ಕನ್ನಡದಲ್ಲಿ ಮೊದಲ ಬಾರಿಗೆ ಹ್ಯಾಂಗ್ ಮ್ಯಾನ್ ಕಥೆ: ಮಾದೇವ ಹೊಸ ಪ್ರಯತ್ನ ಎಂದ ಮರಿ ಟೈಗರ್

Published : Jun 05, 2025, 09:02 PM IST

ಮಾಲಾಶ್ರೀ ಅವರ ಜೊತೆಗೆ ನನ್ನ ದೃಶ್ಯಗಳಿಲ್ಲ. ಆದರೆ, ವಿಭಿನ್ನವಾದ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಅವರಿಗೊಂದು ಅದ್ಭುತವಾದ ಡೈಲಾಗ್‍ ಇದೆ ಎಂದರು ವಿನೋದ್‌ ಪ್ರಭಾಕರ್‌.

PREV
16

ಆರ್‌ .ಕೇಶವ ದೇವಸಂದ್ರ ನಿರ್ಮಾಣ, ನವೀನ್‌ ರೆಡ್ಡಿ ಬಿ ನಿರ್ದೇಶನ, ಸೋನಾಲ್‌ ಮೊಂಥೆರೊ ನಾಯಕಿಯಾಗಿರುವ ವಿನೋದ್‌ ಪ್ರಭಾಕರ್‌ ನಟನೆಯ ‘ಮಾದೇವ’ ಚಿತ್ರ ಇದೇ ಜೂನ್‌.6ಕ್ಕೆ ತೆರೆಗೆ ಬರಲಿದೆ. ಶ್ರೀನಗರ ಕಿಟ್ಟಿ, ಮಾಲಾಶ್ರೀ, ಶ್ರುತಿ, ಅಚ್ಯುತ್‌ ಕುಮಾರ್‌, ಕಾಕ್ರೋಜ್‌ ಸುಧೀ, ಬಲರಾಜವಾಡಿ ತಾರಾಬಳಗದಲ್ಲಿದ್ದಾರೆ.

26

‘1980ರ ಕಾಲಘಟ್ಟದಲ್ಲಿ ನಡೆಯುವ ಕತೆ. ನಾನು ಈ ಚಿತ್ರದಲ್ಲಿ ಹ್ಯಾಂಗ್ ಮ್ಯಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನಗೆ ತಿಳಿದಿರುವಂತೆ ಕನ್ನಡದಲ್ಲಿ ಹ್ಯಾಂಗ್‌ ಮ್ಯಾನ್‌ ಕುರಿತ ಕತೆ ಬಂದಿಲ್ಲ. ನಾನು ಈ ಚಿತ್ರದಲ್ಲಿ ನಟಿಸುವಾಗ ನಮ್ಮ ತಂದೆ ಪ್ರಭಾಕರ್ ಅವರ ಅಭಿನಯದ ‘ಜಿದ್ದು’ ಹಾಗೂ ‘ಕರುಳಿನ ಕೂಗು’ ಚಿತ್ರಗಳು ನೆನಪಾದವು’ ಎಂದರು ವಿನೋದ್‌ ಪ್ರಭಾಕರ್‌.

36

ಮಾಲಾಶ್ರೀ ಅವರ ಜೊತೆಗೆ ನನ್ನ ದೃಶ್ಯಗಳಿಲ್ಲ. ಆದರೆ, ವಿಭಿನ್ನವಾದ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಅವರಿಗೊಂದು ಅದ್ಭುತವಾದ ಡೈಲಾಗ್‍ ಇದೆ. ಸೋನಾಲ್, ಶ್ರೀನಗರ ಕಿಟ್ಟಿ, ಶೃತಿ ಅವರೂ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಈ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತೆ ಅಂತಾ ಭರವಸೆ ವ್ಯಕ್ತಪಡಿಸಿದರು.

46

ರಾಬರ್ಟ್ ಚಿತ್ರದ ನಂತರ ನಾನು ಹಾಗೂ ವಿನೋದ್ ಪ್ರಭಾಕರ್ ಅವರು ಈ ಚಿತ್ರದಲ್ಲಿ ನಟಿಸಿದ್ದೇವೆ. ಹಿರಿಯ ಕಲಾವಿದರ ಜೊತೆಗೆ ನಟಿಸಿದ್ದು ಖುಷಿಯಾಗಿದೆ. ನನ್ನ ಪಾತ್ರ ಕೂಡಾ ಚೆನ್ನಾಗಿದೆ ಎಂದರು ನಾಯಕಿ ಸೋನಾಲ್ ಮೊಂತೆರೊ.

56

ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, 'ಈ ಚಿತ್ರ ನೋಡಿ ಹೊರಬಂದ ಮೇಲೆ, ವಿನೋದ್‍ ಪ್ರಭಾಕರ್ ಅವರೊಂದಿಗೆ ಶ್ರುತಿ ಅವರು ಸಹ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುತ್ತಾರೆ. ಅವರ ಪಾತ್ರ ಭಯ ಹುಟ್ಟಿಸುತ್ತೆ. ಅವರು ಎಲ್ಲರಿಗೂ ಇಷ್ಟವಾಗುತ್ತಾರೆ ಎಂಬ ನಂಬಿಕೆ ಇದೆ. ನಮಗೆ ಒಳ್ಳೆಯ ಪಾತ್ರಧಾರಿಗಳು ಸಿಕ್ಕರು.

66

ಅವರು ಅಭಿನಯಿಸುತ್ತಿದ್ದಾಗ ಕರೆಕ್ಷನ್‍ ಹೇಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ವಿನೋದ್‍ ಪ್ರಭಾಕರ್ ಮೊದಲ ಶಾಟ್‍ನಲ್ಲೇ ಅದ್ಭುತವಾದ ಅಭಿನಯ ನೀಡಿದರು. ಇದೊಂದು ಎಮೋಷನಲ್‍ ಜರ್ನಿ. ಚಿತ್ರ ವೀಕ್ಷಿಸಿ ಪ್ರೇಕ್ಷಕರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ ಎಂಬ ನಂಬಿಕೆ ಇದೆ' ಎಂದರು.

Read more Photos on
click me!

Recommended Stories