ರಕ್ಷಿತ್ ಶೆಟ್ಟಿ ಮತ್ತು ನನ್ನ ನಡುವೆ ಮ್ಯೂಸಿಕ್ ಸೀಕ್ರೆಟ್‌ಗಳಿವೆ: ಅಜನೀಶ್‌ ಲೋಕನಾಥ್

Published : May 11, 2026, 07:48 AM IST

ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಅವರು ನಟ ರಕ್ಷಿತ್‌ ಶೆಟ್ಟಿ ಜೊತೆಗಿನ ತಮ್ಮ ವಿಶಿಷ್ಟ ಸಂಗೀತ ಶೈಲಿಯ ರಹಸ್ಯವನ್ನು ಹಂಚಿಕೊಂಡಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾದಲ್ಲಿ ತಾವು ಕೆಲಸ ಮಾಡಿದ ವಿಶಿಷ್ಟ ರೀತಿಯನ್ನು ಅವರು ನೆನಪಿಸಿಕೊಂಡಿದ್ದಾರೆ.

PREV
13
ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌

ಬೆಂಗಳೂರಿನಲ್ಲಿ ಬಹತ್‌ ಲೈವ್‌ ಕಾನ್ಸರ್ಟ್‌ಗೆ ಸಜ್ಜಾಗುತ್ತಿರುವ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ತನ್ನ ಹಾಗೂ ರಕ್ಷಿತ್‌ ಶೆಟ್ಟಿ ನಡುವೆ ಕೆಲವು ಮ್ಯೂಸಿಕ್‌ ಸೀಕ್ರೆಟ್‌ಗಳಿರುವುದನ್ನು ಹಂಚಿಕೊಂಡಿದ್ದಾರೆ. ಮೇ 16ರಂದು ಬೆಂಗಳೂರಿನಲ್ಲಿ ಅಜನೀಶ್‌ ಲೈವ್‌ ಕಾನ್ಸರ್ಟ್‌ ನಡೆಯಲಿದೆ.

23
ಸಂಗೀತ ಸಂಯೋಜನೆ

‘ರಕ್ಷಿತ್ ಶೆಟ್ಟಿ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುವಾಗ ಆ ವಿನ್ಯಾಸವೇ ಬೇರೆ ರೀತಿ ಇರುತ್ತದೆ. ಅದು ರಕ್ಷಿತ್‌ಗೆ ಮಾತ್ರ ಸೂಟ್‌ ಆಗುವ ಹಾಗಿರುತ್ತದೆ. ಅಜು, ನಮ್ ಸ್ಟೈಲ್‌ನಲ್ಲಿ ಮ್ಯೂಸಿಕ್‌ ಮಾಡೋಣ ಅಂತ ರಕ್ಷಿತ್‌ ಹೇಳಿದಾಕ್ಷಣ ಅವರೇನು ಬಯಸುತ್ತಿದ್ದಾರೆ ಅನ್ನೋದು ನನಗೆ ಗೊತ್ತಾಗುತ್ತದೆ. ಆದರೆ ಈ ಸೀಕ್ರೆಟ್‌ ಬೇರೆ ಯಾರಿಗೂ ಅರ್ಥ ಆಗಲ್ಲ. ಈ ಅಂಡರ್‌ಸ್ಟ್ಯಾಂಡಿಂಗ್‌ ಅನ್ನು ಮಾತಿನಲ್ಲಿ ಹೇಳುವುದು ಕಷ್ಟ’ ಎಂದು ಅಜನೀಶ್‌ ಹೇಳಿದ್ದಾರೆ.

33
ರಿಚರ್ಡ್‌ ಆ್ಯಂಟನಿ

ಈ ವೇಳೆ ರಕ್ಷಿತ್‌ ಶೆಟ್ಟಿ ಅವರ ‘ರಿಚರ್ಡ್‌ ಆ್ಯಂಟನಿ’ ಸಿನಿಮಾದ ಮೂಲ ‘ಉಳಿದವರು ಕಂಡಂತೆ’ ಗೆ ರಕ್ಷಿತ್‌ ಜೊತೆ ಸಂಗೀತ ಸಂಯೋಜನೆ ಮಾಡಿದ ವಿಶಿಷ್ಟತೆಯನ್ನು ನೆನಪಿಸಿಕೊಂಡ ಅವರು, ‘ಆಗ ನಾವು ಸೆಕೆಂಡ್ಸ್ ಲೆಕ್ಕದಲ್ಲಿ ಕೆಲಸ ಮಾಡಿದ್ದೆವು. 15 ಸೆಕೆಂಡ್‌ಗಳಿಗೆ ಅವರು ವಿಡಿಯೋ ಎಡಿಟ್ ಮಾಡಿಕೊಟ್ಟರೆ, ಆ 15 ಸೆಕೆಂಡ್‌ಗಳಿಗೆ ನಾನು ಮ್ಯೂಸಿಕ್ ಮಾಡಿ ಅದನ್ನು ಮುಂದಿನ 15 ಸೆಕೆಂಡ್‌ಗಳವರೆಗೆ ಮುಂದುವರಿಸುತ್ತಿದ್ದೆ. ಅವರು 30 ನಿಮಿಷಕ್ಕೆ ವಿಡಿಯೋ ಮಾಡಿಕೊಟ್ಟರೆ, ನಾನು 45 ಸೆಕೆಂಡ್‌ಗಳಿಗೆ ಮಾಡುತ್ತಿದ್ದೆ. ಅವರು 45 ಸೆಕೆಂಡ್‌ಗೆ ಮಾಡಿದರೆ, ನಾನು ಒಂದು ನಿಮಿಷಕ್ಕೆ ಎಡಿಟ್ ಮಾಡುತ್ತಿದ್ದೆ. ಈ ರೀತಿ ಕೆಲಸ ಮಾಡಿದ್ದೆವು. ಇದು ನಮ್ಮ ನಡುವೆ ಹುಟ್ಟಿಕೊಂಡಿರೋ ಸ್ಟೈಲ್‌. ಬೇರೆ ಯಾರೊಂದಿಗೂ ಸೆಟ್‌ ಆಗೋದಿಲ್ಲ’ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories