Published : Mar 20, 2025, 05:00 PM ISTUpdated : Mar 20, 2025, 05:03 PM IST
ಮನದ ಕಡಲು ಸಿನಿಮಾದ ಟ್ರೇಲರ್ ಅನ್ನು ಯಶ್ ಕೈಯಲ್ಲಿ ಬಿಡುಗಡೆ ಮಾಡಿಸಬೇಕು ಎಂಬುದು ಕೃಷ್ಣಪ್ಪ ಅವರ ಆಸೆ. ಯಶ್ ಅವರೂ ಈ ಕಾರಣಕ್ಕೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
‘ಬಹಳ ಕಾಲದ ನಂತರ ಯಶ್ ಸಿನಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರು ನಮ್ಮ ಮನದ ಕಡಲು ಸಿನಿಮಾ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ನಿರ್ಮಾಪಕ ಇ ಕೃಷ್ಣಪ್ಪ’.
27
ಹೀಗೆಂದವರು ನಿರ್ದೇಶಕ ಯೋಗರಾಜ ಭಟ್. ಮಾ.23ಕ್ಕೆ ‘ಮನದ ಕಡಲು’ ಸಿನಿಮಾದ ಟ್ರೇಲರ್ ಅನ್ನು ಬೆಂಗಳೂರಿನ ಲುಲ್ ಮಾಲ್‌ನಲ್ಲಿ ಸಂಜೆ ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡುತ್ತಿದ್ದಾರೆ.
37
ಈ ಕುರಿತು ಮಾತನಾಡಿದ ಯೋಗರಾಜ ಭಟ್, ನಮ್ಮ ನಿರ್ಮಾಪಕರಾದ ಇ ಕೃಷ್ಣಪ್ಪ ಅವರು ಯಶ್ ಹಾಗೂ ರಾಧಿಕಾ ಪಂಡಿತ್ ಬದುಕಿಗೆ ತಿರುವು ನೀಡಿದ ಮೊಗ್ಗಿನ ಮನಸ್ಸು ನಿರ್ಮಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರಿಗೆ ಯಶ್ ಜೊತೆ ಆಪ್ತ ಒಡನಾಟ ಇದೆ.
47
ಇದೀಗ ತನ್ನ ಮಹತ್ವಾಕಾಂಕ್ಷೆಯ ಮನದ ಕಡಲು ಸಿನಿಮಾದ ಟ್ರೇಲರ್ ಅನ್ನು ಯಶ್ ಕೈಯಲ್ಲಿ ಬಿಡುಗಡೆ ಮಾಡಿಸಬೇಕು ಎಂಬುದು ಕೃಷ್ಣಪ್ಪ ಅವರ ಆಸೆ. ಯಶ್ ಅವರೂ ಈ ಕಾರಣಕ್ಕೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
57
‘ಮನದ ಕಡಲು ಟ್ರೇಲರ್ ಬಿಡುಗಡೆಯಲ್ಲಿ ಸಿನಿಮಾ ಪ್ರೇಮಿಗಳಿಗೆ ಸರ್ಪ್ರೈಸ್ ಇದೆ. ಅದೊಂದು ಈವೆಂಟ್‌ಗಿಂತ ಹೆಚ್ಚಾಗಿ ಕಲರ್‌ಫುಲ್ ಮ್ಯೂಸಿಕಲ್ ನೈಟ್ ಆಗಿ ಹೊರಹೊಮ್ಮಲಿದೆ. ಈ ಟ್ರೇಲರ್ ಲಾಂಚ್ ಕಾರ್ಯಕ್ರಮವೇ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಕೂಡ ಆಗಿದೆ’ ಎಂದು ಯೋಗರಾಜ ಭಟ್ ಹೇಳಿದ್ದಾರೆ.
67
ಇ. ಕೃಷ್ಣಪ್ಪ ಮತ್ತು ಜಿ. ಗಂಗಾಧರ್ ನಿರ್ಮಾಣದ ಈ ಸಿನಿಮಾದಲ್ಲಿ ಸುಮುಖ್, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್ ಮುಖ್ಯ ಪಾತ್ರದಲ್ಲಿದ್ದಾರೆ. ಮಾ.28ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.
77
ಪ್ರವಾಸ ಹೊರಟಿರುವ ಭಟ್ರು: ಮನದ ಕಡಲು ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ಕಟಿಬದ್ಧರಾಗಿರುವ ಯೋಗರಾಜ್ ಭಟ್ರು ತಮ್ಮ ತಂಡದ ಜೊತೆಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ಮಂಡ್ಯ, ಮೈಸೂರಿನಲ್ಲಿ ಕಾರ್ಯಕ್ರಮ ಮುಗಿಸಿದ್ದಾರೆ.