ನಂಗೆ ಪ್ರತೀ ಸಲ ಎಲ್ಲರೂ ಹೊಗಳುತ್ತಾರೆ, ಆದರೆ ಪ್ರೇಕ್ಷಕರು: ಯುಐನಲ್ಲಿ ಇಷ್ಟೆಲ್ಲ ತೋರಿಸಿದ್ದಾರಾ ಉಪೇಂದ್ರ!

Published : Dec 20, 2024, 04:23 PM IST

ಒಳಗೆ ಹುಟ್ಟಿದ ಕತೆಗಳಲ್ಲಿ ನಾನು ಹುಡುಕುತ್ತಿರುವ ವಿಚಾರಗಳನ್ನು ಮಾತ್ರ ನಾನು ಹುಡುಕುತ್ತಿರುವುದಿಲ್ಲ. ಜೊತೆಗೆ ನೀವೂ ಹುಡುಕುತ್ತಾ ಇರುವುದನ್ನು ಹುಡುಕುತ್ತಿರುತ್ತೇನೆ. ಹಾಗಾಗಿ ಆ ಕತೆ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತದೆ.

PREV
17
ನಂಗೆ ಪ್ರತೀ ಸಲ ಎಲ್ಲರೂ ಹೊಗಳುತ್ತಾರೆ, ಆದರೆ ಪ್ರೇಕ್ಷಕರು: ಯುಐನಲ್ಲಿ ಇಷ್ಟೆಲ್ಲ ತೋರಿಸಿದ್ದಾರಾ ಉಪೇಂದ್ರ!

ನನ್ನ ಚಿತ್ರ ಜೀವನದಲ್ಲಿ ಮೊದಲು ನಿರ್ದೇಶನ ಮಾಡಿದ ‘ತರ್ಲೆ ನನ್ಮಗ’, ‘ಶ್’ ಮತ್ತು ‘ಓಂ’ ಹೊರಗಿನಿಂದ ಹುಟ್ಟಿದ ಕತೆಗಳು. ಆಮೇಲೆ ಹೊರಗಿನಿಂದ ಕತೆ ಸಿಗುತ್ತಿರಲಿಲ್ಲ. ಅದಕ್ಕೆ ನನ್ನೊಳಗೆ ಹುಡುಕಲು ಶುರು ಮಾಡಿದೆ. ಆಗ ಒಳಗಿನಿಂದ ಸಿಕ್ಕಿದ ಕತೆಗಳೇ ‘ಎ’, ‘ಉಪೇಂದ್ರ’, ‘ಉಪ್ಪಿ 2’ ಮತ್ತು ‘ಯುಐ’.- ಯುಐ ಚಿತ್ರದ ಪ್ರೀ ರಿಲೀಸ್ ಈವೆಂಟಲ್ಲಿ ಹೀಗೆ ಮಾತನಾಡುತ್ತಾ ಹೋದರು ಉಪೇಂದ್ರ. 

27

‘ಒಳಗೆ ಹುಟ್ಟಿದ ಕತೆಗಳಲ್ಲಿ ನಾನು ಹುಡುಕುತ್ತಿರುವ ವಿಚಾರಗಳನ್ನು ಮಾತ್ರ ನಾನು ಹುಡುಕುತ್ತಿರುವುದಿಲ್ಲ. ಜೊತೆಗೆ ನೀವೂ ಹುಡುಕುತ್ತಾ ಇರುವುದನ್ನು ಹುಡುಕುತ್ತಿರುತ್ತೇನೆ. ಹಾಗಾಗಿ ಆ ಕತೆ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತದೆ. ನನ್ನದೇ ಕತೆ ಅಲ್ವಾ ಅನ್ನಿಸುತ್ತದೆ. ನನ್ನ ಸಿನಿಮಾಗೆ ನಾನೇ ಏನೋ ಒಂದು ಹೆಸರಿಡಬಹುದು. 

37

ಆಗ ಅದೇ ಹೆಸರಾಗುತ್ತದೆ. ಅಲ್ಲಿಗೆ ಮುಗಿಯುತ್ತದೆ. ಆದರೆ ಹೆಸರಿನ ಜಾಗದಲ್ಲಿ ಸ್ಪೇಸ್ ಕೊಟ್ಟರೆ ನೀವು ನಿಮಗೆ ಬೇಕಾದ ಹೆಸರು ಇಟ್ಟುಕೊಳ್ಳಬಹುದು. ಯುಐ ಅಂತ ಹೆಸರಿಟ್ಟಾಗ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ಕೊಟ್ಟರು. ಪ್ರೇಕ್ಷಕರಲ್ಲಿ ಅಧ್ಭುತ ಪ್ರತಿಬೆ ಇದೆ. ಅವರು ಯಾವತ್ತೂ ಮೇಲೆ ಇರುತ್ತಾರೆ. ಹಾಗಾಗಿ ಅವರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ’ ಎಂದು ಉಪೇಂದ್ರ ಹೇಳಿದರು. 

47

ಇದೇ ವೇಳೆ ಅವರು, ‘ನಂಗೆ ಪ್ರತೀ ಸಲ ಎಲ್ಲರೂ ಹೊಗಳುತ್ತಾರೆ. ಯಾರು ಯಾವಾಗ ಹೊಗಳಿದಾಗಲೂ ನನಗೆ ಮುಜುಗರ ಆಗುತ್ತದೆ. ಆಗ ಅವರನ್ನು ಅವರೇ ಹೊಗಳುತ್ತಿದ್ದಾರೆ ಅಂದುಕೊಂಡು ಸುಮ್ಮನಾಗುತ್ತೇನೆ’ ಎಂದು ಹೇಳಿದರು. ಉಪೇಂದ್ರಗೆ ಶುಭಾಶಯ ಕೋರಲು ಬಂದಿದ್ದ ಡಾಲಿ ಧನಂಜಯ, ‘ಯುಐ ಪೋಸ್ಟರ್‌ ಬಂದಾಗ ಅದರಲ್ಲಿ ಆ್ಯಪಲ್‌, ಹಳೇ ಕಾಲದ ದೃಶ್ಯಗಳನ್ನು ನೋಡಿ ಹಳೇ ಕಾಲದ ಕತೆ ಹೇಳುತ್ತಿದ್ದಾರೆ ಅಂದುಕೊಂಡೆ. ಟ್ರೆಂಡಾಗತ್ತೆ ಅಂತ ಹಾಡು ಬಂದಾಗ ವರ್ತಮಾನದ ಕತೆ ಎಂದುಕೊಂಡೆ. 

57

ವಾರ್ನರ್ ನೋಡಿದರೆ ಭವಿಷ್ಯದ ಕತೆಯನ್ನು ಹೇಳಿದ್ದಾರೆ ಅಂತ ಗೊತ್ತಾಗತ್ತೆ. ಹಳೇ ಕಾಲದಿಂದ ಹಿಡಿದು ಭವಿಷ್ಯತ್ ಕಾಲದವರೆಗೆ ಎಲ್ಲಾ ಕತೆಯನ್ನು ಹೇಳಿದ್ದಾರೆ. ಉಪ್ಪಿ ಸರ್ ಸಿನಿಮಾ ಬಂದಾಗ ನಾವು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಬದಲಿಗೆ ನಾವೆಲ್ಲಾ ಒಂದೊಂದು ಕಲ್ಪನೆ ಮಾಡಿಕೊಂಡು ಹೋಗಿರುತ್ತೇವೆ. 
 

67

ಅವರು ಕಾಮನ್‌ಮ್ಯಾನ್‌ನನ್ನು ಎದ್ದೇಳು ಎದ್ದೇಳು ಅಂತ ಸಣ್ಣದಾಗಿ ಚಿವುಟುವ ಕೆಲಸ ಮಾಡುತ್ತಾರೆ. ಈ ಚಿತ್ರಕ್ಕಾಗಿ ಎಕ್ಸೈಟ್ ಆಗಿ ಕಾಯುತ್ತಿದ್ದೇನೆ’ ಎಂದು ಹೇಳಿದರು. ದುನಿಯಾ ವಿಜಿ ಅವರು, ‘ನಾವೆಲ್ಲಾ ಉಪೇಂದ್ರರನ್ನು ಫಾಲೋ ಮಾಡಿಕೊಂಡು ಬಂದವರು. ಹೊಸಬರಿಗೆ ಕನ್ನಡ ಇಂಡಸ್ಟ್ರಿಗೆ ಅವರು ಗಾಡ್‌ಫಾದರ್‌ ಇದ್ದಂತೆ. ನಿರ್ದೇಶಕನಾಗಿ, ಒಬ್ಬ ಅಭಿಮಾನಿಯಾಗಿ ನಾನು ಯುಐಗೆ ಕಾಯುತ್ತಿದ್ದೇನೆ’ ಎಂದು ಹೇಳಿದರು. 

77

ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ನವೀನ್‌ ಮನೋಹರನ್‌, ಕೆ.ಪಿ. ಶ್ರೀಕಾಂತ್, ಲಹರಿ ವೇಲು, ರೀಷ್ಮಾ ನಾಣಯ್ಯ ಇದ್ದರು. ‘ಯುಐ ಸಿನಿಮಾ ಬಿಡುಗಡೆಗೂ ಮುನ್ನವೇ 75000ಕ್ಕೂ ಟಿಕೆಟ್ ಮಾರಾಟವಾಗಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಕನ್ನಡಿಗರಿಗೆ ಧನ್ಯವಾದಗಳು. ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಎಲ್ಲರೂ ಬಂದು ಸಿನಿಮಾ ನೋಡಿ’ ಎಂದು ಲಹರಿ ವೇಲು ಹೇಳಿದರು.

Read more Photos on
click me!

Recommended Stories