ಪಾತ್ರದ ಬಗ್ಗೆ ಚೂಚಿಯಾಗಿರೋದು, ಯಾವಾಗ್ಲೂ ಸೀರೆ, ಅಥವಾ ಸಿಂಪಲ್ ಡ್ರೆಸ್ ಮಾಡ್ಕೊಂಡು ಹೆಚ್ಚು ಮೇಕಪ್ ಹಾಕದೆ ಕಾಣಿಸಿಕೊಳ್ಳುವ ಅಂಕಿತಾ ಅಮರ್ ಅವರನ್ನು ನೋಡಿದಾಗ ನಟಿ ಸಾಯಿ ಪಲ್ಲವಿ ನೆನಪಾಗುತ್ತೆ. ಬೋಲ್ಡ್ ಸೀನ್ ಗಳಲ್ಲಿ ಸಾಯಿ ಪಲ್ಲವಿ (Sai Pallavi) ಯಾವತ್ತೂ ಕಾಣಿಸಿಕೊಂಡವರೇ ಅಲ್ಲ, ಜೊತೆಗೆ ಯಾವಾಗ್ಲೂ ಸೀರೆಯಲ್ಲಿ, ಸಿಂಪಲ್ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಈ ನಟಿ ತಮ್ಮ ನಟನೆಯ ಮೂಲಕವೇ ದೇಶಾದ್ಯಂತ ಜನರ ಮನಗೆದ್ದಿದ್ದಾರೆ. ಇದೀಗ ಅಂಕಿತಾ ಅಮರ್ ಕೂಡ ಅದೇ ಹಾದಿಯಲ್ಲಿದ್ದು, ತಮ್ಮ ನಟನೆ ಮೂಲಕ ಈಗಾಗನೆ ಜನಮನ ಗೆದ್ದಿದ್ದು, ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ.