Published : Mar 19, 2025, 07:51 PM ISTUpdated : Mar 19, 2025, 08:06 PM IST
ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ...
ಸ್ಯಾಂಡಲ್‌ವುಡ್ ನಟಿಯರ ಲಿಸ್ಟ್‌ನಲ್ಲಿ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರಿಗೆ ಒಂದು ಪ್ರಮುಖ ಸ್ಥಾನವಿದೆ. ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣ' ಚಿತ್ರದಲ್ಲಿ ನಟಿ ಶರ್ಮಿಳಾ ಮಾಂಡ್ರೆ ನಟಿಸಿದ್ದಾರೆ.
29
ಜೊತೆಗೆ, ಸಜನಿ, ಮಸ್ತ್ ಮಜಾ ಮಾಡಿ, ಸ್ವಯಂವರ, ಮುಮ್ತಾಜ್ ಹಾಗೂ ಕರಿ ಚಿರತೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಶರ್ಮಿಳಾ ಮಾಂಡ್ರೆ.
39
ಇಂಥ ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ.
49
ಕಳೆದ ವರ್ಷ ಸ್ಥಗಿತಗೊಂಡಿದ್ದ ಡೆವಿಲ್ ಚಿತ್ರೀಕರಣ ಈಗ ಮತ್ತೆ ಮುಂದುವರೆಯುತ್ತಿದೆ. ಕನ್ನಡ ಮಾತ್ರವಲ್ಲ, ತಮಿಳು ಹಾಗೂ ತೆಲುಗಿನಲ್ಲಿ ಕೂಡ ನಟಿ ಶರ್ಮಿಳಾ ಮಾಂಡ್ರೆ ಅವರು ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಅವರು ನಟಿ ಮಾತ್ರವಲ್ಲ ನಿರ್ಮಾಪಕಿ ಕೂಡ ಹೌದು.
59
ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ದರ್ಶನ್ ನಟನೆಯ 'ಡೆವಿಲ್' ಚಿತ್ರ. ಸದ್ಯ ನಟ ದರ್ಶನ್ ಅವರು ಬೆನ್ನುನೋವಿನಿಂದ ನರಳುತ್ತಿರುವ ಕಾರಣಕ್ಕೆ ದರ್ಶನ್ ಆಕ್ಷನ್ ಸೀನ್‌ನಲ್ಲಿ ಭಾಗಿಯಾಗುತ್ತಿಲ್ಲ.
69
ಆದರೆ ಟಾಕಿ ಪೋರ್ಶನ್‌ನಲ್ಲಿ ನಟಿಸುತ್ತಿದ್ದು ಶೂಟಿಂಗ್ ಮುಂದುವರೆಯುತ್ತಿದೆ. ಈ ಚಿತ್ರದಲ್ಲಿ ನಟಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಪ್ರಮುಖ ಪಾತ್ರವೊಂದರಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕೂಡ ಕಾಣಿಸಿಕೊಂಡಿದ್ದಾರೆ.
79
ಸದ್ಯ ಶರ್ಮಿಳಾ ಮಾಂಡ್ರೆ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ. ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ 'ದಿ ಡೆವಿಲ್' ಚಿತ್ರವು ದರ್ಶನ್ ಕೇಸ್ ಕಾರಣಕ್ಕೆ ನಿಂತುಹೋಗಿತ್ತು. ಆದರೆ ಈಗ ನಟ ದರ್ಶನ್ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
89
ಹೀಗಾಗಿ ಪುನಃ ಚಿತ್ರೀಕರಣ ಮುಂದುವರೆಯುತ್ತಿದೆ. ಇದೀಗ ಈ ಚಿತ್ರದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು ಸಾಕಷ್ಟು ಕತೂಹಲಕ್ಕೆ ಕಾರಣವಾಗಿದೆ. ಶರ್ಮಿಳಾ ಯಾವ ಪಾತ್ರದಲ್ಲಿ ನಟಿಸಿರಬಹುದು?
99
ಗ್ಲಾಮರಸ್ ಪಾತ್ರ ಆಗಿರಬಹುದೇ ಅಥವಾ ಬೇರೆ ಏನಾದ್ರೂ? ಕುತೂಹಲ ಹಲವರಲ್ಲಿ ಮನೆಮಾಡಿದೆ. ಈ ವರ್ಷ ಬಿಡುಗಡೆ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಚಿತ್ರದ ಮೂಲಕ ಮತ್ತೆ ಶರ್ಮಿಳಾ ಮಾಂಡ್ರೆ ಕನ್ನಡಿಗರಿಗೆ 'ದರ್ಶನ' ನೀಡುತ್ತಿದ್ದಾರೆ.