನ ಜೀವನದ ಬೆಸ್ಟ್‌ ಹುಟ್ಟುಹಬ್ಬವಿದು. ಯಾರೆಲ್ಲಾ ಸಮಯ ಕೊಟ್ಟು ನನಗೆ ವಿಶ್ ಮಾಡಿದ್ದೀರಿ ಖುಷಿ ಆಯ್ತು ಎಂದು ಬರೆದುಕೊಂಡಿದ್ದಾರೆ. 

ಅವಿವಾ ಪೋಸ್ಟ್‌ಗೆ ಅಭಿ 'ಖುಷಿಯಾಗಿರುವ ಲಿಟಲ್ ಪಪ್. ನೀನು ಸದಾ ಖುಷಿಯಾಗಿರಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಕಾಶ್ಮೀರದಲ್ಲಿ ಅವಿವಾ ಮತ್ತು ಅಭಿಷೇಕ್ ರೊಮ್ಯಾಂಟಿಕ್‌ ಅಗಿ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ ಅಭಿ ಕಿಸ್ ಮಾಡಿದ್ದಾರೆ.

ಡಿಸೆಂಬರ್ 11,2022ರಂದು ಅಭಿ ಮತ್ತು ಅವಿವಾ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಯನ್ನು 2023ರಲ್ಲಿ ಅದ್ಧೂರಿಯಾಗಿ ಆಗಲಿದ್ದಾರೆ. ದಿನಾಂಕ ನಿಗಧಿಯಾಗಿಲ್ಲ. 

ಅವಿವಾ ಬಿದ್ದಪ್ಪ ಫ್ಯಾಷನ್‌ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್‌ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ. ಪೊಲ್ಕಾ ಡಾಟ್ಸ್‌ ಇರುವ ಇಂಡಿಯನ್ ವೇರ್ ಸ್ವಿಮ್‌ ಸೂಟ್‌ ಲಾಂಚ್ ಮಾಡಿದ್ದಾರೆ. 

Latest Videos

click me!