ಸ್ಯಾಂಡಲ್ ವುಡ್ ಜನಪ್ರಿಯ ನಟಿ ಹರ್ಷಿಕಾ ಪೂಣಚ್ಚ (Harshika Poonacha ) ಮತ್ತು ಭುವನ್ ಪೊನ್ನಣ್ಣ ಅಕ್ಟೋಬರ್ ತಿಂಗಳಲ್ಲಿ ತಮ್ಮ ಚೊಚ್ಚಲ ಮಗುವನ್ನ ಬರಮಾಡಿಕೊಂಡಿದ್ದರು. ಸದ್ಯ ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ ಈ ಜೋಡಿ.
ತಮ್ಮ ಮೆಟರ್ನಿಟಿ ಶೂಟ್ (maternity photoshoot) ಮೂಲಕ ಹರ್ಷಿಕಾ ಸುದ್ದಿಯಾಗಿದ್ದರು.ರಾಜ ರವಿವರ್ಮನ ಪೈಂಟಿಂಗ್ ನಂತೆ ಸುಂದರವಾಗಿ ಸೀರೆಯುಟ್ಟು, ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಕನ್ನಡಿಗರ ಗಮನ ಸೆಳೆದಿತ್ತು. ಇದರ ಜೊತೆ ಹಲವು ರೀತಿಯಲ್ಲಿ ನಟಿ ಪ್ರೆಗ್ನೆನ್ಸಿ ಫೋಟೊ ಶೂಟ್ ಮಾಡಿಸಿದ್ದರು.
ಮಗುವಾದ ಬಳಿಕ ಮಗುವಿಗೆ ಗ್ರ್ಯಾಂಡ್ ವೆಲ್ ಕಂ ನೀಡಿದ ಮುದ್ದಾ ವಿಡಿಯೋವನ್ನು ಸಹ ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ಮುದ್ದಿನ ಮಗಳನ್ನು ಚೈಕಾರ್ತಿ ಎಂದು ಸಹ ಕರೆದಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಡೆಲಿವರಿ ನಂತರ ಹರ್ಷಿಕಾ ತಮ್ಮ ಸೋಶಿಯಲ್ ಮಿಡಿಯಾದಲ್ಲಿ(social media) ಮಗುವಿನ ವಿವಿಧ ರೀತಿಯ ಆರೈಕೆಯ ಕುರಿತಾದ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಜನರಿಗೆ ಅಗತ್ಯವಾದ ಮಾಹಿತಿಗಳನ್ನು ತಿಳಿಸುತ್ತಿದ್ದರು. ಇದೀಗ ಫೋಟೊ ಶೂಟ್ ಮಾಡಿಸಿದ್ದಾರೆ.
ಹೌದು ಮಗುವಾದ ಬಳಿಕ ಹರ್ಷಿಕಾ ಮೊದಲ ಬಾರಿಗೆ ಫೋಟೊ ಶೂಟ್ (photo shoot) ಮಾಡಿಸಿಕೊಂಡಿದ್ದು, ನೀಲಿ ಬಣ್ಣದ ಗೌನ್ ಜೊತೆಗೆ ಡೈಮಂಟ್ ನೆಕ್ಲೆಸ್ ಧರಿಸಿದ್ದು, ಅಮ್ಮನಾದ ಬಳಿಕ ನಟಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ತಮ್ಮ ಫೋಟೊ ಜೊತೆ ಹರ್ಷಿಕಾ ಮೆಸೇಜ್ ಕೂಡ ಹಂಚಿಕೊಂಡಿದ್ದಾರೆ.
ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಫೋಟೊಗಳ ಜೊತೆಗೆ ನಟಿ ಪ್ರಸವಾನಂತರದ ಫೋಟೋಶೂಟ್. ಡೆಲಿವರಿ ನಂತರದ ನನ್ನ ಮೊದಲ ಶೂಟ್, ನನ್ನನ್ನು, ನನ್ನ ದೇಹ ಮತ್ತು ನನ್ನ ಹೊಸ ತಾಯಿತನವನ್ನು ಅಪ್ಪಿಕೊಳ್ಳುತಿದ್ದೇನೆ. ನಾನು ಇಷ್ಟು ಚೆನ್ನಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಿಸಿದ್ದಕ್ಕೆ ಆಭರಣ ಮಳಿಗೆ, ಡ್ರೆಸ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್ ಗೂ ಥ್ಯಾಂಕ್ಯೂ ಹೇಳಿದ್ದಾರೆ.
ಜೊತೆಗೆ ಎಲ್ಲಾ ಹೊಸ ಅಮ್ಮಂದಿರಿಗೆ ಒಂದು ವಿಶೇಷ ಸಂದೇಶ (message to new mommies), ನಿಮ್ಮ ದೇಹ ಬದಲಾದರೂ, ನಿಮ್ಮ ದೇಹವು ನೋವುಂಟುಮಾಡಿದರೂ, ಅದು ನಿಶ್ಚಲವಾದರೂ, ನೀವು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದರೂ ನೀವು ಸೃಷ್ಟಿಸಿದ ಮಗುವಿನ ಮುಂದೆ ಅದ್ಯಾವುದೂ ದೊಡ್ಡದಲ್ಲ. ಈ ಸಮಯದಲ್ಲಿ ನೀವು ಒಬ್ಬಂಟಿಯಾಗಿಲ್ಲ. ನಾನು ನಿಮ್ಮ ಜೊತೆ ಇದ್ದೇನೆ . ಎಲ್ಲಾ ಮುದ್ದು ಮಕ್ಕಳು ಮತ್ತು ಸುಂದರ ಅಮ್ಮಂದಿರ ಜೊತೆ ನನ್ನ ಪ್ರೀತಿ ಯಾವಾಗಲೂ ಇರುತ್ತೆ ಎಂದಿದ್ದಾರೆ.