ಸಿನಿಮಾ ಇಂಡಸ್ಟ್ರಿಯಲ್ಲಿ ನಗುವೇ ಇಲ್ಲ, ಬರೀ ಟ್ರಾಫಿಕ್‌ ಜಾಮ್‌: ರವಿಚಂದ್ರನ್‌

Published : Mar 20, 2025, 05:19 PM ISTUpdated : Mar 20, 2025, 05:20 PM IST

ವಾರಕ್ಕೆ 10 ಸಿನಿಮಾ ರಿಲೀಸ್‌ ಆದರೆ ತಿಂಗಳಿಗೆ 40 ಸಿನಿಮಾ, ಟ್ರಾಫಿಕ್‌ ಜಾಮ್‌ ಆಗೋಯ್ತು. ಇವುಗಳ ನಡುವೆ, ಜನ ಆರಿಸ್ಕೋ ಅಂದರೆ ಏನನ್ನು ಆರಿಸ್ತಾರೆ. ಜನ ಸಿನಿಮಾ ನೋಡಲ್ಲ ಅಂತ ಗೋಳಾಡಿದ್ರೆ ಅವರು ತಿರುಗಿಯೂ ನೋಡಲ್ಲ.   

PREV
15
ಸಿನಿಮಾ ಇಂಡಸ್ಟ್ರಿಯಲ್ಲಿ ನಗುವೇ ಇಲ್ಲ, ಬರೀ ಟ್ರಾಫಿಕ್‌ ಜಾಮ್‌: ರವಿಚಂದ್ರನ್‌

‘ಥೇಟರಿಗೆ ಬರಲ್ಲ ಅಂತ ಜನರಿಗೆ ಯಾಕೆ ಬೈತೀರಿ? ಸಿನಿಮಾರಂಗದಲ್ಲೇ ಇರುವ ನೀವು ಎಷ್ಟು ಸಿನಿಮಾ ನೋಡಿದ್ದೀರಿ, ಮೂರು ತಿಂಗಳಿಗೆ 100 ಸಿನಿಮಾ ಬಂದರೆ ಅದರಲ್ಲಿ ನೀವೆಷ್ಟು ಸಿನಿಮಾಕ್ಕೆ ದುಡ್ಡು ಕೊಟ್ಟು ಹೋಗ್ತೀರಿ? 

25

ಇದು ವಾಸ್ತವ. ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ನಗುವೇ ಇಲ್ಲ. ಜನ ಥೇಟರಿಗೆ ಬರ್ತಿಲ್ಲ ಎಂಬ ನೋವೇ ತುಂಬಿಕೊಂಡಿದೆ’. ಇವು ಕ್ರೇಜಿಸ್ಟಾರ್‌ ರವಿಚಂದ್ರನ್‌ ಮಾತುಗಳು.

35

ಪ್ರಮೋದ್‌ ಹಾಗೂ ಪೃಥ್ವಿ ಅಂಬಾರ್‌ ನಟನೆಯ ‘ಭುವನಂ ಗಗನಂ’ ಸಿನಿಮಾದ 25ನೇ ದಿನದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರವಿಚಂದ್ರನ್‌, ‘ಸದ್ಯ ಇಂಡಸ್ಟ್ರಿ ಸ್ಥಿತಿ ಹೀಗಾಗಲು ಸಿನಿಮಾಗಳ ಟ್ರಾಫಿಕ್‌ ಜಾಮ್‌ ಕಾರಣ. 

45

ವಾರಕ್ಕೆ 10 ಸಿನಿಮಾ ರಿಲೀಸ್‌ ಆದರೆ ತಿಂಗಳಿಗೆ 40 ಸಿನಿಮಾ, ಟ್ರಾಫಿಕ್‌ ಜಾಮ್‌ ಆಗೋಯ್ತು. ಇವುಗಳ ನಡುವೆ, ಜನ ಆರಿಸ್ಕೋ ಅಂದರೆ ಏನನ್ನು ಆರಿಸ್ತಾರೆ. ಜನ ಸಿನಿಮಾ ನೋಡಲ್ಲ ಅಂತ ಗೋಳಾಡಿದ್ರೆ ಅವರು ತಿರುಗಿಯೂ ನೋಡಲ್ಲ. ಆದರೆ ಚಿತ್ರ ಚೆನ್ನಾಗಿದ್ರೆ ಅವರು ಕೊಡೋ ಗೆಲುವು ಅಭೂತಪೂರ್ವ. 

55

ಅದರಿಂದಲೇ ನಾನು 40 ವರ್ಷ ಇಂಡಸ್ಟ್ರಿಯಲ್ಲಿ ಉಳಿದುಕೊಂಡಿರುವುದು’ ಎಂದು ಹೇಳಿದ್ದಾರೆ. ಗಿರೀಶ್ ಮೂಲಿಮನಿ ನಿರ್ದೇಶನದ, ಎಂ. ಮುನೇಗೌಡ ನಿರ್ಮಾಣದ ಈ ಚಿತ್ರದಲ್ಲಿ ರೇಚೆಲ್ ಡೇವಿಡ್ ಮತ್ತು ಅಶ್ವಥಿ ನಾಯಕಿಯರಾಗಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories