ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್, ಭಾರತವೇ ಮೆಚ್ಚಿರುವ ರಾಖಿ ಬಾಯ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಯಶ್ ಮತ್ತು ರಾಧಿಕಾ ಪಂಡಿತ್ ಮಗಳು ಐರಾ 6ನೇ ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸ್ನೇಹಿತರ ಜೊತೆ ಥೀಮ್ ಬರ್ತಡೇ ಪಾರ್ಟಿ ಮಾಡಿದ್ದಾರೆ.
ಮನೆ ಡಿಸೈನ್ ಇರುವ ಕಲರ್ ಕಲರ್ ಕೇಕ್ ಮತ್ತು ವೇದಿಯನ್ನು ಕಲರ್ ಕಲರ್ ಬಲೂನ್‌ಗಳಿಂದ ಅಲಂಕಾರ ಮಾಡಿಸಿ ಐರಾ ಬರ್ತಡೇ ಎಂದು ಬರೆಸಲಾಗಿದೆ.
ಕ್ರೀಮ್ ಜೀನ್ಸ್, ಬ್ಲಾಕ್ ಆಂಡ್ ವೈಟ್ ಟೀ ಶರ್ಟ್ ಆಂಡ್ ರೆಡ್ ಜಾಕೆಟ್‌ನಲ್ಲಿ ಐರಾ ಮಿಂಚಿದ್ದಾಳೆ. ನೀಲಿ ಬಣ್ಣದ ಪುಲ್ ಓವರ್‌ನಲ್ಲಿ ಯಥರ್ವ್ ಕಾಣಿಸಿಕೊಂಡಿದ್ದಾರೆ.
ಇನ್ನೂ ರಾಕಿಂಗ್ ಜೋಡಿ ಲುಕ್ ಕೇಳ್ಬೇಕಾ? ಕೆಂಪು ಬಣ್ಣದ ಮ್ಯಾಕ್ಸಿಯಲ್ಲಿ ರಾಧಿಕಾ ಕಾಣಿಸಿಕೊಂಡರೆ, ಕ್ರೀಮ್ ಜೀನ್ಸ್ ವೈಟ್ ಟೀ-ಶರ್ಟ್ ಹಾಗೂ ಜಾಕೆಟ್‌ನಲ್ಲಿ ಯಶ್ ಮಿಂಚಿದ್ದಾರೆ.
ಯಶ್ ಮಗಳ ಬರ್ತಡೇ ಪಾರ್ಟಿಯಲ್ಲೂ ಟಾಕ್ಸಿ ಲುಕ್ ವೈರಲ್ ಆಗುತ್ತಿದೆ. ನಿಮ್ಮಿಬ್ಬರಿಗೆ ಮದುವೆಯಾಗಿದೆ ಮಗು ಆಗಿದೆ ಅಂದ್ರೆ ಯಾರೂ ನಂಬುವುದಿಲ್ಲ ಅಷ್ಟು ಯಂಗ್ ಆಗಿದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಯಶ್ ತಮ್ಮ ಮಕ್ಕಳ ಬರ್ತಡೇಯನ್ನು ಪ್ರತಿ ವರ್ಷವೂ ಇಷ್ಟೇ ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ಪ್ರತಿ ವರ್ಷವೂ ಒಂದೊಂದು ಥೀಮ್‌ನಲ್ಲಿ ಪಾರ್ಟಿಯನ್ನು ಹಮ್ಮಿಕೊಂಡು ತಮ್ಮ ಸ್ನೇಹಿತರ ಬಳಗದಲ್ಲಿ ಇರುವ ಮಕ್ಕಳನ್ನು ಕರೆಯುತ್ತಾರೆ.